ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ತೇಜಸ್ ಶರ್ಮಾ…!

admin
By admin
1 Min Read

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚಾಕುವಿನಿಂದ ಇರಿದ ತೇಜಸ್ ಶರ್ಮಾ ಈ ಹಿಂದೆ ಕೆಲವು ಅಧಿಕಾರಿಗಳ‌ ವಿರುದ್ಧ ಭ್ರಷ್ಟರು ಎಂದು ಆರೋಪಿಸಿ ಲೋಕಾಯುಕ್ತರಿಗೆ ದೂರು ನೀಡಿದ್ದ ಎಂದು ತಿಳಿದು ಬಂದಿದೆ.


ತುಮಕೂರು ಸಾರ್ವಜನಿಕ ಇಲಾಖೆ ಉಪನಿರ್ದೇಶಕ ಮಂಜುನಾಥ್, ಎಸ್ ಡಿಎ ಶಿವಕುಮಾರ್, ಕೋಲಾರದ ರೇಷ್ಮೆ ಗೂಡಿನ ಮಾರುಕಟ್ಟೆ ಸಹಾಯಕ ನಿರ್ದೇಶಕ ದೇವರಾಜ್, ತುಮಕೂರು ಟಿಯುಎಂಪಿ ಲಿ ಪರ್ಚೆಸ್ ಸೆಕ್ಷನ್ ಕ್ಲರ್ಕ್ ಮಹಲಿಂಗಪ್ಪ, ಮ್ಯಾನೇಜರ್ ಡಾ.ಚಂದ್ರಪ್ಪ, ವ್ಯವಸ್ಥಾಪಕ‌ ನಿರ್ದೇಶಕ ಎಆರ್ ಚಂದ್ರಶೇಖರ್, ರೇಷ್ಮೆ ವಿನಿಮಯ ಕೇಂದ್ರ (ಬೆಂಗಳೂರು) ಜಂಟಿ ನಿರ್ದೇಶಕ ಪ್ರಭಾಕರ್, ತುಮಕೂರು ವಾಣಿಜ್ಯ‌ ಮತ್ತು ಕೈಗಾರಿಕಾ ಇಲಾಖೆ ಎಸ್ ಡಿಸಿ ಕುಮಾರ್ ವಿರುದ್ಧ ದೂರು ನೀಡಿದ್ದ ಎನ್ನಲಾಗುತ್ತಿದೆ.

Share This Article