ನೀವು ಟೀ ಪ್ರಿಯರೇ? ದಿನಕ್ಕೆ ಎಷ್ಟು ಸಲ ಟೀ ಕುಡಿಯುವ ಅಭ್ಯಾಸ ರೂಢಿಸಿಕೊಂಡಿದ್ದೀರಿ? ಎಷ್ಟೋ ಬಗೆಯ ಟೀ ಗಳನ್ನು , ಎಷ್ಟೋ ಕಡೆಗಳಲ್ಲಿ ನೀವು ಕುಡಿದಿರಬಹುದು. ಆದರೆ, ಕೆ.ಜಿ ಗೆ 40 ಸಾವಿರ ರೂ ಬೆಲೆ ಬಾಳುವ ಚಹಾ ಕುಡಿದಿದ್ದೀರ?
ಇದು ಅಚ್ಚರಿ ಆಗುತ್ತೆ. ಆದರೂ ನಂಬಲೇ ಬೇಕು…ಅರುಣಾಚಲ ಪ್ರದೇಶದ ವಿಶಿಷ್ಟ ಮಾದರಿಯ ಚಹಾ ಪುಡಿ ಗುವಾಹಟಿಯ ಟೀ ಹರಾಜು ಕೇಂದ್ರದಲ್ಲಿ 40 ಸಾವಿರ ರೂಗಳಿಗೆ ಮಾರಾಟವಾಗಿದೆ. ಇದು ವಿಶ್ವದಲ್ಲೇ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಟೀ ಪುಡಿ.
ದೋನಿ ನೀಡಲ್ಸ್ ಟೀ ತಳಿಯ 1.1 ಕೆ.ಜಿ ತೂಕದ ಟೀ ಪುಡಿಗೆ ಹರಾಜಿನಲ್ಲಿ 40 ಸಾವಿರ ರೂ ಸಿಕ್ಕಿದೆ..!