ಇನ್ಮುಂದೆ ಟೋಲ್ ಕಟ್ಟಲು ಟೋಲ್ ಪ್ಲಾಜ್ ಗಳಲ್ಲಿ ಸಾಲುಕಟ್ಟಲು ನಿಲ್ಲುವ ಅಗತ್ಯವಿಲ್ಲ. ಗಂಟೆಗಟ್ಟಲೆ ಟೋಲ್ ಕಟ್ಟಲು ನಿಲ್ಲಬೇಕಾದ ಅನಿವಾರ್ಯತೆ ಸವಾರರಿಗೆ ದೂರಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವು ಮೊಬೈಲ್ ವ್ಯಾಲೆಟ್ ಗಳು, ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಗಳಿಂದಲೇ ನೇರವಾಗಿ ಪಾವತಿಯಾಗಲಿದೆ. ವಾಹನ ರೀಚಾರ್ಜ್ ಆಧಾರಿತ ಫಾಸ್ಟ್ ಟ್ಯಾಗ್ ಸಹ ಅಗತ್ಯವಿರುವುದಿಲ್ಲ.

ಈ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಮೊಬೈಲ್ ಆ್ಯಪನ್ನು ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಅದರಲ್ಲಿ ತಮ್ಮ ವಾಹನದ ಸಂಖ್ಯೆ ಮತ್ತಿತರ ಮಾಹಿತಿಗಳನ್ನು ದಾಖಲಿಸಬೇಕು. ಬಳಿಕ ವಾಹನದ ಸಂಖ್ಯೆಯೊಂದಿಗೆ ಮೊಬೈಲ್ ನೋಂದಣಿಯಾಗಲಿದೆ. ಈ ಬಳಿಕ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾ ಹಣವು ಮೊಬೈಲ್ ವ್ಯಾಲೆಟ್ ನಿಂದ ಕಡಿತವಾಗಲಿದೆ. ವಾಹನ ಟೋಲ್ ಪ್ಲಾಜಾ ತಲುಪುವಷ್ಟರಲ್ಲಿ ಮೊಬೈಲ್ ಕ್ಯೂ ಆರ್ ಕೋಡ್ ಜನರೇಟ್ ಆಗಲಿದೆ. ಅದನ್ನು ಟೋಲ್ ಪ್ಲಾಜಾದಲ್ಲಿ ಸ್ಕ್ಯಾನ್ ಮಾಡ್ಬೇಕು ಎಂದು ತಿಳಿಸಿದ್ದಾರೆ.

ಮತ್ತೊಂದು ವ್ಯವಸ್ಥೆಯೆಂದರೆ ಮೊಬೈಲ್ ಆ್ಯಪ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ನೇರವಾಗಿ ಪಾವತಿಯಾಗೋ ವ್ಯವಸ್ಥೆಯಾಗಿರುವ ಯುಪಿಐ ಜೊತೆ ಲಿಂಕ್ ಮಾಡ್ಬೇಕು.
ದೆಹಲಿ- ಮುಂಬೈ, ದೆಹಲಿ-ಚಂಢೀಗಢ ಮತ್ತು ದೆಹಲಿ-ಕೋಲ್ಕತ್ತಾ ರಾಷ್ತ್ರೀಯ ಹೆದ್ದಾರಿಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.







