ಕನ್ನಡದ ಪ್ರವಾಸಿಗರಿಗೆ ರಾಮೇಶ್ವರಂನಲ್ಲಿ ಭವ್ಯ ಸ್ವಾಗತ..!

Date:

ಕಾವೇರಿ ನದಿ ನೀರು ಹಂಚಿಕೆಯ ವಿಷಯವಾಗಿ ಕಳೆದ ಮೂರು ದಿನಗಳಿಂದ ಬೆಂಗಳೂರು ನಗರ ಬೆಂಕಿಯ ಕೆನ್ನಾಲಿಗಿಗೆ ಗುರಿಯಾಗಲು ಕಾರಣವಾಗಿದ್ದ ರಾಮೇಶ್ವರಂನಲ್ಲಿ ಕನ್ನಡಿಗರ ವಾಹನಗಳನ್ನು ಜಖಂಗೊಳಿಸಿ ಅಲ್ಲಿನ ಕನ್ನಡಿಗರ ಮೇಲೆ ದಾಳಿ ನಡೆಸಿ ಕೆಂಗಣ್ಣಿಗೆ ಗುರಿಯಾಗಿದ್ದ ಘಟನೆಯಿಂದ ತೀವ್ರ ಟೀಕೆಗೊಳಗಾದ ಹಾಗೂ ರಾಮೇಶ್ವರದ ಘನತೆಗೆ ಉಂಟಾಗಿರುವ ಕಪ್ಪು ಚುಕ್ಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಲ್ಲಿನ ಹಿಂದು ಮಕ್ಕಳ್ ಕಚ್ಚಿ ಸಂಘಟನೆಯ ಸದಸ್ಯರುಗಳು ಕರ್ನಾಟಕದಿಂದ ಆಗಮಿಸಿಕ ಯಾತ್ರಿಕರಿಗೆ ಹಾಗೂ ಪ್ರವಾಸಿಗರಿಗೆ ರಾಮನಾಥ ಸ್ವಾಮಿ ದೇಗುಲದಲ್ಲಿ ಸುರಕ್ಷಿತವಾದ ದರ್ಶನ ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಮಂಗಳವಾರ ಕರ್ನಾಟಕ ನೊಂದಣಿಯ ಗಾಡಿಯನ್ನು ಕಂಡ ಕೂಡಲೇ ಅವರ ಬಳಿ ದಾವಿಸುತ್ತಿರುವ ಸದಸ್ಯರು ಅವರಿಗೆ ಸುರಕ್ಷಿತ ದರ್ಶನ ಭಾಗ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡ್ತಾ ಇದರೆ ಅನ್ನೊ ಸುದ್ದಿ ಇದೀಗ ಹೊರ ಬಂದಿದೆ. ದೇವಾಲಯದ ನಾಡಿನಲ್ಲಿ ಈ ರೀತಿಯ ಅಹಿತಕರ ಘಟನೆ ನಡೆದದ್ದು ಎಲ್ಲರಲ್ಲೂ ತೀವ್ರ ಬೇಸರ ತಂದಿದೆ ಎಂದು ಹಿಂದು ಮಕ್ಕಳ್ ಕಚ್ಚಿ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್ ಪ್ರಭಾಕರ್ ಹೇಳಿದ್ದಾರೆ.
ದೇಶದ ನಾನಾ ಭಾಗಗಳಿಂದ ಯಾತ್ರಿಕರು ರಾಮೇಶ್ವರಂಗೆ ಬಂದು ಭೇಟಿ ಕೊಡುತ್ತಾರೆ. ಆದರೆ ಕಳೆದ ಎರಡು ದಿನಗಳ ಹಿಂದೆ ನಡೆದ ಹಲ್ಲೆಯಿಂದಾಗಿ ದೇವಾಲಯಕ್ಕೆ ಬರುತ್ತಿದ್ದ ಪ್ರವಾಸಿಗರ ಸಂಖ್ಯೆಯೇ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ತಮಿಳುನಾಡಿಗೆ ಬರುವ ಪ್ರವಾಸಿಗರು ಸುರಕ್ಷಿತವಾಗಿರುತ್ತಾರೆ ಎಂಬ ಭರವಸೆಯನ್ನು ನೀಡುವುದೇ ನಮ್ಮ ಮೊದಲ ಕರ್ತವ್ಯ. ಇನ್ನು ಮುಂದೆ ಇಲ್ಲಿ ಕರ್ನಾಟಕದ ವಾಹನಗಳ ಮೇಲೆ ಯಾವುದೇ ರೀತಿಯ ದಾಳಿ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದರು.
ಇಲ್ಲಿಗೆ ಬಂದ ಕರ್ನಾಟಕ ಪ್ರವಾಸಿಗರೊಬ್ಬರು ದೇವಾಲಯದೊಳಗೆ ಬಂದಾಗ ಆರಂಭದಲ್ಲಿ ಕಷ್ಟ ಪಟ್ಟು ತಮಿಳಿನಲ್ಲಿ ಮಾತನಾಡಲು ಅರಂಭಿಸಿದರು. ಆನಂತರ ಇಲ್ಲಿ ಯಾವುದೇ ಭಾಷೆಯ ಅಡ್ಡಿಯಿಲ್ಲ ಎಂದು ಮನವರಿಕೆ ಮಾಡಿಕೊಟ್ಟ ಬಳಿಕ ಅವರು ಮುಕ್ತವಾಗಿ ಬೆರೆತರು ಎಂದು ಹೇಳಿದರು.
ಎಟಿಎಂಗಳಿಗೆ ಕಲ್ಲು ತೂರಾಟ..!
ಕಾವೇರಿ ಗಲಭೆ ನಡೆದ ಎರಡನೇ ದಿನವಾದ ಮಂಗಳವಾರ ತಮಿಳುನಾಡಿನಲ್ಲಿ ಕೆಲ ಕಿಡಿಗೇಡಿಗಳು ಕರ್ನಾಟಕ ಎಟಿಎಂ ಬ್ಯಾಂಕ್‍ಗಳಿಗೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸರು 30ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ನೈವೇಲಿಯಲ್ಲಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ಧಹಿಸುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ವಳವವುರಿಮೈ ಕಚ್ಚಿ ಸಂಘಟನೆಗೆ ಸೇರಿದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕರ್ನಾಟಕದಿಂದ ಬರುವ ಬಸ್ಸುಗಳು ಹಾಗೂ ಕರ್ನಾಟಕದವರಿಗೆ ಸೇರಿದ ಸಂಸ್ಥೆಗಳಿಗೆ ರಕ್ಷಣೆ ನೀಡುವ ಕೆಲಸವನ್ನೂ ಸಹ ಪೊಲೀಸರು ಕೈಗೊಂಡಿದ್ದಾರೆ. ಇನ್ನು ಕರ್ನಾಟಕದಲ್ಲಿ ತಮಿಳರ ವಾಣಿಜ್ಯ ಸಂಸ್ಥೆಗಳ ಮೇಲೆ ನಡೆದ ದಾಳಿ ಖಂಡಿಸಿ ಸೆ. 16 ರಂದು ಒಂದು ದಿನಗಳ ಕಾಲ ಬಂದ್ ಆಚರಿಸಲು ನಿರ್ಧರಿಸಿದೆ. ಇನ್ನು ಕರ್ನಾಟಕದಲ್ಲಿ ತಮಿಳರ ಸಂಸ್ಥೆಗಳಿಗೆ ಧಾಳಿ ನಡೆಸಿದ ಪರಿಣಾಮವಾಗಿ, ತಮಿಳು ವ್ಯಾಪಾರಿಗಳಿಗೆ, ಲಾರಿ ಹಾಗೂ ಬಸ್ ನಿರ್ವಾಹಕರಿಗೆ ಸುಮಾರು 2000 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

POPULAR  STORIES :

ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!

ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..

ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..

ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!

ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?

ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...