2018 ರಿಂದ ಶುರುವಾದ ಜರ್ನಿ ಈಗ 8 ವರ್ಷಕ್ಕೆ ಕಾಲಿಟ್ಟಿದೆ. ಕಳೆದ ಬಾರಿ ಕನ್ನಡ ಸೇರಿದಂತೆ ತಮಿಳು ತೆಲುಗು ಮಲಯಾಳಂ ನ ಸುದ್ದಿ ವಾಹಿನಿಗಳಿಗೆ ಪ್ರಶಸ್ತಿ ನೀಡಿ ಎಲ್ಲರ ಗಮನ ಸೆಳೆದಿತ್ತು. ಈ ಬಾರಿಯೂ ನಾಲ್ಕು ಭಾಷೆಗಳ ಮಾಧ್ಯಮ ಮಿತ್ರರಿಗೆ ಸನ್ಮಾನಿಸುವ ಯೋಜನೆಯಿದ್ದು ಆ ನಿಟ್ಟಿನಲ್ಲಿ ಕನ್ನಡದ ದೃಶ್ಯ ಮಾಧ್ಯಮಗಳಿಗೆ ಆಹ್ವಾನಿಸಲಾಯಿತು.
ಟಿವಿ 9 ನ chief producer ಹಾಗೂ ಹಿರಿಯ ನಿರೂಪಕ ರಂಗನಾಥ ಭಾರದ್ವಾಜ್ ಮತ್ತು chief executive producer ವಿಲಾಸ್ ಅವರನ್ನ ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ಮಾತನಾಡಲಾಯಿತು.
ನ್ಯೂಸ್ ಫಸ್ಟ್ ನ Editor in Chief ಮಾರುತಿ ಅವರನ್ನ ಭೇಟಿ ಮಾಡಲಾಯಿತು.
ನ್ಯೂಸ್ 18 Chief Editor ಹರಿಪ್ರಸಾದ್ ಅವರನ್ನ ಭೇಟಿಯಾಗಿ TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಬಗ್ಗೆ ಮಾತನಾಡಲಾಯಿತು.
ಪವರ್ ಟಿವಿ ಗೆ ಭೇಟಿ ನೀಡಿ ಪವರ್ ಟಿವಿ ಸಂಪಾದಕರಾದ ಪ್ರಶಾಂತ ಬಿಸಲರಿ ಅವರೊಂದಿಗೆ ಮಾತನಾಡಲಾಯಿತು.
ಗ್ಯಾರೆಂಟಿ ವಾಹಿನಿಯಲ್ಲಿ ಪ್ರಧಾನ ಸಂಪಾದಕಿ ಮತ್ತು ನಿರ್ದೇಶಕಿ ( Editor in chief & director ) ರಾಧಾ ಹಿರೇಗೌಡರ್ ಅವರನ್ನ ಭೇಟಿ ಮಾಡಲಾಯಿತು.
ರಾಜ್ ನ್ಯೂಸ್ ಎಂಡಿ ಶಿವರುದ್ರಪ್ಪ ಅವರನ್ನ ಭೇಟಿಯಾಗಲಾಯಿತು.
ಸುವರ್ಣ ನ್ಯೂಸ್ ಗೆ ಭೇಟಿ ನೀಡಿ ಅಜೀತ್ ಹನುಮಕ್ಕನವರ್ ಅವರನ್ನ ಭೇಟಿ ಮಾಡಲಾಯಿತು.
ಟಿವಿ 5 ಗೆ ಭೇಟಿ ನೀಡಿ ಇನ್ ಪುಟ್ ಹೆಡ್ ಸಂದೇಶ್ ಹಾಗೂ ಅಸೋಸಿಯೇಟ್ ಎಡಿಟರ್ ದಶರತ್ ಅವರನ್ನ ಭೇಟಿ ಮಾಡಲಾಯಿತು.
ಜೀ ನ್ಯೂಸ್ ಕನ್ನಡ ವಾಹಿನಿಯ ಚೀಫ್ ಎಡಿಟರ್ ರವಿ ಅವರನ್ನ ಭೇಟಿ ಮಾಡಿ ಕಾರ್ಯಕ್ರಮದ ಬಗ್ಗೆ ಮಾತನಾಡಲಾಯಿತು.
ರಿಪಬ್ಲಿಕ್ ಕನ್ನಡ ವಾಹಿನಿಗೆ ಬೇಟಿ ನೀಡಿ ಅಲ್ಲಿನ ಚೀಫ್ ಎಡಿಟರ್ ಶೋಭಾ ಅವರನ್ನ ಭೇಟಿಮಾಡಿ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಹಕರಿಸುವಂತೆ ಮನವಿ ಮಾಡಲಾಯಿತು.
ನಮ್ಮ ಉದ್ದೇಶ ಸ್ಪಷ್ಟ ಮತ್ತು ನೇರ ಅದುವೇ ನಮ್ಮ ಮಾಧ್ಯಮದ ಸಾಧಕರನ್ನ ಗುರುತಿಸಿ ಅವರಿಗೆ ಸನ್ಮಾನಿಸುವುದು. ನಮ್ಮ TNIT ಮೂಲಕ ಸಾಧಕರಿಗೊಂದು ಸಲಾಂ ಹೇಳುವ ಅಪರೂಪದ ಹಾಗೂ ಅದ್ದೂರಿಯ ಏಕೈಕ ಪ್ರಶಸ್ತಿ ಪ್ರದಾನ ಸಮಾರಂಭ ಅಂದ್ರೆ ಅದು TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್.