ಈ ವಾರದ TRP.. ಹೇಗಿದೆ ರೇಟಿಂಗ್ ರೇಸ್ ನಲ್ಲಿ ಚಾನೆಲ್ ಗಳ ಓಟ..!!
ಪ್ರತಿ ವಾರದ ಹಾಗೆ ಈ ವಾರವು ಚಾನೆಲ್ ಗಳ ರೇಟಿಂಗ್ ಅಂಕಿಅಂಶ ಬಿಡುಗಡೆಯಾಗಿದೆ.. ಯಾವ ಚಾನೆಲ್ ರೇಟಿಂಗ್ ಡ್ರಾಪ್ ಆಗಿದೆ..? ಜಾಸ್ತಿ ಆಗಿದ್ಯಾ..? ಅನ್ನೋ ವಿಚಾರಕ್ಕೆ ಚಾನೆಲ್ ನವರಲ್ಲು ಗೊಂದಲಗಳು ಇರುತ್ತವೆ.. ಸದ್ಯಕ್ಕೆ ಕನ್ನಡ ನ್ಯೂಸ್ ಚಾನೆಲ್ ಗಳು ಈ ವಾರ ತಮ್ಮ ತಮ್ಮ ಅಸ್ತಿತ್ವವನ್ನ ಎಂದಿನಂತೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.. ಎಂದಿನಂತೆ 171 ರೇಟಿಂಗ್ ನ ಜೊತೆಗೆ ಮೊದಲ ಸ್ಥಾನವನ್ನ ಪಡೆದುಕೊಂಡಿದ್ದೆ ಟಿವಿ-9 ನ್ಯೂಸ್ ಚಾನೆಲ್..
ಇನ್ನು ಎರಡನೇ ಸ್ಥಾನದಲ್ಲಿ ಕಾಯಂ ಸದಸ್ಯರಾಗುರುವ ಪಬ್ಲಿಕ್ ಟಿವಿ 64 ರೇಟಿಂಗ್ ಜೊತೆಗೆ ಎರಡನೇ ಸ್ಥಾನದಲ್ಲಿದ್ರೆ, ಸುವರ್ಣ ನ್ಯೂಸ್ 53 ರೇಟಿಂಗ್ ನ ಜೊತೆಗೆ ಮೂರನೇ ಸ್ಥಾನದಲ್ಲಿದೆ.. ಇನ್ನುಳಿದಂತೆ 42 ರೇಟಿಂಗ್ ನೊಂದಿಗೆ ನ್ಯೂಸ್ 18 (4 ಸ್ಥಾನ) ವನ್ನ ಪಡೆದುಕೊಂಡಿದೆ.. ದಿಗ್ವಿಜಯ ನ್ಯೂಸ್ 19 ಜಿಆರ್ ಪಿಯನ್ನ ಪಡೆದು 5 ಸ್ಥಾನದಲ್ಲಿದೆ.. ಇನ್ನೂಳಿದಂತೆ, ಬಿ ಟಿವಿ 13, ಟಿವಿ5 12, ಉದಯ ನ್ಯೂಸ್ 9, ಪ್ರಜಾ ಟಿವಿ 10, ಕಸ್ತೂರಿ ನ್ಯೂಸ್ 6, ನ್ಯೂ ಎಕ್ಸ್ ಕನ್ನಡ 3, ಟಿವಿ1 ನ್ಯೂಸ್ 4 ಜಿಆರ್ ಪಿಯೊಂದಿಗೆ ನಂತರ ಸ್ಥಾನಗಳಲ್ಲಿವೆ.