ತ್ರಿಪುರಾ ಸುಂದರಿ ಏರಲಿದ್ದಾಳೆ ಹಸಿಮಣೆಯ

Date:

ಪಡ್ಡೆ ಹೈಕಳ ಹೃದಯಕ್ಕೆ ಕಿಚ್ಚು ಹಚ್ಚೋ ಸುಂದರಿ ಮಿಲ್ಕಿ ಬ್ಯೂಟಿ ಮಿಸ್ ತಮನ್ನಾ ಭಾಟಿಯಾ ಮುಂದಿನ ವರ್ಷ ಮಿಸೆಸ್ ಆಗಲಿದ್ದಾರೆ. ಬಾಹುಬಲಿ 2 ಚಿತ್ರದ ನಂತರ ತಮನ್ನಾ ಚಿತ್ರ್ರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಓಡಾಡುತ್ತಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ತಮನ್ನಾ ಕಳೆದ ಕೆಲವು ದಿನಗಳಿಂದ     ಸಾಫ್ಟ್ ವೇರ್ ಎಂಜಿನಿಯರೊಬ್ಬರ ಜೊತೆ ಡೇಟಿಂಗ್ ಮಾಡ್ತಿದ್ದಾರೆ.

ನಟನೆ ಜೊತೆ ಜೊತೆಗೆ ನ್ಯಾಚುರಲ್ ಬ್ಯೂಟಿ ಅನ್ನೋ ಕಾರಣಕ್ಕೆ ಫೇಮಸ್ ಆದ ಈ ನಟಿ ಮೂಲತಃ ಪಂಜಾಬ್ ನವರು. ತಮಿಳು ತೆಲುಗು ಹಿಂದಿ ಸೇರಿದಂತೆ 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರೋ ತಮನ್ನಾ ತನ್ನ ಬಬ್ಲಿ ಮತ್ತು ಬೋಲ್ಡ್ ನಟನೆಯಿಂದಲೇ ಪಡ್ಡೆಗಳ ಹೃದಯ ಕದ್ದವರು.

ಈ ಬ್ಯೂಟಿಗೆ ಬ್ರೇಕ್ ನೀಡಿದ್ದು ಕೊಂಚಂ ಇಷ್ಟಂ ಕೊಂಚಂ ಕಷ್ಟಂ ಚಿತ್ರ. ಆ ನಂತರ ಜೂ, ಎನ್ ಟಿ ಆರ್ ಜೊತೆಗಿನ ಊಸರವಳ್ಳಿ, ಮಹೇಶ್ ಬಾಬು ಜೊತೆಗಿನ ಆಗಡು ಹೀಗೆ ಒಂದರ ಹಿಂದೊಂದು ಹಿಟ್ ಆಗಿದ್ದೇ ತಡ ಈ ಬ್ಯೂಟಿ ಹಾರಿದ್ದು ಸೀದಾ ಬಾಲಿವುಡ್ ಗೆ. ಆದ್ರೆ ಬಾಲಿವುಡ್ ಪ್ರೇಕ್ಷಕ ಮಿಲ್ಕಿ ಬ್ಯೂಟಿಗೆ ಮಣೆ ಹಾಕಲಿಲ್ಲ.

ಮತ್ತೆ ಹೋದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮತ್ತೆ ಟಾಲಿವುಡ್ ಗೆ ಬಂದ ತಮನ್ನಾಗೆ ಇಲ್ಲು ಸಾಲು ಸಾಲು ಸೋಲುಗಳಿ ಎದುರಾದ್ವು. ಇನ್ನು ಈಕೆ ಜಮಾನ ಮುಗೀತು ಅಂತ ಸಿನಿಮಂದಿ ಮಾತಾಡಿಕೊಳ್ಳುತ್ತಿರುವಾಗ್ಲೇ  ಎಸ್‌.ಎಸ್‌ ರಾಜಮೌಳಿ ಅವರ ‘ಬಾಹುಬಲಿ’ ಚಿತ್ರ ಮತ್ತೆ ಹೆಸರು ಹಾಗೂ ಇನ್ನೊಂದಿಷ್ಟು ಅವಕಾಶಗಳನ್ನ ತಂದು ಕೊಟ್ಟಿತು.

ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ಈ ಬ್ಯೂಟಿ ಸಿನಿರಂಗಕ್ಕೆ ಗುಡ್ ಬೈ ಹೇಳಿ ಬಾಲ್ಯದ ಗೆಳೆಯನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಹೊಸ ಸಿನಿಮಾಗಳಿಗೆ ಸಹಿ ಹಾಕುವುದನ್ನು ನಿಲ್ಲಿಸಿರುವ ತಮನ್ನಾ ತಮ್ಮ ಪ್ರಿಯಕರನೊಂದಿಗೆ ಚಾಟಿಂಗ್ – ಡೇಟಿಂಗ್- ಶಾಪಿಂಗ್ ನಲ್ಲಿ ಮುಳುಗಿದ್ದಾರಂತೆ. ಅದೇನೆ ಇದ್ರೂ ಸಪ್ತಪದಿ ತುಳಿಯಲು ತುದಿಗಾಲಲ್ಲಿ ನಿಂತಿರೋ ತಮನ್ನಾ ನಿರ್ಧಾರ ಅದೆಷ್ಟೋ ಯುವಕರ ನಿದ್ದೆ ಕೆಡಸಿರೋದಂತೂ ಸುಳ್ಳಲ್ಲ.

  • “ಶ್ರೀ”

POPULAR  STORIES :

ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,

ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!

ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?

ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!

ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?

ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’

ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?

Share post:

Subscribe

spot_imgspot_img

Popular

More like this
Related

ಬಳ್ಳಾರಿ ಫೈರಿಂಗ್ ಪ್ರಕರಣ: ಭರತ್ ರೆಡ್ಡಿ ಬಂಧನಕ್ಕೆ ಆರ್. ಅಶೋಕ್ ಆಗ್ರಹ

ಬಳ್ಳಾರಿ ಫೈರಿಂಗ್ ಪ್ರಕರಣ: ಭರತ್ ರೆಡ್ಡಿ ಬಂಧನಕ್ಕೆ ಆರ್. ಅಶೋಕ್ ಆಗ್ರಹ ಬೆಂಗಳೂರು:...

‘ನನ್ನನ್ನು ಫಿನಿಶ್ ಮಾಡಲು ಯತ್ನ’: ಗಾಲಿ ಜನಾರ್ದನ ರೆಡ್ಡಿ ಸ್ಫೋಟಕ ಆರೋಪ

‘ನನ್ನನ್ನು ಫಿನಿಶ್ ಮಾಡಲು ಯತ್ನ’: ಗಾಲಿ ಜನಾರ್ದನ ರೆಡ್ಡಿ ಸ್ಫೋಟಕ ಆರೋಪ ಬಳ್ಳಾರಿ:...

ಫೆ.23ರಂದು ಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ಗದ್ದುಗೆ ಉದ್ಘಾಟನೆ, ಪಟ್ಟಾಭಿಷೇಕದಲ್ಲಿ ಭಾಗಿ

ಫೆ.23ರಂದು ಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ಗದ್ದುಗೆ ಉದ್ಘಾಟನೆ, ಪಟ್ಟಾಭಿಷೇಕದಲ್ಲಿ ಭಾಗಿ ಮಂಡ್ಯ:...

ಚಳಿಗಾಲದಲ್ಲೇಕೆ ಕೀಲು ನೋವು ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ? ಇಲ್ಲಿದೆ ಉತ್ತರ

ಚಳಿಗಾಲದಲ್ಲೇಕೆ ಕೀಲು ನೋವು ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ? ಇಲ್ಲಿದೆ ಉತ್ತರ ಚಳಿಗಾಲದಲ್ಲಿ ಅನೇಕರು...