ದಿ ನ್ಯೂ ಇಂಡಿಯನ್ ಟೈಮ್ಸ್ ವೆಬ್ ಪೋರ್ಟಲ್ ನಡೆಸುವ ಟಿಎನ್ ಐಟಿ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ದಿನಾಂಕ ನಿಗಧಿಯಾಗಿದೆ.
ಜೂನ್ 16 ರಂದು ವಯಲಿಕಾವಲ್ ನಲ್ಲಿರುವ ‘ತೆಲುಗು ವಿಜ್ಞಾನ ಸಮಿತಿ’ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಳೆದ ವರ್ಷ ಫೇವರೇಟ್ ಆ್ಯಂಕರ್ ಆವಾರ್ಡ್ ನೀಡಿದ್ದ ದಿ ನ್ಯೂ ಇಂಡಿಯನ್ ಟೈಮ್ಸ್ ಈ ಬಾರಿ ಕೇವಲ ಆ್ಯಂಕರ್ ಗಳಿಗೆ ಮಾತ್ರವಲ್ಲದೆ ಸುದ್ದಿವಾಹಿನಿಗಳ ವರದಿಗಾರರು , ಕ್ಯಾಮರಮನ್ ಗಳು, ವಾಯ್ಸ್ ವೋವರ್ ಆರ್ಟಿಸ್ಟ್ ಮತ್ತು ವೀಡಿಯೋ ಎಡಿಟರ್ ಗಳಿಗೂ ಪ್ರಶಸ್ತಿ ನೀಡುತ್ತಿದೆ.
ಈಗಾಗಲೇ ಓಟಿಂಗ್ ಮೂಲಕ ಸಾಮಾಜಿಕ ಜಾಲತಾಣದ ಕ್ರೀಯಾಶೀಲ ಬಳಕೆದಾರರು (ಆ್ಯಕ್ಟಿವ್ ಯೂಸರ್ಸ್) ತಮ್ಮ ನೆಚ್ಚಿನ ನಿರೂಪಕ ಮತ್ತು ನಿರೂಪಕಿಯನ್ನು ಆಯ್ಕೆ ಮಾಡಿದ್ದಾರೆ. ಉಳಿದ ನಾಲ್ಕು ಕೆಟಗರಿಯಲ್ಲಿ ಆಯಾಯ ಚಾನಲ್ ನಿಂದ ಸ್ಪರ್ಧಾ ಕಣದಲ್ಲಿರುವ ಪತ್ರಕರ್ತರಲ್ಲಿ ಮೊದಲ ಎರಡು ಸ್ಥಾನಗಳಿಗಾಗಿ ಆಯ್ಕೆ ನಡೆಯುತ್ತದೆ. ಈ ಆಯ್ಕೆ ಮಾಧ್ಯಮ ಕ್ಷೇತ್ರದ ಅನುಭವಿ, ಹಿರಿಯ ಪತ್ರಕರ್ತರಿಂದ ನಡೆಯಲಿದೆ.
ಅದೇ ರೀತಿ ತನಿಖಾ ವರದಿ, ಸಿನಿಮಾ ವರದಿಗಾರಿಕೆ , ರಾಜಕೀಯ ವರದಿಗಾರಿಕೆ ಸೇರಿದಂತೆ ಬೇರೆ ಬೇರೆ ವಿಭಾಗದಲ್ಲಿ ಪ್ರತ್ಯೇಕವಾಗಿ ಒಬ್ಬರನ್ನು ಗುರುತಿಸಿ ಅವರನ್ನು ಗೌರವಿಸಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಪ್ರಿಂಟ್ ಮೀಡಿಯಾ ಪಾರ್ಟನರ್ ಆಗಿ ‘ವಿಜಯವಾಣಿ’ ದಿನಪತ್ರಿಕೆ, ಎಫ್ ಎಂ ಪಾರ್ಟನರ್ ಆಗಿ 92.7 ಬಿಗ್ ಎಫ್ ಎಂ, ಆನ್ ಲೈನ್ ಮೀಡಿಯಾ ಪಾರ್ಟನರ್ ಆಗಿ ಪ್ರಚಾರ, ಚಿತ್ರಲೋಕ, ವ್ಯಾಮ್ಸ್ ಟಿವಿ, ಡೈಜಿ ವರ್ಲ್ಡ್ ಅವರು ನಮ್ಮೊಡನೆ ಇದ್ದಾರೆ.
ಚಂದು ಆರ್ಟ್ಸ್, ಮುಳಿಯಾ, ಬ್ಯುಲ್ಡ್ ಟೆಕ್ಸ್, ಬ್ಲಿಸ್, ಚಾಕಲೇಟ್ ಜಂಕ್ಷನ್, ಮಿಶಿಕ್ರಾಫ್ಟ್, ಸಿಐಟಿ ಪಾಲಿಟೆಕ್ನಿಕ್, ಎವರ್ ಗ್ರೀನ್ ಕೌಂಟಿ, Cucubanos ರೆಸಾರ್ಟ್ ಸಾಥ್ ನೀಡಿದ್ದಾರೆ. .ಎಲ್ಲಕ್ಕೂ ಮಿಗಿಲಾಗಿ ಕನ್ನಡದ ಪ್ರತಿಯೊಂದು ಚಾನಲ್ ಗಳು, ಅಲ್ಲಿನ ಮುಖ್ಯಸ್ಥರು, ಉದ್ಯೋಗಿಗಳು ಹಾಗೂ ಅಲ್ಲಿಂದ ಸ್ಪರ್ಧಿಸಿದ ಪ್ರತಿಯೊಬ್ಬರೂ ಸಹ ತಮ್ಮದೇ ಕಾರ್ಯಕ್ರಮ ಎಂದು ಜೊತೆಗಿದ್ದಾರೆ. ಸಪೋರ್ಟ್ ಮಾಡ್ತಿದ್ದಾರೆ.