ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಗರು’ ಟೀಸರ್ ಬಿಡುಗಡೆಯಾಗಿದೆ.
ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಸಿನಿಮಾದಲ್ಲಿ ಪೊಲೀಸ್ ಲುಕ್ ನಲ್ಲಿ ಖಡಕ್ ಆಗಿ ಕಾಣಿಸಿದ್ದಾರೆ ಶಿವಣ್ಣ.
ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಕೆಂಡಸಂಪಿಗೆ ಹುಡುಗಿ ಮಾನ್ವಿತ ಹಾಗೂ ಭಾವನ ಅಭಿನಯಿಸಿದ್ದಾರೆ. ಎದುರಾಳಿಗಳ ಮೇಲೆ ಎಗರೆಗರಿ ಬೀಳೋ ಶಿವಣ್ಣ ಅಭಿಮಾನಿಗಳಿಗೆ ಖುಷಿ ಕೊಡೋದು ಪಕ್ಕಾ ಅಂತಿದೆ ಟೀಸರ್.
ಯಾವುದಕ್ಕೂ ನೀವಿನ್ನೂ ನೋಡಿಲ್ಲ ಅಂತಾದ್ರೆ ನೋಡಿ….