ತ್ರಿಪುರ ಮೂಲದ ಜೋಡಿಯೊಂದು ಅಲ್ಲಿಂದ ಪರಾರಿಯಾಗಿ ಬೆಂಗಳೂರಲ್ಲಿ ವಾಸಿಸುತ್ತಿದ್ದು, ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಸೋರಾಬ್ ಹುಸೈನ್ ಬಂಧಿತ. ಹಿಂದೂ ಅಪ್ರಾಪ್ತೆಯನ್ನು ಪ್ರೀತಿಸಿ ಬೆಂಗಳೂರಿಗೆ ಕರೆತಂದು ವಾಸಿಸುತ್ತಿದ್ದ. ಇದೀಗ ಲವ್ ಜಿಹಾದ್ ಶಂಕೆ ಮೂಡಿದೆ.
ಸೋರಾಬ್ ಫೇಸ್ ಬುಕ್ ಮೂಲಕ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡಿದ್ದಾನೆ. ಬರು ಬರುತ್ತಾ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.ಕಳೆದ ಮೂರು ತಿಂಗಳ ಹಿಂದೆ ಈ ಜೋಡಿ ತ್ರಿಪುರದಿಂದ ಪರಾರಿಯಾಗಿ ಚೆನ್ನೈ ಮತ್ತು ಊಟಿಯಲ್ಲಿ ಸುತ್ತಾಡಿ ವಾರದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ. ನಾರಾಯಣಪುರ ಶೆಡ್ ನಲ್ಲಿ ವಾಸವಿದ್ದರು.
ಅಪ್ರಾಪ್ತೆ ನಾಪತ್ತೆ ಆಗಿರುವ ಬಗ್ಗೆ ಆಕೆಯ ಸಹೋದರ ತ್ರಿಪುರದಲ್ಲಿ ದೂರು ನೀಡಿದ್ದರು.ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದರು. ಫೋನ್ ಕರೆಗಳನ್ನು ಟ್ರ್ಯಾಪ್ ಮಾಡ್ತಿದ್ದರು.
ಅಲ್ಲದೆ ಅಲ್ಲಿನ ಸಂಘಟನೆಯೊಂದು ಈ ಜೋಡಿಯ ಹುಡುಕಾಟ ನಡೆಸುತ್ತಿತ್ತು.
ನಗರದ ಸಂಘಟನೆಯೊಂದಕ್ಕೆ ಇವರ ಸುಳಿವು ಸಿಕ್ಕಿದ್ದು, ಪೊಲೀಸರಿಗೆ ತಿಳಿಸಿದ್ದಾರೆ. ಯುವಕನನ್ನು ಪೊಲೀಸರು ಬಂಧಿಸಿದ್ದು, ತ್ರಿಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.