ಕಾವೇರಿ ವಿವಾದ ಕಳೆದೊಂದು ವಾರಗಳಿಂದ ಸೃಷ್ಠಿಯಾಗಿದ್ದ ಆಕ್ರೋಶ ಮುಗಿಲು ಮುಟ್ಟಿದ್ದ ಬೆನ್ನಲ್ಲೇ ತಮಿಳುನಾಡಿಗರು ಸೃಷ್ಠಿಸಿದ್ದ #wehatekarnataka ಎನ್ನುವ ಟ್ವಿಟರ್ ಟ್ರೆಂಡ್ ಗೆ ಕರ್ನಾಟಕ ತಮಿಳರು ತಕ್ಕ ಪಂಚ್ ನೀಡಿದ್ದಾರೆ..! ಈ ಮೂಲಕ ಕನ್ನಡ ನಾಡಿನ ತಮಿಳಿಗರು ಕನ್ನಡಿಗರ ಔದಾರ್ಯದ ಬಗ್ಗೆ ತಮಿಳುನಾಡಿನವರಿಗೆ ತಕ್ಕ ಪಾಠ ಹೇಳಿ ಕೊಟ್ಟಿದ್ದಾರೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಿರುವುದನ್ನು ಖಂಡಿಸಿ ರಾಜ್ಯದ ಜನತೆ ಒಗ್ಗಟ್ಟಿನಿಂದ ಶಕ್ತಿ ಪ್ರದರ್ಶನ ಮಾಡಿರುವ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಇಂತಹ ಚರ್ಚೆಗಳನ್ನು ಹುಟ್ಟುಹಾಕಲಾಯಿತು. ಶನಿವಾರ ರಾತ್ರಿಯಿಂದಲೇ ಈ ಟ್ರೆಂಡ್ ಮುಂಚೂಣಿಗೆ ಬಂದು ಸುಮಾರು 20 ಸಾವಿರಕ್ಕೂ ಅಧಿಕ ತಮಿಳುನಾಡಿನ ಜನರು ಟ್ವೀಟ್ ಮಾಡಿ ಬೆಂಬಲಿಸಿದರು. ಬಂದ್ ವೇಳೆ ಕರ್ನಾಟಕದಲ್ಲಿ ವಾಸವಿರುವ ತಮಿಳರಿಗೆ ತೊಂದರೆ ಕೊಡಲಾಗಿದೆ. ಅಷ್ಟೇ ಅಲ್ಲ ತಮಿಳರ ಆಸ್ತಿ ಪಾಸ್ತಿಯನ್ನು ಹಾನಿ ಮಾಡಲಾಗಿದೆ ಎಂದು ಇದರಲ್ಲಿ ಬಾರಿ ಚರ್ಚೆ ಮಾಡಲಾಗಿತ್ತು. ಆದರೆ ಇದಕ್ಕೆಲ್ಲಾ ತಿರುಗೇಟು ನೀಡಿರುವ ಕರ್ನಾಟಕದ ತಮಿಳರು “ಕನ್ನಡ ಮಣ್ಣಿನಲ್ಲಿ ನಾವೆಲ್ಲರೂ ಸುಖವಾಗಿ ಜೀವಿಸುತ್ತಿದ್ದೇವೆ. ಇಲ್ಲಿ ನಮ್ಮ ಆಸ್ತಿ ಪಾಸ್ತಿಗಳಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗಿಲ್ಲ ಸುಮ್ಮನೆ ಇಲ್ಲದ ವಿಚಾರವನ್ನು ಎತ್ತಬೇಡಿ” ಎಂದು ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ.
ಅದೇ ರೀತಿಯಾಗಿ #WeLoveKarnataka ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಕನ್ನಡಿಗರು ಚರ್ಚೆ ಶುರು ಮಾಡಿಕೊಂಡಿದ್ದರು. ಇನ್ನೂ ಕೆಲವರು #WeHateTamilnadu ಬಳಸತೊಡಗಿದರೂ ಅದಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಲಿಲ್ಲ.
POPULAR STORIES :
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…