ಈಗಾಗ್ಲೇ ನಿರ್ಮಾಪಕರಿಗೆ ತಮ್ಮ ಚಿತ್ರ ಚೆನ್ನಾಗಿ ಓಡ್ತಿದ್ರು ಚಿತ್ರಮಂದಿರಗಳಿಂದ ಸಿನಿಮಾವನ್ನ ತೆಗೆಯಲಾಗಿದೆ ಅನ್ನೋ ಕೊರುಗು ಇದ್ದೇ ಇದೆ.. ಈ ನಡುವೆ ಸಿನಿಮಾಗಳನ್ನ ರಿಲೀಸ್ ಮಾಡೋಕೆ ಥೇಟರ್ ಗಳಸಮಸ್ಯೆ ಕನ್ನಡ ಚಿತ್ರರಂಗವನ್ನ ಇನ್ನಿಲ್ಲದಂತೆ ಕಾಡ್ತಿದೆ.. ಇನ್ನೂ ಮಲ್ಟಿಪ್ಲೆಕ್ಸ್ ಚಿತ್ರಮಂದಿಗಳು ತಾವು ಕರ್ನಾಟಕದಲ್ಲಿ ಇಲ್ಲವೆನೋ ಎಂಬಂತೆ ಪರಭಾಷೆಯ ಚಿತ್ರಗಳಿಗೆ ರತ್ನಗಂಬಳಿಯನ್ನ ಹಾಸಿ ಕನ್ನಡ ಸಿನಿಮಾಗಳ ಕೊಲೆ ಮಾಡ್ತಿವೆ.. ಇಂತಹ ಸಂಭರ್ದದಲ್ಲಿ ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್ನಲ್ಲಿರೋ ತ್ರಿವೇಣಿ ಹಾಗೆ ಕೈಲಾಶ್ ಚಿತ್ರ ಮಂದಿರಗಳು ಬಾಗಿಲು ಮುಚ್ಚಿವೆ.. ಕೈಲಾಶ್ ಚಿತ್ರ ಮಂದಿರದಲ್ಲಿ ಗುರುವಾರ ಲಾಸ್ಟ್ ಷೋ ಆಗಿ `ಲಾಸ್ಟ್ ಬಸ್’ ಪ್ರದರ್ಶನಗೊಂಡಿದೆ… ಈ ಮೂಲಕ ಅಲ್ಲಿನ ಬೆಳ್ಳಿ ಪರದೆಗೆ ಈಗ ಮಂಕು ಕವಿದಿದೆ.. ಇದ್ರ ಜೊತೆಗೆ ತ್ರಿವೇಣಿ ಚಿತ್ರಮಂದಿರ ಹಿಂದಿಯ ಚಿತ್ರವೊಂದರ ಕೊನೆ ಪ್ರದರ್ಶನದ ಮೂಲಕ ಸಿನಿಪ್ರೇಮಿಗಳಿಂದ ದೂರ ಸರೆದಿದೆ.. ತನ್ನ ನೆಚ್ಚಿನ ನಟನ ಚಿತ್ರಗಳು ರಿಲೀಸ್ ಆಗೋ ಸಂದರ್ಭದಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದ ಈ ಥೇಟರ್ ಗಳು ಇನ್ನೂ ಮುಂದೆ ನೆನಪು ಮಾತ್ರ.. ಯಾವಾಗ್ಲೂ ಪ್ರೇಕ್ಷಕರಿಂದ ಗಿಜಿಗುಡುತ್ತಿದ್ದ ಈ ಎರಡು ಚಿತ್ರ ಮಂದಿರಗಳ ಮುಂದೆ ಈಗ ಸ್ಮಶಾನ ಮೌನ ಆವರಿಸಿದೆ.. ಒಂದಾದ ಮೇಲೆ ಒಂದರಂತೆ ಥೇಟರ್ಗಳು ಬಾಗಿಲು ಹಾಕ್ತಿವೆ.. ಇತ್ತಕಡೆ ಮಲ್ಟಿಪ್ಲೆಕ್ಸ್ ಗಳು ಕನ್ನಡ ಚಿತ್ರಗಳಿಗೆ ಮಾತ್ರವಲ್ಲದೆ, ಸಿನಿಮಾ ನೋಡೊ ಆಸಕ್ತರ ಜೇಬಿಗೂ ಕತ್ತಿರಿ ಹಾಕ್ತಿದೆ.. ಹೀಗೆ ಮುಂದುವರೆದರೆ ನಿರ್ಮಾಪಕ ತನ್ನ ಚಿತ್ರವನ್ನ ತಾನೇ ತನ್ನ ಮನೆ ಟಿವಿಯಲ್ಲಿ ನೋಡಿಕೊಳ್ಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗೋದ್ರಲ್ಲಿ ಸಂಶಯವಿಲ್ಲ..
- ಅಶೋಕ
POPULAR STORIES :
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!
ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.