ನಿಜಕ್ಕೂ ಇದು ಬೆಚ್ಚಿಬೀಳಿಸುವ ಸಂಗತಿ. ಇವತ್ತಿಗೂ ಪ್ರೈಮರಿ ಶಿಕ್ಷಣದಲ್ಲಿ ಲೈಂಗಿಕತೆಯ ಪಾಠ ಅಳವಡಿಸುವುದಾ..? ಬಿಡುವುದಾ..? ಎಂಬ ದ್ವಂದ್ವಗಳು ಮುಗಿದಿಲ್ಲ. ಮಕ್ಕಳಿಗೆ ಇಷ್ಟುಬೇಗ ಲೈಂಗಿಕ ಶಿಕ್ಷಣ ಬೇಡ ಎಂದು ಪೋಷಕವರ್ಗ ವಾದಮಾಡುತ್ತಲೇ ಬಂದಿದೆ. ಆದರೆ ಅದೇ ಪೋಷಕ ವರ್ಗ ಮಕ್ಕಳ ಕೈಗೆ ಮೊಬೈಲು, ಟ್ಯಾಬು, ಇಂಟರ್ನೆಟ್ ಕೊಟ್ಟು ಹಿಂಬಾಗಿಲಿನಿಂದ ಕಾಮನೆಗಳನ್ನು ಪುಟಿದೇಳಿಸುವಲ್ಲಿ ಸಫಲವಾಗುತ್ತಿದೆ. ವರದಿಯೊಂದರ ಪ್ರಕಾರ ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 16ರಿಂದ 21 ವಯಸ್ಸಿನ ಶೇಕಡಾ 66ರಷ್ಟು ಹುಡುಗ-ಹುಡುಗಿಯರು ಪ್ರತಿನಿತ್ಯ ಪೋರ್ನ್ ವಿಡಿಯೋ ವೀಕ್ಷಿಸುತ್ತಿದ್ದಾರೆ..! ಅವರಲ್ಲಿ ಶೇಕಡಾ 30ರಷ್ಟು ಪಾಲು ಹುಡುಗಿಯರಿಗೆ ಸೇರಿದೆ. ಆಧುನಿಕತೆಗೆ ತೆರೆದುಕೊಂಡ ಜಗತ್ತಿನಲ್ಲಿ ಅಶ್ಲೀಲತೆ ಎಂಬುದು ಕೈಗೆಟುಕುವ ರೀತಿಯಲ್ಲಿರುವುದರಿಂದ ಇದು ಎಳೆ ಮನಸ್ಸಿನ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಮಾನಸಿಕ ಖಿನ್ನತೆ, ಆತ್ಮಹತ್ಯೆ, ಕ್ರೈಂಗಳಿಗೆ ಪ್ರಚೋಧಿಸುತ್ತವೆ. ಲೈಂಗಿಕ ಚಟುವಟಿಕೆ ಪ್ರಕೃತಿದತ್ತವಾಗಿರುವುದರಿಂದ ಅದರ ಬಗ್ಗೆ ಎಲ್ಲರಿಗೂ ಕುತೂಹಲಗಳಿರುತ್ತವೆ. ಆಸೆಗಳಿರುತ್ತವೆ. ಯೌವ್ವನಕ್ಕೆ ಆಗತಾನೆ ಕಾಲಿಟ್ಟ ಹದಿನಾರರ ವಯಸ್ಸಿನವರಿಗೆ ಪೋರ್ನ್ ವಿಡಿಯೋಗಳು ಮೈಮೇಲೆ ಕರೆಂಟ್ ಹರಿಸುತ್ತವೆ. ಹಾಗೊಂದು ಕ್ರಿಯೆಗೆ ಮಾನಸಿಕವಗಿ, ದೈಹಿಕವಾಗಿ ಸಜ್ಜುಮಾಡಿಬಿಡುತ್ತವೆ. ಯಾರೂ ಸಿಕ್ಕಿಲ್ಲವೆಂದರೇ, ಅಕ್ಕ, ತಂಗಿ, ಅಣ್ಣ, ತಮ್ಮ, ಸಂಬಂಧಿಕರ ಮೇಲೆ ಕಾಮನೆ ಈಡೇರಿಸಿಕೊಳ್ಳುವಷ್ಟರ ಮಟ್ಟಿಗೆ ಮನಸು ಕಠಿಣವಾಗಿಬಿಡುತ್ತದೆ. ಅಣ್ಣ ತಂಗಿಯ ಮೇಲೆ, ಅಕ್ಕ ತಮ್ಮನ ಜೊತೆ, ಮಗಳು ಅಪ್ಪನ ಜೊತೆ- ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸಿದ ಅದೆಷ್ಟೋ ಪ್ರಕರಣದ ನಿದರ್ಶನಗಳಿವೆ. ಈ ವಯಸ್ಸಿನವರು ಹೆಚ್ಚಾಗಿ ಏಕಾಂತದಲ್ಲಿ ಇಂಥ ವಿಡಿಯೋಗಳನ್ನು ವೀಕ್ಷಿಸುತ್ತಾರೆ. ವಿರುದ್ಧ ಲಿಂಗದ ಕೆಲವರು ಒಟ್ಟಾಗಿ ಪೋರ್ನ್ ವೀಕ್ಷಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಭಾರತದಲ್ಲಿ ನೂರಾರು ಪೋರ್ನ್ ಸೈಟ್ ಗಳ ಬ್ಯಾನ್ ಆದರೂ ಕಳ್ಳಮಾರ್ಗದಲ್ಲಿ ಕೆಲವು ಸೈಟ್ ಗಳು ಅನಾಯಾಸವಾಗಿ ಸಿಗುತ್ತವೆ. ಆ ಬಗ್ಗೆ ಜ್ಞಾನವಿರುವ ಬಾಲಕ-ಬಾಲಕಿಯರು, ಹುಡುಗ-ಹುಡುಗಿಯರು, ಯುವಕ-ಯುವತಿಯರು- ಕುತೂಹಲಕ್ಕೆ ಮಾಡಿಕೊಂಡ ಅಭ್ಯಾಸಕ್ಕೆ ದಾಸರಾಗುತ್ತಿರುವುದು ನಿಜಕ್ಕೂ ಆತಂಕದ ಸಂಗತಿ. ಆಧುನೀಕರಣ ಅವಸಾನಕ್ಕೆ ಕಾರಣವಾಗುವುದೆಂದರೇ ಇದೇನಾ..?
- ರಾ ಚಿಂತನ್
POPULAR STORIES :
ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?
“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಅನುಷ್ಕಾ ಇದ್ದರೇನಂತೆ..? ಚಾನ್ಸ್ ಸಿಕ್ಕರೇ ಕೊಹ್ಲೀನಾ ಮದ್ವೆ ಆಗ್ತೀವಿ..!?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?
`ಹಿಂದೂ ಹೆಣ್ಣುಮಕ್ಕಳು ನಾಲ್ಕು ಮಕ್ಕಳನ್ನು ಹೆರಲಿ..!’ ಜೀನ್ಸ್ ಪ್ಯಾಂಟ್ ಮಹಾರಾಜನ ಫುಲ್ ಡಿಟೇಲ್ಸ್..!