ದಿ ನ್ಯೂ ಇಂಡಿಯನ್ ಟೈಮ್ಸ್ ವೆಬ್ ಪೋರ್ಟಲ್ ನಡೆಸುವ ಟಿಎನ್ ಐಟಿ ಮೀಡಿಯಾ ಅವಾರ್ಡ್ ಕಾರ್ಯಕ್ರಮಕ್ಕೆ ಇನ್ನೊಂದೇ ದಿನ ಬಾಕಿ ಇರೋದು.
ನಾಳೆ (ಜೂನ್ 16) ವಯಲಿಕಾವಲ್ ನಲ್ಲಿರುವ ‘ತೆಲುಗು ವಿಜ್ಞಾನ ಸಮಿತಿ’ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಳೆದ ವರ್ಷ ಫೇವರೇಟ್ ಆ್ಯಂಕರ್ ಆವಾರ್ಡ್ ನೀಡಿದ್ದ ದಿ ನ್ಯೂ ಇಂಡಿಯನ್ ಟೈಮ್ಸ್ ಈ ಬಾರಿ ಕೇವಲ ಆ್ಯಂಕರ್ ಗಳಿಗೆ ಮಾತ್ರವಲ್ಲದೆ ಸುದ್ದಿವಾಹಿನಿಗಳ ವರದಿಗಾರರು , ಕ್ಯಾಮರಮನ್ ಗಳು, ವಾಯ್ಸ್ ವೋವರ್ ಆರ್ಟಿಸ್ಟ್ ಮತ್ತು ವೀಡಿಯೋ ಎಡಿಟರ್ ಗಳಿಗೂ ಪ್ರಶಸ್ತಿ ನೀಡುತ್ತಿದೆ.
ಈಗಾಗಲೇ ಓಟಿಂಗ್ ಮೂಲಕ ಸಾಮಾಜಿಕ ಜಾಲತಾಣದ ಕ್ರೀಯಾಶೀಲ ಬಳಕೆದಾರರು (ಆ್ಯಕ್ಟಿವ್ ಯೂಸರ್ಸ್) ತಮ್ಮ ನೆಚ್ಚಿನ ನಿರೂಪಕ ಮತ್ತು ನಿರೂಪಕಿಯನ್ನು ಆಯ್ಕೆ ಮಾಡಿದ್ದಾರೆ. ಉಳಿದ ನಾಲ್ಕು ಕೆಟಗರಿಯಲ್ಲಿ ಆಯಾಯ ಚಾನಲ್ ನಿಂದ ಸ್ಪರ್ಧಾ ಕಣದಲ್ಲಿರುವ ಪತ್ರಕರ್ತರಲ್ಲಿ ಮೊದಲ ಎರಡು ಸ್ಥಾನಗಳಿಗಾಗಿ ಆಯ್ಕೆ ನಡೆಯುತ್ತದೆ. ಈ ಆಯ್ಕೆ ಮಾಧ್ಯಮ ಕ್ಷೇತ್ರದ ಅನುಭವಿ, ಹಿರಿಯ ಪತ್ರಕರ್ತರಿಂದ ನಡೆಯಲಿದೆ.
ಅದೇ ರೀತಿ ತನಿಖಾ ವರದಿ, ಸಿನಿಮಾ ವರದಿಗಾರಿಕೆ , ರಾಜಕೀಯ ವರದಿಗಾರಿಕೆ ಸೇರಿದಂತೆ ಬೇರೆ ಬೇರೆ ವಿಭಾಗದಲ್ಲಿ ಪ್ರತ್ಯೇಕವಾಗಿ ಒಬ್ಬರನ್ನು ಗುರುತಿಸಿ ಅವರನ್ನು ಗೌರವಿಸಲಾಗುತ್ತದೆ. ತಪ್ಪದೇ ಕಾರ್ಯಕ್ರಮಕ್ಕೆ ಬನ್ನಿ…