ಭಾರತದ ಉರಿ ಸೇನಾ ನೆಲೆಯ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ ಅಲ್ಲದೇ ಪಾಕ್ ರಾಷ್ಟ್ರದ ಜೊತೆಗೆ ಇತರೆ ರಾಷ್ಟ್ರಗಳು ಸ್ನೇಹ ಸಂಬಂಧ ಮಾಡಿಕೊಳ್ಳಲು ಹಿಂದೇಟು ಹಾಕಿತ್ತಿದೆ. ಹೀಗಾಗಿ ಅಂತರಾಷ್ಟ್ರಿಯ ಮಟ್ಟದಲ್ಲಿ ಏಕಾಂಗಿಯಾಗಿರುವ ಪಾಕ್ ಇದೀಗ ತಾವು ಬೆಳೆಸಿದ ಉಗ್ರ ಸಂಘಟನೆಯಿಂದ ಭಾರತ ಮೇಲೆ ದಾಳಿ ನಡೆಸಲು ಕುಮ್ಮಕ್ಕು ನೀಡಲಿದೆ ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿದೆ. ದೇಶದ ಪ್ರಧಾನ ನಗರಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸೋ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ದೇಶದ ಪ್ರಮುಖ ನಗರಗಳು ಹಾಗೂ ಗಡಿ, ಸೇನಾ ನೆಲೆಗಳಲ್ಲಿ ರಕ್ಷಣಾ ಕ್ರಮವನ್ನು ಹೆಚ್ಚಿಸಲಾಗಿದೆ.
ಆನ ನಿಬಿಡ ಸ್ಥಳಗಳಲ್ಲಿ, ಆಯಕಟ್ಟಿನ ಸ್ಥಳ ಹಾಗೂ ಪ್ರಮುಖ ನಗರಗಳ ಮೇಲೆ ದಾಳಿ ನಡೆಸುವಂತೆ ಉಗ್ರರಿಗೆ ಪಾಕ್ ಪ್ರಚೋದನೆ ನೀಡುವ ಎಲ್ಲಾ ಸಾಧ್ಯತೆಗಳು ಹೆಚ್ಚಿದ್ದು, ಭಾರತದ ಮೇಲಿನ ಸಿಟ್ಟಿಗೆ ಪಾಕ್ ಯಾವ ರೀತಿಯ ಕೃತ್ಯಕ್ಕೂ ಸಿದ್ಧವಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಪಾಕ್‍ನ ಪ್ರಮುಖ ಉಗ್ರ ಸಂಘಟನೆಯಾದ ಐಎಸ್‍ಐಸ್ ಹಾಗೂ ಜಮಾತ್ ಉಲ್ ಮುಜಾಯಿದ್ ಉಗ್ರ ಸಂಘಟನೆಯಿಂದ ಚಾಕು ದಾಳಿ ನಡೆಸಬಹುದು ಎಂದು ಈ ಹಿಂದೆ ಮಾಹಿತಿ ನೀಡಲಾಗಿತ್ತು.
ಉಗ್ರರನ್ನು ಪಳಗಿಸಿಕೊಂಡು ಭಾರತದ ಮೇಲೆ ಎಷ್ಟು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲು ಸಾಧ್ಯವೋ ಅದಕ್ಕೆ ಪಾಕ್ ಬೆಂಬಲ ನೀಡಲು ಪ್ರಯತ್ನಿಸುತ್ತಿದೆ. ಅದರಲ್ಲಿ ಪ್ರಮುಖವಾಗಿ ಭಾರತೀಯ ಸೇನಾ ನೆಲೆ ಹಾಗೂ ರ್ಯಾಂಪ್‍ಗಳು ಪ್ರಮುಖ ಟಾರ್ಗೆಟ್ ಎನ್ನಲಾಗಿದೆ.. ಇನ್ನು ಪಾಕಿಸ್ತಾನ ಭಯೋತ್ಪಾದನಾ ಸಂಘಟನೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಸ್ಲೀಪರ್ ಸೆಲ್‍ಗಳ ಬಗ್ಗೆಯೂ ಎಚ್ಚರ ವಹಿಸಬೇಕೆಂದು ತಿಳಿಸಿದ್ದಾರೆ. ಇನ್ನು ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರವಾಗಿ ಭಾರತದ ಪ್ರಮುಖ ನಗರ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಾಗಿದೆ.
Like us on Facebook The New India Times
POPULAR STORIES :
ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?
ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!