ಮೂವರು ಅಪ್ರಾಪ್ತರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.
ಓರ್ವ ಬಾಲಕ ಮತ್ತು ಇಬ್ಬರು ಬಾಲಕಿಯರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೇ ಪರಿಗಣಿಸಲಾಗಿದೆ.

ದೇಶಾಲ್ ಖಾನ್ (17), ಶಾಂತಿ (13) ಮತ್ತು ಮಧು (12) ಆತ್ಮಹತ್ಯೆಗೆ ಶರಣಾದ ಅಪ್ರಾಪ್ತರು. ಭಾನುವಾರ ಮುಂಜಾನೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇವರ ಶವ ಸಿಕ್ಕಿದೆ. ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಶಾಂತಿ ತಂದೆ ಭೈರು ಮೆಗ್ವಾಲ್ ಆರೋಪಿಸಿದ್ದಾರೆ. ಮೃತ ಬಾಲಕ ಕೆಟ್ಟವನಿದ್ದ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಮೂವರ ನಡುವೆ ಪ್ರೀತಿಯ ಸಂಬಂಧವಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

Bodies of three minors-two girls and one boy found hanging from a tree in Rajasthan's Barmer. Police begin the investigation. Kin of the girls have alleged that the minors have been murdered pic.twitter.com/HL2Vmk5ziM
— ANI (@ANI) April 16, 2018






