ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!

Date:

ಈ ನಶ್ವರ ಜಗತ್ತಿನಲ್ಲಿ ಎಲ್ಲ ಜೀವಿ ಹಾಗೂ ವಸ್ತುಗಳಿಗೆ ಅಂತ್ಯವಿದೆ. ಅದರಲ್ಲೂ ಜೀವಿಗಳಿಗೆ ಸಾವು ಬದುಕಿನ ಅಂತ್ಯ ಎಂದು ಹೇಳುತ್ತೇವೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ನಮ್ಮ ಪ್ರೀತಿ ಪಾತ್ರರು ನಮ್ಮಿಂದ ಮರೆಯಾಗಿ ದುಃಖಕ್ಕೆ ಎಡೆ ಮಾಡಿಕೊಡುತ್ತಾರೆ. ಅವರು ಹೋದ ನಂತರ ನಮಗೆ ಒಂಟಿತನ ಕಾಡುತ್ತದೆ. ಅವರ ಆಡಿದ ಮಾತುಗಳು, ಅವರ ಜತೆ ನಡೆಸಿದ ಸಂಭಾಷಣೆ ಹೀಗೆ ಎಲ್ಲವೂ ನಮ್ಮನ್ನು ಕಾಡುತ್ತವೆ. ಆದರೆ ಸತ್ತ ವ್ಯಕ್ತಿಗಳ ಜತೆ ನಾವು ಸಂಭಾಷಣೆ ನಡೆಸುವ ಹಾಗಿದ್ದರೆ? ಇದೊಂದು ಕಾಲ್ಪನಿಕ ಕತೆಯಂತೆ ನಿಮಗೆ ಗೋಚರವಾಗಬಹುದು. ಆದರೆ, ಇದನ್ನು ನಿಜವಾಗಿಸುವ ಕಾಲ ಸನ್ನಿಹಿತವಾಗಿದೆ ಎಂದರೆ ನೀವು ನಂಬಲೇ ಬೇಕು.
ಯೆಸ್!! ನಿಮ್ಮ ಪ್ರೀತಿ ಪಾತ್ರರು ಈ ಲೋಕದಿಂದ ಮರೆಯಾದ ನಂತರವೂ ಅವರ ಜತೆ ಮಾತನಾಡುವ ತಂತ್ರಜ್ಞಾನವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಮೂಲದ ವೈದ್ಯ ಡಾ. ಮಿಚಿಯೋ ಕಾಕು ಎಂಬುವವರು `ವರ್ಚೂಯಲ್ ರಿಯಾಲಿಟಿ’ ಎಂಬ ಹೊಸ ಕಂಪ್ಯೂಟರ್ ಸಾಫ್ಟ್ ವೇರ್ ಕಂಡು ಹಿಡಿದಿದ್ದು, ಆ ಸಾಫ್ಟ್ ವೇರ್‍ನಲ್ಲಿರುವ ವರ್ಚೂಯಲ್ ಅವತಾರ್‍ಗಳ ಮೂಲಕ ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಅವರ ನೆನಪುಗಳನ್ನು ಅಪ್‍ಲೋಡ್ ಮಾಡಬಹುದಾಗಿದೆ. ಹೀಗಾಗಿ ವ್ಯಕ್ತಿಗಳು ಸತ್ತ ನಂತರವೂ ಅವರಂತೆಯೇ ಈ ಅವತಾರ್‍ಗಳು ನಿಮ್ಮ ಜತೆ ಸಂವಹನ ಮಾಡುವುದರಿಂದ ಒಂಟಿತನದ ಅನುಭವ ನಿಮ್ಮನ್ನು ಕಾಡದು.
ಕೇವಲ ವ್ಯಕ್ತಿಗಳ ಜತೆ ಮಾತನಾಡಿದರೆ ಸಾಲದು ಅವರು ನಮ್ಮ ಕಣ್ಣಮುಂದೆಯೇ ಇರಬೇಕು ಎಂದು ಇಚ್ಛಿಸುವವರಿಗೂ ಡಾ. ಕಾಕು ಪರಿಹಾರ ದೊರಕಿಸಿಕೊಟ್ಟಿದ್ದು, ವ್ಯಕ್ತಿಯ ಬದುಕಿದ್ದಾಗ ಹೋಲುವಂತಹ ಚಿತ್ರವನ್ನು ಕಂಪ್ಯೂಟರ್‍ನಲ್ಲಿ ಚಿತ್ರಿಸಿ ಆನಂತರ ಹೋಲೋಗ್ರಾಂ ತಂತ್ರಜ್ಞಾನದಿಂದ ಪ್ರೊಜೆಕ್ಟರ್‍ನಲ್ಲಿ ಪರದೆಯ ಮೂಲಕ ಬರುವ ಚಿತ್ರಗಳಂತೆ ನಮ್ಮ ಕಣ್ಣ ಮುಂದೆ ವ್ಯಕ್ತಿಗಳನ್ನು ಕಣ್ಣ ಮುಂದೆ ತರಬಹುದಂತೆ. ಹೀಗಾಗಿ ವ್ಯಕ್ತಿಗಳು ಸತ್ತ ನಂತರವೂ ಅವರಂತೆಯೇ ಹೋಲುವ, ಅವರಂತೆಯೇ ಸಂಭಾಷಣೆ ನಡೆಸುವ ಈ ಅವತಾರ್‍ಗಳು ನಿಮ್ಮ ಕಣ್ಣ ಮುಂದೆ ಹಾಜರ್!!
ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಿರುವ ಡಾ. ಕಾಕ ಅವರ ಪ್ರಕಾರ `ನಾವು ಯೋಚಿಸುವ ಕ್ರಮಗಳು ಹಾಗೂ ನಮ್ಮ ಮಿದುಳನ್ನು ಬಳಸಿಕೊಳ್ಳುವ ಕ್ರಮಗಳು ಇನ್ನು ಮುಂದಿನ 50-100 ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಾಗಿ ಹೋಗುತ್ತವೆ ಎಂದು ತಿಳಿಸಿದ್ದಾರೆ.
ಇವರು ಬರೆದ ಪುಸ್ತಕ `ದಿ ಫ್ಯೂಚರ್ ಆಫ್ ಮೈಂಡ್’ನಲ್ಲಿ ದಾಖಲಿಸಿದ ಸಿದ್ಧಾಂತಗಳ ಪ್ರಕಾರ, ಮುಂದಿನ ಯುಗದ ಮಿದುಳುಗಳು ನಾವು ಅಂದುಕೊಂಡಂತೆ ಇರುವುದಿಲ್ಲ ಎಂದು ಹೇಳಿದ್ದಾರೆ. ನಾವು ಅಂದುಕೊಳ್ಳುವ ಟೆಲಿಪಥಿಯಿಂದ ಹಿಡಿದು ಯಾವುದೇ ಪ್ರೋಗ್ರಾಂಗಳನ್ನು ನಿಯಂತ್ರಿಸುವ ಶಕ್ತಿಗಳು ನಮ್ಮ ಮನಸಿನಲ್ಲಿಯೇ ಇರುತ್ತವೆ ಎಂದು ಉಲ್ಲೇಖಿಸಿದ್ದಾರೆ.
ಕೆಲವೊಮ್ಮೆ ಇವರ ಸಿದ್ಧಾಂತಗಳು ಕೇವಲ ವಿಜ್ಞಾನದ ಕಾಲ್ಪನಿಕ ಪುಸ್ತಕಗಳಂತೆ ಕಂಡು ಬಂದರೂ ಇವರು ನಮಗೆ ಹೇಳುವ ಪ್ರಕಾರ ಇಂತಹ ತಂತ್ರಜ್ಞಾನದ ಅಭಿವೃದ್ಧಿಗಾಗಿ ಸಾಕಷ್ಟು ವರ್ಷಗಳು ಬೇಕಾಗಿರದೇ ಇನ್ನು ಮುಂದಿನ ಕೆಲವೇ ಕೆಲವು ದಶಕಗಳಲ್ಲಿ ಬರಬಹುದು ಎಂದು ಹೇಳಿದ್ದಾರೆ.
ಒಂದು ಸಿನಿಮಾದಲ್ಲಿ ಹಿಂದಿನ ಕತೆಗಳನ್ನು ನೆನಪಿಸಿಕೊಳ್ಳುವ ಕತೆಗಳಂತೆ ಇನ್ನುಕೆಲವೇ ವರ್ಷಗಳಲ್ಲಿ ವ್ಯಕ್ತಿಗಳು ನಮ್ಮಿಂದ ದೂರವಾದರೂ ಒಂದು ಚಿಕ್ಕ ಪೆನ್‍ಡ್ರೈವ್‍ನಲ್ಲಿ ಶೇಖರಿಸುವ ಯಾವುದೇ ವಿಷಯಗಳಂತೆ ಒಂದು ಯಂತ್ರದಲ್ಲಿ ಅವರ ನೆನಪುಗಳನ್ನು ಶೇಕರಿಸಿಡುವ ತಂತ್ರಜ್ಞಾನಗಳು ಅಥವಾ ನಿಮ್ಮ ಮಿದುಳಿನಲ್ಲಿಯೇ ಸೇರಿಸಿ ಅವರ ನೆನಪುಗಳನ್ನು ಬೇಕೆಂದಾಗ ಒಂದು ವಿಡಿಯೋ ಪ್ಲೇ ಮಾಡಿದಂತೆ ಅವರ ಜತೆಗಿನ ನೆನಪುಗಳನ್ನು ಮತ್ತೊಮ್ಮೆ ಕಣ್ಣ ಮುಂದೆ ತರಿಸುವಂತಹ ತಂತ್ರಜ್ಞಾನಗಳು ಶೀಘ್ರದಲ್ಲಿಯೇ ಬರಲಿವೆ.

  • ವಿಶು

POPULAR  STORIES :

ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?

ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?

11ರ ಪೋರ ಕಲ್ಲಾಗುತ್ತಿದ್ದಾನೆ..!

ಸುದೀಪ್, ಪ್ರಿಯ ಒಂದಾದ್ರ.? ಮತ್ತೆ ಒಂದಾಯ್ತು ಕಿಚ್ಚನ ಸಂಸಾರ..!?

ಇನ್ಮುಂದೆ ಶಾಲೆಗಳಿಗೆ ಕಟ್ಟಬೇಕಿಲ್ಲ ಲಕ್ಷಗಟ್ಟಲೆ ಡೊನೇಷನ್..!

ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...