TNIT ಮೀಡಿಯಾ ಅವಾರ್ಡ್ಸ್-2019 ಯಾವಾಗ?

0
281

ದಿ ನ್ಯೂ ಇಂಡಿಯನ್ ಟೈಮ್ಸ್ ವೆಬ್ ಪೋರ್ಟಲ್ ದೃಶ್ಯ ಮಾಧ್ಯಮ ಲೋಕದ ವಿವಿಧ ವಿಭಾಗಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಈಗಾಗಲೇ ನಿಮಗೆ ಗೊತ್ತಿದೆ.2015 ರಲ್ಲಿ ಆರಂಭವಾದ ನಿಮ್ಮ ನೆಚ್ಚಿನ ವೆಬ್ ಪೋರ್ಟಲ್ ದಿ ನ್ಯೂ ಇಂಡಿಯನ್ ಟೈಮ್ಸ್ 2017 ರಿಂದ ಮಾಧ್ಯಮ ಪ್ರಶಸ್ತಿ ನೀಡಲು ಆರಂಭಿಸಿತು. ಮೊದಲ ವರ್ಷ ಅಂದರೆ 2017 ರಲ್ಲಿ ಕರ್ನಾಟಕ ಫೇವರೇಟ್ ಆ್ಯಂಕರ್ ಅವಾರ್ಡ್ ಅನ್ನು ನೀಡಿತ್ತು. ಆ ವರ್ಷ ಅಂದು ಬಿಟಿವಿಯಲ್ಲಿದ್ದ , ಪ್ರಸ್ತುತ ಪವರ್ ಟಿವಿಯ ಎಕ್ಸಿಕ್ಯೂಟಿವ್ ಎಡಿಟರ್ ಆಗಿರುವ ಚಂದನ್ ಶರ್ಮಾ ಅವರು ಪುರುಷರ ವಿಭಾಗದಲ್ಲಿ ವಿನ್ನರ್ ಆಗಿದ್ದರು, ಇಂದು ಫಸ್ಟ್ ನ್ಯೂಸ್ ನಲ್ಲಿರುವ ಸೋಮಣ್ಣ ಮಾಚಿಮಾಡ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಅಂತೆಯೇ ಮಹಿಳಾ ವಿಭಾಗದಲ್ಲಿ ಟಿವಿ9 ನ ಸುಕನ್ಯಾ ಸಂಪತ್ ಅವರು ವಿನ್ನರ್ ಆಗಿಯೂ, ಇಂದು ಫಸ್ಟ್ ನ್ಯೂಸ್ ಬಳಗದಲ್ಲಿರುವ ಜಾಹ್ನವಿ ಅವರು ರನ್ನರ್ ಅಪ್ ಆಗಿದ್ದರು.
ಕಳೆದ ವರ್ಷ ಅಂದರೆ 2018 ರಲ್ಲಿ ಆ್ಯಂಕರ್ ಗಳಿಗೆ ಮಾತ್ರವಲ್ಲದೆ‌ ರಿಪೋಟರ್ಸ್, ವಾಯ್ಸ್ ವೋವರ್ ಆರ್ಟಿಸ್ಟ್, ಕ್ಯಾಮರಾಮನ್, ವಿಡಿಯೋ ಎಡಿಟರ್ಸ್ ಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.‌ ಅಷ್ಟೇ ಅಲ್ಲದೆ ಕ್ರೀಡೆ, ಸಿನಿಮಾ, ರಾಜಕೀಯ, ಅಪರಾಧ ವಿಭಾಗ ಸೇರಿದಂತೆ ಕೆಲವೊಂದು ವಿಭಾಗದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಅನುಭವಿ ಪತ್ರಕರ್ತರನ್ನು ಗೌರವಿಸಲಾಗಿತ್ತು.
ಆ್ಯಂಕರ್ ವಿಭಾಗಕ್ಕೆ ಸಂಬಂಧಪಟ್ಟಂತೆ ಜನರೇ ಮತಹಾಕಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಪುರುಷರ ವಿಭಾಗದಲ್ಲಿ ಟಿವಿ9 ನ ಮಾಲ್ತೇಶ್ ಅವರನ್ನು ವಿನ್ನರ್ ಆಗಿ, ಟಿವಿ5 ನ ರಾಘವ ಸೂರ್ಯ ಅವರನ್ನು ರನ್ನರ್ ಅಪ್ ಆಗಿ ಜನ ಆಯ್ಕೆ ಮಾಡಿದ್ದರು. ಅಂತೆಯೇ ಮಹಿಳಾ ವಿಭಾಗದಲ್ಲಿ ಸುಕನ್ಯಾ ಸಂಪತ್ ಅವರು ಸತತವಾಗಿ ಎರಡನೇ ಬಾರಿ ಜನರಿಂದ ಪ್ರಶಸ್ತಿಗೆ ಭಾಜನರಾಗಿದ್ದರು. ಬಿಟಿವಿಯ ಶ್ರುತಿ ಗೌಡ ರನ್ನರ್ ಅಪ್ ಆಗಿದ್ದರು. ಸುವರ್ಣ ನ್ಯೂಸ್ ನ ಜಯಪ್ರಕಾಶ್ ಶೆಟ್ಟಿ ಮತ್ತು ಟಿವಿ9ನಲ್ಲಿದ್ದ ರಾಧಿಕಾ ರಂಗನಾಥ್ ಅವರಿಗೆ ಆಲ್ ರೌಂಡರ್ ಇನ್ ಎಲೆಕ್ಟ್ರಾನಿಕ್ ಮೀಡಿಯಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಇದೀಗ ಮೂರನೇ ವರ್ಷದ ಟಿ.ಎನ್.ಐ.ಟಿ ಮಿಡಿಯಾ ಅವಾರ್ಡ್ಸ್, ಕಳೆದ ಎರಡು ವರ್ಷಕ್ಕಿಂತ ವಿಭಿನ್ನವಾಗಿ, ವಿನೂತನವಾಗಿ ಕಾರ್ಯಕ್ರಮ ನಡೆಸಲು ಯೋಜಿಸಿದ್ದೇವೆ. ಅತೀ ಶೀಘ್ರದಲ್ಲಿ ಪ್ರಶಸ್ತಿ ಪ್ರಧಾನ ಯಾವಾಗ? ಆಯ್ಕೆ ಪ್ರಕ್ರಿಯೆ ಯಾವತ್ತಿಂದ ಶುರುವಾಗುತ್ತೆ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ನಿಮ್ಮೊಡನೆ ಶೇರ್ ಮಾಡಿಕೊಳ್ಳುತ್ತೇವೆ.
ಈ ಹಿಂದಿನಂತೆಯೇ ನಿಮ್ಮ ಸಪೋರ್ಟ್ ಇರಲಿ. ಪ್ರಶಸ್ತಿ ಕೊಡುವುದು ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ ಜವಬ್ದಾರಿ…ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವುದು ಓದುಗ, ವೀಕ್ಷಕ ಪ್ರಭುಗಳಾದ ನಿಮ್ಮ ಹೊಣೆ.

LEAVE A REPLY

Please enter your comment!
Please enter your name here