TNIT South Indian Media Award ಗೆ ಕ್ಷಣಗಣನೆ !
ಟಿ ಎನ್ ಐ ಟಿ ದಕ್ಷಿಣ ಭಾರತದ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. 3 ತಿಂಗಳಗಳ ಕಾಲ TNIT ಟೀಂ ಶ್ರಮ ವಹಿಸಿ ಈಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಡೀ ಭಾರತದಲ್ಲೆ ಸುದ್ದಿವಾಹಿನಿಗಳಿಗೆ ಮಾತ್ರ ಪ್ರಶಸ್ತಿ ನೀಡುವ ತಂತ್ರಜ್ಞರನ್ನ ಗುರುತಿಸುವ ಏಕೈಕ ಸಂಸ್ಥೆ ಅಂದ್ರೆ ಅದು TNIT Media ಅನ್ನೊದು ಹೆಮ್ಮೆಯ ವಿಚಾರ.
ಬೆಸ್ಟ್ ಆ್ಯಂಕರ್ , ರಿಪೋರ್ಟಿರ್, ವೀಡಿಯೋ ಎಡಿಟರ್, ಕ್ಯಾಮರ ಮೆನ್ ಸೇರಿದಂತೆ ಇನ್ನೂ ಹಲವು ವಿಶೇಷ ವಿಭಾಗದಲ್ಲಿ ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಎಂಟನೇ ವರ್ಷದ ಆವೃತ್ತಿಗೆ ಈಗ ಕ್ಷಣಗಣನೆ ಶುರುವಾಗಿದೆ. TNIT ಕಛೇರಿಯಲ್ಲಿ ತಯಾರಿಗಳು ಭರದಿಂದ ಸಾಗಿವೆ. ನಾಳೆಯ ಸಂಭ್ರಮಕ್ಕೆ ಟಿಎನ್ ಐಟಿ ಟೀಂ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.