ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತನ್ನದೇಯಾದ ಹೆಸರು ಮಾಡಿರುವ ತಮನ್ನಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ನಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
ಬಾಲಿವುಡ್ ಕಡೆ ಹೋಗಿದ್ದ ತಮನ್ನಾ ಅಲ್ಲಿ ಹೇಳಿಕೊಳ್ಳುವಂತಾ ಯಶಸ್ಸು ಸಿಗದೇ ಇದ್ದಿದ್ದರಿಂದ ದಕ್ಷಿಣ ಭಾರತಕ್ಕೆ ವಾಪಸ್ಸಾಗಿದ್ದರು. ಬಾಹುಬಲಿ ಸಿನಿಮಾ ತಮನ್ನಾ ಕೀರ್ತಿ, ಜನಪ್ರಿಯತೆಯನ್ನು ಹೆಚ್ಚಿಸಿತು. ಬಳಿಕ ಅವರ ಸಂಭಾವನೆ ಕೂಡ ಸಹಜವಾಗಿ ಏರಿತು.
ಕನ್ನಡದಲ್ಲಿ ಜಾಗ್ವಾರ್ ಸಿನಿಮಾದಲ್ಲಿ ಹೆಜ್ಜೆ ಹಾಕಿದ್ದ ತಮನ್ನಾ ಈಗ ಕೆಜಿ ಎಫ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಜಿಎಫ್ ನ ಒಂದೇ ಒಂದು ಹಾಡಿಗೆ ಸ್ಟೆಪ್ ಹಾಕಿದ್ದಕ್ಕೆ ತಮನ್ನಾ ಪಡೆದ ಸಂಭಾವನೆ 50ಲಕ್ಷ ರೂಪಾಯಿ.