- ಕಾಂಗ್ರೆಸ್ ನವರು, ಫೇಕ್ಇಶ್ಯು ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ಧಾರೆ. ಈ ಸಂಬಂಧ ಬೆಂಗಳೂರಿನಲ್ಲಿ ತೇಜಸ್ವಿ ಸೂರ್ಯ ಮಾತನಾಡಿ ನನ್ನ ಕ್ಷೇತ್ರ ಬೊಮ್ಮನಹಳ್ಳಿಯಲ್ಲಿ ಮಾತ್ರ ಸ್ವಲ್ಪ ಮಳೆ ಸಮಸ್ಯೆಯಾಗಿದೆ. ಬೇರೆ ಕ್ಷೇತ್ರದಲ್ಲಿ ಜನ ಜೀವನ ಯಥಾಸ್ಥಿತಿ ನಡೆದುಕೊಂಡು ಬರುತ್ತಿದೆ. ನಾನು ನನ್ನ ಕ್ಷೇತ್ರದಲ್ಲಿ ದೋಸೆ ಅಂಗಡಿ ಉದ್ಘಾಟನೆ ಮಾಡಿದೆ. ನನ್ನ ಕ್ಷೇತ್ರದಲ್ಲಿ ಇರುವ ಅಂಗಡಿ ಉದ್ಘಾಟನೆ ನನ್ನ ಕರ್ತವ್ಯ. ನಮ್ಮ ಕ್ಷೇತ್ರದಲ್ಲಿ ಎಲೆಕ್ಟಿಕ್ ಬಸ್ ಉದ್ಘಾಟನೆ ಇತ್ತು ಅಂದ್ರೆ ಅದಕ್ಕೂ ಹೋಗುತ್ತೇವೆ. ದೋಸೆ ಅಂಗಡಿ ಉದ್ಘಾಟನೆಗೆ ಕರೆಯುತ್ತಾರೆ ಹೋಗ್ತೀವಿ, ಗಣಪತಿ ಇಟ್ಟಿದ್ರೆ ಅಲ್ಲಿಗೂ ಹೋಗ್ತೀವಿ. ಒಬ್ಬ ಜನ ಪ್ರತಿನಿಧಿಯಾಗಿ ನಾನು ಮಾಡುವ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಅವರಿಗೆ ಮಾಡುವುದಕ್ಕೆ ಕೆಲಸ ಇಲ್ಲದೆ, ಬೆಂಗಳೂರನ್ನು ಬದ್ನಾಮ್ ಮಾಡುವ ದೃಷ್ಟಿಯಿಂದ ಇದನ್ನು ಮಾಡುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ಧಾರೆ.
ಕಾಂಗ್ರೆಸ್ ನವರು ಫೇಕ್ಇಶ್ಯು ಕ್ರಿಯೇಟ್ ಮಾಡುತ್ತಿದ್ದಾರೆ
Date: