TNIT ಅವಾರ್ಡ್ಸ್ ಗೆ ಡೇಟ್ ಫಿಕ್ಸ್

1
32

ಮಾಧ್ಯಮ ಕ್ಷೇತ್ರದ ಸಾಧಕರನ್ನು ಗೌರವಿಸುವ ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ 2021-22 ಕ್ಕೆ ದಿನಾಂಕ ನಿಗದಿಯಾಗಿದೆ. ಡಿ.22 ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಟಿವಿ ನಿರೂಪಕರು, ವರದಿಗಾರರು, ವಿಡಿಯೋ ಎಡಿಟರ್ ಗಳು, ವಾಯ್ಸ್ ಓವರ್ ಆರ್ಟಿಸ್ಟ್, ಕ್ಯಾಮರಾಮನ್ ಗಳು ಸೇರಿದಂತೆ ವಿವಿಧ ಕೆಟಗರಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಜೊತೆಗೆ ಕೆಲವು ವಿಶೇಷ ಅವಾರ್ಡ್ಸ್ ಸಹ ನೀಡಲಾಗುತ್ತದೆ. ಎಲ್ಲಾ ವಿಭಾಗದಲ್ಲಿಯೂ ಪುರುಷ ಮತ್ತು ಮಹಿಳಾ ಸಾಧಕರನ್ನು ಗೌರವಿಸಲಾಗುತ್ತಿದೆ.

2017ರಿಂದ ಆರಂಭವಾದ ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ ಸತತ 3 ವರ್ಷ ಯಶಸ್ವಿಯಾಗಿ ನಡೆದಿತ್ತು. 2019-20 ನೇ ಸಾಲಿನ ಪ್ರಶಸ್ತಿ ಪ್ರಧಾನಕ್ಕೆ ಕೊರೋನಾ ಅಡ್ಡಿಯಾಗಿತ್ತು. ಅನಿವಾರ್ಯವಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಇದೀಗ ಒಂದು ವರ್ಷದ ಅವಾರ್ಡ್ಸ್ ಬ್ರೇಕ್ ನ ಬಳಿಕ 2020-21 ನೇ ಸಾಲಿನ ಕಾರ್ಯಕ್ರಮವನ್ನು ಅರ್ಥಾತ್ 4 ನೇ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಡೆಸಲು ನಿಮ್ಮ ನ್ಯೂ ಇಂಡಿಯನ್ ಟೈಮ್ಸ್ ನಿರ್ಧರಿಸಿದೆ.

ಡಿಸೆಂಬರ್ ನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದ್ದು, ಸದ್ಯದಲ್ಲೇ ದಿನಾಂಕ ಪ್ರಕಟಿಸಲಾಗುವುದು.

ಹೌದು, ಕನ್ನಡ ಡಿಜಿಟಿಲ್ ಮಾಧ್ಯಮ ಲೋಕದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ವೆಬ್ ಪೋರ್ಟಲ್ ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ . ಈಗಾಗಲೇ ನಿಮಗೆ ತಿಳಿದಿರುವಂತೆ ನಿಮ್ಮ ಈ  ಸಂಸ್ಥೆಯು ಪ್ರತಿ ವರ್ಷ ದೃಶ್ಯ ಮಾಧ್ಯಮ ಲೋಕದ ವಿವಿಧ ವಿಭಾಗಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಿಸತ್ತಿದೆ.

2015ರಲ್ಲಿ ಆರಂಭವಾದ ದಿ ನ್ಯೂ ಇಂಡಿಯನ್ ಟೈಮ್ಸ್ 2017 ರಿಂದ ಮಾಧ್ಯಮ ಪ್ರಶಸ್ತಿ ನೀಡಲು ಆರಂಭಿಸಿತು. ಮೊದಲ ವರ್ಷ ನಿರೂಪಕರಿಗೆ ಮಾತ್ರ ಪ್ರಶಸ್ತಿ ನೀಡಲಾಗಿತ್ತು. ತದನಂತರ ವರದಿಗಾರರು, ಕ್ಯಾಮರಾಮನ್ ಗಳು, ವಾಯ್ಸ್ ಓವರ್ ನೀಡುವವರು ಸೇರಿದಂತೆ ಹತ್ತಾರು ವಿಭಾಗದ ಮಾಧ್ಯಮ ಮಿತ್ರರಿಗೆ ಪ್ರಶಸ್ತಿ ನೀಡಲಾಯಿತು.  ಈ ಬಾರಿ ಇನ್ನೂ ಕೆಲವು ಹೆಚ್ಚುವರಿ ಕೆಟಗರಿ ಸೇರ್ಪಡೆಯಾಗಲಿದೆ.

ಮೊದಲ ವರ್ಷ ಅಂದರೆ 2017 ರಲ್ಲಿ ಕರ್ನಾಟಕ ಫೇವರೇಟ್ ಆ್ಯಂಕರ್ ಅವಾರ್ಡ್ ಅನ್ನು ನೀಡಿತ್ತು. ಆ ವರ್ಷ ಅಂದು ಬಿಟಿವಿಯಲ್ಲಿದ್ದ , ಪ್ರಸ್ತುತ TV5ನ ಎಕ್ಸಿಕ್ಯೂಟಿವ್ ಎಡಿಟರ್ ಆಗಿರುವ ಚಂದನ್ ಶರ್ಮಾ ಪುರುಷರ ವಿಭಾಗದಲ್ಲಿ ವಿನ್ನರ್ ಆಗಿದ್ದರು. ಇಂದು ಫಸ್ಟ್ ನ್ಯೂಸ್ ನಲ್ಲಿರುವ ಸೋಮಣ್ಣ ಮಾಚಿಮಾಡ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಅಂತೆಯೇ ಮಹಿಳಾ ವಿಭಾಗದಲ್ಲಿ ಟಿವಿ9 ನ ಸುಕನ್ಯಾ ಸಂಪತ್ ಅವರು ವಿನ್ನರ್ ಆಗಿಯೂ, ಇಂದು ಫಸ್ಟ್ ನ್ಯೂಸ್ ಬಳಗದಲ್ಲಿರುವ ಜಾಹ್ನವಿ ಅವರು ರನ್ನರ್ ಅಪ್ ಆಗಿದ್ದರು.

ಮೊದಲ ವರ್ಷದ (2016 -2017) ಜನರ ನೆಚ್ಚಿನ ನಿರೂಪಕರು  (ಕರ್ನಾಟಕ ಫೇವರೇಟ್ ಆ್ಯಂಕರ್ಸ್)

ಪುರುಷರ ವಿಭಾಗ

ವಿನ್ನರ್ – ಚಂದನ್ ಶರ್ಮಾ

 

ರನ್ನರ್ ಅಪ್ – ಸೋಮಣ್ಣ ಮಾಚಿಮಾಡ

 

ಮಹಿಳಾ ವಿಭಾಗ

ವಿನ್ನರ್ – ಸುಕನ್ಯಾ ಸಂಪತ್

ರನ್ನರ್ ಅಪ್ –  ಜಾಹ್ನವಿ

ಕಳೆದ ವರ್ಷ ಅಂದರೆ 2018 ರಲ್ಲಿ ಆ್ಯಂಕರ್ ಗಳಿಗೆ ಮಾತ್ರವಲ್ಲದೆ‌ ರಿಪೋಟರ್ಸ್, ವಾಯ್ಸ್ ವೋವರ್ ಆರ್ಟಿಸ್ಟ್, ಕ್ಯಾಮರಾಮನ್, ವಿಡಿಯೋ ಎಡಿಟರ್ಸ್ ಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.‌ ಅಷ್ಟೇ ಅಲ್ಲದೆ ಕ್ರೀಡೆ, ಸಿನಿಮಾ, ರಾಜಕೀಯ, ಅಪರಾಧ ವಿಭಾಗ ಸೇರಿದಂತೆ ಕೆಲವೊಂದು ವಿಭಾಗದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಅನುಭವಿ ಪತ್ರಕರ್ತರನ್ನು ಗೌರವಿಸಲಾಗಿತ್ತು.
ಆ್ಯಂಕರ್ ವಿಭಾಗಕ್ಕೆ ಸಂಬಂಧಪಟ್ಟಂತೆ ಜನರೇ ಮತಹಾಕಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಪುರುಷರ ವಿಭಾಗದಲ್ಲಿ ಟಿವಿ9 ನ ಮಾಲ್ತೇಶ್ ಅವರನ್ನು ವಿನ್ನರ್ ಆಗಿ, ಟಿವಿ5 ನ ರಾಘವ ಸೂರ್ಯ ಅವರನ್ನು ರನ್ನರ್ ಅಪ್ ಆಗಿ ಜನ ಆಯ್ಕೆ ಮಾಡಿದ್ದರು. ಅಂತೆಯೇ ಮಹಿಳಾ ವಿಭಾಗದಲ್ಲಿ ಸುಕನ್ಯಾ ಸಂಪತ್ ಅವರು ಸತತವಾಗಿ ಎರಡನೇ ಬಾರಿ ಜನರಿಂದ ಪ್ರಶಸ್ತಿಗೆ ಭಾಜನರಾಗಿದ್ದರು. ಬಿಟಿವಿಯ ಶ್ರುತಿ ಗೌಡ ರನ್ನರ್ ಅಪ್ ಆಗಿದ್ದರು. ಸುವರ್ಣ ನ್ಯೂಸ್ ನ ಜಯಪ್ರಕಾಶ್ ಶೆಟ್ಟಿ ಮತ್ತು ಟಿವಿ9ನಲ್ಲಿದ್ದ ರಾಧಿಕಾ ರಂಗನಾಥ್ ಅವರಿಗೆ ಆಲ್ ರೌಂಡರ್ ಇನ್ ಎಲೆಕ್ಟ್ರಾನಿಕ್ ಮೀಡಿಯಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಮೂರನೇ ವರ್ಷ, ಅರ್ಥಾತ್ ಕಳೆದ ಬಾರಿ ಸಹ ವಿವಿಧ ವಿಭಾಗದವರನ್ನು ಗೌರವಿಸಲಾಗಿತ್ತು.

ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ 2017-18

ಬೆಸ್ಟ್ ಆ್ಯಂಕರ್
(ಪುರುಷರ ವಿಭಾಗ)
1) ಮಾಲ್ತೇಶ್ ಟಿವಿ9 (ವಿನ್ನರ್)


2) ರಾಘವಸೂರ್ಯ ಟಿವಿ5 (ರನ್ನರ್ ಅಪ್)


(ಮಹಿಳಾ ವಿಭಾಗ)
1) ಸುಕನ್ಯಾ ಟಿವಿ9 (ವಿನ್ನರ್)


2) ಶ್ರುತಿಗೌಡ ಬಿಟಿವಿ (ರನ್ನರ್ ಅಪ್)

 

ಬೆಸ್ಟ್ ರಿಪೋರ್ಟರ್
(ಪುರುಷರ ವಿಭಾಗ)

1) ಮಾರುತಿ -ದಿಗ್ವಿಜಯ (15 ವರ್ಷ) (ವಿನ್ನರ್)


2) ಪ್ರಸನ್ನ -ಬಿಟಿವಿ (12 ವರ್ಷ)(ರನ್ನರ್ ಅಪ್)


(ಮಹಿಳಾ ವಿಭಾಗ)
1)ಸೌಮ್ಯ ಕಳಸ ನ್ಯೂಸ್ 18 (8 ವರ್ಷ) (ವಿನ್ನರ್)


2 ) ಮಮತ ಸುವರ್ಣ ( 6 ) (ರನ್ನರ್ ಅಪ್)


ಕ್ಯಾಮರಮನ್
(ಪುರುಷರ ವಿಭಾಗ)
1) ಅಜೀಜ್ ಭಾಷ TV5 ( 16) (ವಿನ್ನರ್)


2) ದಿವಾಕರ್ ದಿಗ್ವಿಜಯ ( 12) (ರನ್ನರ್ ಅಪ್)

ವಾಯ್ಸ್ ವೋವರ್
(ಪುರುಷರ ವಿಭಾಗ)
1) ರಾಜೇಶ್ ಶೆಟ್ಟಿ ಟಿವಿ9 (18) (ವಿನ್ನರ್)


2) ದಾಮೋದರ್ ದಂಡೋಲೆ ದಿಗ್ವಿಜಯ (11) (ರನ್ನರ್ ಅಪ್)


(ಮಹಿಳಾ ವಿಭಾಗ)
1) ಪ್ರೀತಿ -ಪ್ರಜಾ ( 8 ವರ್ಷ)(ವಿನ್ನರ್)


2) ಸ್ನೇಹ ರಾಜ್ ನ್ಯೂಸ್ (3) (ರನ್ನರ್ ಅಪ್)

ವೀಡಿಯೋ ಎಡಿಟರ್
(ಪುರುಷರ ವಿಭಾಗ)

1) ಸೋಮಶೇಖರಪ್ಪ ನ್ಯೂಸ್ 18 (13 ವರ್ಷ) (ವಿನ್ನರ್)


2) ಧನಂಜಯ್ ಸುವರ್ಣ ನ್ಯೂಸ್ ( 11 ವರ್ಷ) (ರನ್ನರ್ ಅಪ್)

(ಮಹಿಳಾ ವಿಭಾಗ)
1) ನಂದ ಸುವರ್ಣ ನ್ಯೂಸ್ ( 18)(ವಿನ್ನರ್)

2) ಶರ್ಮಿಳಾ ಟಿವಿ 5 ( 4 ವರ್ಷ) (ರನ್ನರ್ ಅಪ್)

1)ಸಿನಿಮಾ ರಿಪೋರ್ಟರ್ – ಸುಗುಣ , ಸುವರ್ಣ ನ್ಯೂಸ್

2) ಪೊಲಿಟಿಕಲ್ ರಿಪೋರ್ಟರ್ – ಆನಂದ್ ಪಿ ಬೈಡಮನೆ ಸುವರ್ಣ ನ್ಯೂಸ್

3) ಕ್ರೈಂ ರಿಪೋರ್ಟರ್ – ಅಭಿಷೇಕ್ ಜಯಶಂಕರ್ , TV5

4) ಸ್ಪೋರ್ಟ್ಸ್ ರಿಪೋರ್ಟರ್ – ಸುಮ ದಿಗ್ವಿಜಯ


5) ಬೆಸ್ಟ್ ಇನ್ವೆಸ್ಟಿಗೇಟಿವ್ ರಿಪೋರ್ಟರ್ – ವಿಜಯಲಕ್ಷ್ಮಿ ಶಿಬರೂರು – ನ್ಯೂಸ್ 18

6) ಆಲ್ ರೌಂಡರ್ ಇನ್ ಎಲೆಕ್ಟ್ರಾನಿಕ್ ಮೀಡಿಯಾ (ಮೇಲ್) – ಜಯಪ್ರಕಾಶ್ ಶೆಟ್ಟಿ, ಸುವರ್ಣ ನ್ಯೂಸ್

 


7) ಆಲ್ ರೌಂಡರ್ ಇನ್ ಎಲೆಕ್ಟ್ರಾನಿಕ್ ಮೀಡಿಯಾ (ಫಿಮೇಲ್ )- ರಾಧಿಕ ,TV9

ಮೊದಲೆರಡು ವರ್ಷಕ್ಕಿಂತ ವಿಭಿನ್ನವಾಗಿದ್ದ 2019ರ ಕಾರ್ಯಕ್ರಮದಲ್ಲಿ ನಟರಾದ ವಿಜಯ್ ರಾಘವೇಂದ್ರ, ಶರತ್, ಸಂಚಾರಿ ವಿಜಯ್ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು. ನಿರೂಪಕರು, ವರದಿಗಾರರು, ಹಿನ್ನೆಲೆ ಧ್ವನಿ, ವಿಡಿಯೋ ಎಡಿಟರ್​ಗಳು, ಕ್ಯಾಮರಾಮನ್​ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದೇರೀತಿ ವಿಶೇಷವಾಗಿ ಲೈಫ್ ಟೈಮ್ ಅಚೀವ್ ಮೆಂಟ್, ಎಕ್ಸೆಲೆನ್ಸಿ ಇನ್ ಜರ್ನಲಿಸಂ. ಆಲ್ ರೌಂಡ್ ಪರ್ಫಾರ್ಮರ್ ಸೇರಿದಂತೆ ಹತ್ತಾರು ವಿಶೇಷ ಪ್ರಶಸ್ತಿ ನೀಡಲಾಯಿತು. ನೆಚ್ಚಿನ ನಿರೂಪಕರನ್ನು ಮತ ಹಾಕುವ ಮೂಲಕ ಜನರೇ ಆಯ್ಕೆ ಮಾಡಿದ್ದರು.

 

2019ರ ಸಂಪೂರ್ಣ ಪಟ್ಟಿ

ಆ್ಯಂಕರ್ ( ಮೇಲ್ )
ವಿನ್ನರ್ – ಅರವಿಂದ್ ಸೇತುರಾವ್ – ಪಬ್ಲಿಕ್ ಟಿವಿ


————-

ಆ್ಯಂಕರ್ ( ಮೇಲ್)
ರನ್ನರ್ ಅಪ್ – ರಕ್ಷತ್ ಶೆಟ್ಟಿ – ದಿಗ್ವಿಜಯ


——

ಆ್ಯಂಕರ್ (ಮೇಲ್)
ರನ್ನರ್ ಅಪ್ – ಅಮರ್ ಪ್ರಸಾದ್ – ಟಿವಿ9

ಆ್ಯಂಕರ್ (ಫೀಮೆಲ್)
ವಿನ್ನರ್ – ದಿವ್ಯ ಜ್ಯೋತಿ – ಪಬ್ಲಿಕ್ ಟಿವಿ –


—-
ಆ್ಯಂಕರ್ (ಫೀಮೆಲ್)
ರನ್ನರ್ ಅಪ್ – ನಿಶಾ ಶೆಟ್ಟಿ – ಟಿವಿ 9

—-
ರಿಪೋರ್ಟರ್ (ಮೇಲ್)
ವಿನ್ನರ್ – ದತ್ತರಾಜ್ ಪಡುಕೋಣೆ -ಟಿವಿ5



ರಿಪೋರ್ಟರ್ (ಮೇಲ್)
ರನ್ನರ್ ಅಪ್ -ಸುರೇಶ್ ಬಾಳಿಕಾಯ್ -ದಿಗ್ವಿಜಯ
—–
ರಿಪೋರ್ಟರ್ (ಫೀಮೆಲ್)
ವಿನ್ನರ್ : ವೀಣಾ ಸಿದ್ದಾಪುರ್ ( ಟಿವಿ5)


—-
ರಿಪೋರ್ಟರ್ (ಫೀಮೆಲ್ )
ರನ್ನರ್ ಅಪ್ – ರಶ್ಮಿ (ಪ್ರಜಾಟಿವಿ)
—-
ಕ್ಯಾಮರ ಮನ್ (ಮೇಲ್)
ವಿನ್ನರ್ – ಸುಪ್ರೀತ್ -ಪಬ್ಲಿಕ್ ಟಿವಿ

ಕ್ಯಾಮರಾ ಮನ್ ( ಮೇಲ್)
ರನ್ನರ್ ಅಪ್ -ಮೋಹನ್ ರಾಜ್ – ಸುವರ್ಣನ್ಯೂಸ್

ವಾಯ್ಸ್ ವೋವರ್ (ಮೇಲ್ )
ವಿನ್ನರ್ – ರಾಜೇಶ್ ನಾರಾಯಣ್ -ಟಿವಿ9
—-
ವಾಯ್ಸ್ ವೋವರ್ ( ಮೇಲ್)
ರನ್ನರ್ ಅಪ್ – ಸಂದೇಶ್ ಪೇತ್ರಿ – ನ್ಯೂಸ್ 18
—-
ವಾಯ್ಸ್ ವೋವರ್ ( ಫೀಮೆಲ್)
ವಿನ್ನರ್ – ಚೈತ್ರ -ದಿಗ್ವಿಜಯ
—-
ವಾಯ್ಸ್ ವೋವರ್ (ಫೀಮೆಲ್ )
ರನ್ನರ್ ಅಪ್ – ವೈದೇಹಿ ( ರಾಜ್ ನ್ಯೂಸ್)

ವೀಡಿಯೋ ಎಡಿಟರ್ (ಮೇಲ್ )
ವಿನ್ನರ್ – ಪ್ರಭು – ಟಿವಿ9

ವೀಡಿಯೋ ಎಡಿಟರ್ (ಮೇಲ್)
ರನ್ನರ್ ಅಪ್ – ಪ್ರಸಾದ್ -ಪವರ್ ಟಿವಿ

ವಿಡಿಯೋ ಎಡಿಟರ್ (ಫೀಮೆಲ್)
ವಿನ್ನರ್ – ಅನಿತಾ -ಸುವರ್ಣ ನ್ಯೂಸ್

ವಿಡಿಯೋ ಎಡಿಟರ್ (ಫೀಮೆಲ್)
ರನ್ನರ್ ಅಪ್ -ಮೋನಿಕಾ -ಟಿವಿ5
—-+
LIFE TIME ACHIEVEMENT AWARD
ರಂಗನಾಥ್ ಭಾರಧ್ವಜ್ -ಟಿವಿ9


—–
SPECIAL AWARD
EXCELLENCY IN JOURNALISM (FILM)
ಗಣೇಶ್ ಕಾಸರಗೋಡು – ಹಿರಿಯ ಪತ್ರಕರ್ತರು.
—–

SPECIAL AWARD
EXCELLENCY IN JOURNALISM (CRIME)
ಕಿರಣ್ – ಟಿವಿ9
—+
SPECIAL AWARD
EXCELLENCY IN JOURNALISM (SPORTS)
ವಿನಾಯಕ್ ಟಿವಿ9
—-
All ROUND PERFORMER
ಪ್ರಶಾಂತ್ ಬಿಸ್ಲೇರಿ -ಪವರ್ ಟಿವಿ


—–
All ROUND PERFORMER
ಶೋಭಾ – ಸುವರ್ಣನ್ಯೂಸ್


——
SPECIAL AWARD
EXCELLENCY IN ANCHORING
– ಭಾವನ – ಸುವರ್ಣ ನ್ಯೂಸ್



Fastest Growing Kannda News Channel – POWER TV

ಇದೇ ವೇಳೆ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಟಿಎನ್ ಐ ಟಿ ಮೀಡಿಯಾ ಅವಾರ್ಡ್ಸ್ 2020 ಯಾವಾಗ?

ಕಳೆದ ವರ್ಷ ಜುಲೈ 20ರಂದು ಕಾರ್ಯಕ್ರಮ ನಡೆದಿತ್ತು. ಆದರೆ ಈ ವರ್ಷ ಕೊರೋನಾ ಮಹಾಮಾರಿ ಕಾರಣದಿಂದಾಗಿ ಜೂನ್ – ಜುಲೈನಲ್ಲಿ ಕಾರ್ಯಕ್ರಮ ನಡೆಸುವುದು ಕಷ್ಟಸಾಧ್ಯವಾಗಿದೆ. ವರ್ಷಕ್ಕಿಂತ ವರ್ಷ ವಿಭಿನ್ನವಾಗಿ ಕಾರ್ಯಕ್ರಮ ನಡೆದಿದೆ ಹಾಗೂ ಪ್ರಶಸ್ತಿಗಳ ಸಂಖ್ಯೆಯೂ ಹೆಚ್ಚಿದೆ. ಅಂತೆಯೇ ಈ ಬಾರಿಯೂ ಕಳೆದ ಮೂರು ವರ್ಷಕ್ಕಿಂತ ದೊಡ್ಡಮಟ್ಟಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಯೋಚಿಸಿದ್ದೇವೆ. ಆ ಬಗ್ಗೆ ಸಿದ್ಧತೆಯಲ್ಲಿದ್ದೇವೆ . ಶೀಘ್ರದಲ್ಲೇ ಈ ಬಾರಿಯ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ .. ಕುತೂಹಲವಿರಲಿ …

 

 

1 COMMENT

LEAVE A REPLY

Please enter your comment!
Please enter your name here