ಶಂಕಿತ ಉಗ್ರನ ಜಾಡುಹಿಡಿದು ಬಂದ ಮಂಗಳೂರು ಪೋಲಿಸರು

Date:

ಮಂಗಳೂರಿನಲ್ಲಿ ಆಟೋದಲ್ಲಿ ಬಾಂಬ್ ಸ್ಪೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ,‌ ಮಂಗಳೂರು ಪೊಲೀಸರ ತಂಡ ಶಂಕಿತ ಉಗ್ರನ ಹೆಜ್ಜೆ ಜಾಡು ಹಿಡಿದ ಮೈಸೂರಿಗೆ ಆಗಮಿಸಿದ್ದಾರೆ .

ಇನ್ನೂ ಶಂಕಿತ ಉಗ್ರ ಮೈಸೂರಿನ ಲೋಕನಾಯಕ ನಗರದಲ್ಲಿ ಬಾಡಿಗೆಗೆ ಇದ್ದ . ಶಂಕಿತ ಉಗ್ರನ ಸ್ನೇಹಿತನನ್ನ ಮೇಟಗಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ .

ಶಂಕಿತ ಉಗ್ರನಿಗೆ ಮೊಬೈಲ್ ನೀಡಿದ್ದವನನ್ನ ಖಾಕಿ ಪಡೆ ವಶಕ್ಕೆ ಪಡೆದುಕೊಂಡಿದೆ . ಇನ್ನೂ ಈತ ಶಂಕಿತ ಉಗ್ರನಿಗೆ 10ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಕೊಟ್ಟಿದ್ದಾನೆ . ಮಂಗಳೂರು-ಮೈಸೂರು ಪೊಲೀಸರು ಈಗ ಶಂಕಿತ ಉಗ್ರನ ಸ್ನೇಹಿತನನ್ನ ವಿಚಾರಣೆ ಮಾಡುತ್ತಿದ್ದಾರೆ .

ಸ್ಪೋಟ ಪ್ರಕರಣದ ಶಂಕಿತ ಉಗ್ರ ಶಿವಮೊಗ್ಗ ಮೂಲದ ಇರ್ಫಾನ್ ಎಂದು ಗುರುತಿಸಲಾಗಿದೆ . ಇನ್ನೂ ಈ ಶಂಕಿತ ಉಗ್ರ ಭಯೋತ್ಪಾದಕತೆ ಪ್ರಚೋದಿಸುವ ಬರಹ ಬರೆದಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ .ಸೂರತ್ಕಲ್‌ನಲ್ಲಿ ಗೋಡೆ ಮೇಲೆ ಭಯೋತ್ಪಾದಕತೆ ಪ್ರಚೋದಿಸುವ ಬರಹ ಬರೆದಿದ್ದ . ಹಾಗೂ ಬಾಂಬ್ ಸ್ಪೋಟದಲ್ಲಿ ಶೇ.60ರಷ್ಟು ಗಾಯಗೊಂಡಿದ್ದಾನೆ .

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ...

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್ ಫಿಲ್ಮ್

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್...

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್. ವೈದ್ಯ

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್....

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ ಮಾಡಲು ಪ್ರಸ್ತಾವನೆ: ಡಿ.ಕೆ.ಶಿವಕುಮಾರ್

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ...