ವಿಶ್ವದ ಅತ್ಯಂತ ಶ್ರೀಮಂತ ದೇವಾಲಯ ತಿರುಮಲ ತಿರುಪತಿ. ಈಗ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿರುವ ತಿಮ್ಮಪ್ಪನ ಒಡೆತನದ ಚಿನ್ನವೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಯನ್ನು ಸೇರಲಿದೆ.
ಹೌದು..ತಿರುಮಲದ ಆಡಳಿತ ಮಂಡಳಿ ದೇವರ ಒಡೆತನದಲ್ಲಿರುವ ಸುಮಾರು 7.5 ಟನ್ ಚಿನ್ನವನ್ನು ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷವಷ್ಟೇ ಚಾಲನೆ ನೀಡಿರುವ ಚಿನ್ನ ನಗದೀಕರಣ ಯೋಜನೆಯಲ್ಲಿ ನಿಯೋಜಿಸಲು ನಿರ್ಧರಿಸಿದೆ. ಟಿಟಿಡಿ ಇತ್ತೀಚೆಗಷ್ಟೇ 1.3ಟನ್ ಚಿನ್ನವನ್ನು ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ವರ್ಗಾಯಿಸಿತ್ತು.
ಆ ಸಂದರ್ಭದಲ್ಲೇ ಅದು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್‌ನ ನಿಯಮಗಳಲ್ಲಿ ಕೆಲವೊಂದು ಮಾರ್ಪಾಡು ಮಾಡುವಂತೆ ಕೇಂದ್ರ ಸರಕಾರವನ್ನು ಕೋರಿತ್ತು. ಆ ಮೂಲಕ ತನ್ನಲ್ಲಿನ ಎಲ್ಲಾ 7.5 ಕೋಟಿ ಚಿನ್ನವನ್ನೂ ಆ ಯೋಜನೆಯಲ್ಲಿ ನಿಯೋಜಿಸುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿತ್ತು.
ಟಿಟಿಡಿಯ ಈ ಆಲೋಚನೆ ಕಾರ್ಯಗತವಾದಲ್ಲಿ ತಿರುಪತಿ ತಿಮ್ಮಪ್ಪನ ಚಿನ್ನವು ಆವರ್ತನ ಕ್ರಮದಲ್ಲಿ ಚಿನ್ನದ ಹೊಳೆಯನ್ನೇ ಹರಿಸುವುದಲ್ಲದೆ ಪ್ರಧಾನಿ ಮೋದಿ ಅವರ ಚಿನ್ನದ ಯೋಜನೆ ಭಾರೀ ಯಶಸ್ಸನ್ನು ಕಂಡು ದೇಶದ ವಿದೇಶ ವಿನಿಮಯವನ್ನು ಕಾಪಾಡುವ ಮಹತ್ವಾಕಾಂಕ್ಷೆಯ ಯೋಜನೆ ಸಾಕಾರಗೊಂಡು ಇಡೀ ದೇಶಕ್ಕೆ ಲಾಭವಾಗಲಿದೆ.
- ಶ್ರೀ
POPULAR STORIES :
5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!
ರೈ… ಅನ್ ಟೋಲ್ಡ್ ಸ್ಟೋರಿಗೆ ಮುಹೂರ್ತ ಫಿಕ್ಸ್..!
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!
ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?
ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ