ಅಭಿನಯ ಚಕ್ರವರ್ತಿ ಸುದೀಪ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ದಡ್ಡನಾ ಎಂದು ಪ್ರಶ್ನಿಸಿದ್ದಾರೆ.
ಶಿವಣ್ಣ ದಡ್ಡನಾ ಎಂದು ಸುದೀಪ್ ಪ್ರಶ್ನಿಸಲು ಕಾರಣ ಸಿನಿಮಾದ ಬಗ್ಗೆ ಶಿವಣ್ಣ ಅಭಿಮಾನಿಗಳಿಗಿರುವ ಬೇಸರ.
ಸಿನಿಮಾದಲ್ಲಿ ಸುದೀಪ್ ವಿಜೃಂಭಿಸಿದ್ದು, ಶಿವಣ್ಣನ ಮೇಲೆ ಕೂಡ ಸುದೀಪ್ ಕೈ ಮಾಡಿದ್ದಾರೆ. ಇದು ಶಿವಣ್ಣನ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.
ಈ ಬಗ್ಗೆ ಮಾತಾಡಿರುವ ಸುದೀಪ್, “ಸಿನಿಮಾ ಕತೆ ಕೇಳಿಯೇ ಶಿವಣ್ಣ ಒಪ್ಪಿಕೊಂಡಿರುವುದು. ಶಿವಣ್ಣ 35, 40 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದಾರೆ.ಶಿವಣ್ಣ ಪ್ರೇಮ್ ಗೆ ಹೇಳಿ ಬೇಕಾದರೆ ಸೀಟನ್ ಕಟ್ ಮಾಡಿಸಲಿ. ಸಿನಿಮಾದಲ್ಲಿ ಸುದೀಪ್ ಶಿವಣ್ಣಗೆ ಹೊಡೆಯುವ ಸೀನ್ ಬೇಕಿದ್ದರೆ ತೆಗೆಸಲಿ. ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಪಾತ್ರ ಇರತ್ತೆ. ತಾಯಿಗೆ ಪ್ರಾಮಿಸ್ ಮಾಡಿರ್ತಾರೆ, ಹಾಗಾಗಿ ಶಿವಣ್ಣ ಕೈ ಎತ್ತೋದಲ್ಲ. ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಲಿ ಎಂದಿದ್ದಾರೆ ಕಿಚ್ಚ.