ದೇಶದ ಟಾಪ್ 10 ಸಾಲ ಮಾಡಿರುವ ಕಂಪನಿಗಳು.

Date:

ಇತ್ತೀಚಿಗಷ್ಟೇ ವಿಜಯ್ ಮಲ್ಯ ಅವರನ್ನು ಸುಸ್ತಿ ಸಾಲಗಾರ ಎಂದು ಹಲವು ಬ್ಯಾಂಕುಗಳು ಘೋಷಿಸಿ ಆಗಿದೆ. ಆದರೆ ಭಾರತದಲ್ಲಿ ಕೇವಲ ಇವರೊಬ್ಬರಷ್ಟೇ ಅಲ್ಲದೇ ಇನ್ನು ಒಂಬತ್ತು ಕಂಪನಿಗಳೂ ಕೂಡ ಸಾಲದ ಹೊರೆಯಲ್ಲಿ ಸಿಲುಕಿ ಅವುಗಳ ಮಾಲೀಕರಿಗೆ ಸುಸ್ತಿ ಸಾಲಗಾರ ಎಂಬ ಹಣೆಪಟ್ಟಿಯನ್ನು ಬ್ಯಾಂಕುಗಳು ಘೋಷಿಸಿವೆ. ಆರ್‍ಬಿಐ ದೇಶದ ಟಾಪ್ 10 ಸುಸ್ತಿ ಸಾಲಗಾರರನ್ನು ಎರಡು ವರ್ಷಗಳ ಹಿಂದೆಯಷ್ಟೇ ಬಿಡುಗಡೆ ಮಾಡಿದೆ. ಆರ್‍ಬಿಐನ ಹೇಳಿಕೆಯ ಪ್ರಕಾರ ಈ ಕಂಪನಿಗಳು ಸುಮಾರು 5000 ಕೋಟಿಗಿಂತಲೂ ಹೆಚ್ಚು ಸಾಲವನ್ನು ಮಾಡಿವೆ.
ಬ್ಯಾಂಕುಗಳ ಅನುತ್ಪಾದಕ ಸಾಲ ಬೆಳೆಯುತ್ತಿದ್ದು, ಈ ಸಾಲಗಳು ದೇಶದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಹೂಡಿಕೆ ಮಾಡುವ ಹಣಕ್ಕಿಂತಲೂ ಹೆಚ್ಚಿವೆ ಎಂದು ಕಳೆದ ವರ್ಷ ಆರ್‍ಬಿಐ ತಿಳಿಸಿದೆ.
ದೇಶದ ಟಾಪ್ 10 ಸಾಲ ಮಾಡಿರುವ ಕಂಪನಿಗಳು.
1. ಕಿಂಗ್‍ಫಿಷರ್ ಏರ್‍ಲೈನ್ಸ್:
ಅತೀ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿರುವ ಪಟ್ಟಿಯಲ್ಲಿ ಕಿಂಗ್‍ಫಿಷರ್ ಏರ್‍ಲೈನ್ಸ್ ಮೊದಲ ಸ್ಥಾನ ಗಳಿಸಿದೆ. ಇದರ ಒಟ್ಟು ಅನುತ್ಪಾದಕ ಸಾಲ 2,673 ಕೋಟಿ ರುಪಾಯಿಗಳು. 2011ರವರೆಗೆ ದೇಶದ ಎರಡನೇ ದೊಡ್ಡ ಏರ್‍ಲೈನ್ಸ್ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಇದಲ್ಲದೇ ವಿಶ್ವದ ಟಾಪ್ 10 ಬೆಸ್ಟ್ ಏರ್‍ಲೈನ್ಸ್ ಪಟ್ಟಿಯ್ಲಲೂ ಇದು ಸ್ಥಾನ ಪಡೆದಿತ್ತು. ಕಳಪೆ ನಿರ್ವಹಣೆ ಹಾಗೂ ಬೇಕಾಬಿಟ್ಟಿ ಖರ್ಚಿನಿಂದಾಗಿ 2012ಕ್ಕೆ ದಿವಾಳಿ ಎದ್ದಿತು. ಅಂದಿನಿಂದ ಇಂದಿನವರೆಗೂ ಈ ಸಂಸ್ಥೆ ಸ್ಥಗಿತಗೊಂಡಿದೆ.
2. ವಿನ್‍ಸಮ್ ಡೈಮಂಡ್ ಆ್ಯಂಡ್ ಜ್ಯುವೆಲರಿ

ದೇಶದ ಸುಸ್ತಿ ಸಾಲಗಾರರ ಪಟ್ಟಿಯಲ್ಲಿ ಈ ಕಂಪನಿ ಎರಡನೇ ಸ್ಥಾನ ಹೊಂದಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ಕಂಪನಿ ಒಟ್ಟು 2,660 ಕೋಟಿ ರುಪಾಯಿ ಸಾಲ ಮಾಡಿದೆ. ಈ ಕಂಪನಿ ವಜ್ರ ಖಚಿತ ಚಿನ್ನ, ಬೆಳ್ಳಿ, ಮತ್ತು ಪ್ಲಾಟಿನಂ ಆಭರಣಗಳನ್ನುಉತ್ಪಾದಿಸುವುದಲ್ಲದೇ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿತ್ತು. ಸುರಜ್ ಡೈಮಂಡ್ಸ್ ಆ್ಯಂಡ್ ಜ್ಯುವೆಲರ್ಸ್‍ನ ಅಂಗಸಂಸ್ಥೆಯಾದ ಈ ಕಂಪನಿ ಫಾರೇವರ್ ಪ್ರೀಷಿಯಸ್ ಜ್ಯುವೆಲರಿಯಲ್ಲಿ ಶೇ.49ರಷ್ಟು ಪಾಲುದಾರಿಕೆ ಹೊಂದಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಆಂತರಿಕ ಲೆಕ್ಕ ಪರಿಶೋಧನೆಯು ಈ ಕಂಪನಿಯ ಪ್ರವರ್ತಕ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ತಿಳಿಸಿದೆ.
3. ಎಲೆಕ್ಟ್ರೋಥರ್ಮ್ ಇಂಡಿಯಾ ಲಿಮಿಟೆಡ್
ಈ ಕಂಪನಿ ಲೋಹ ಕರಿಗಿಸುವುದರಲ್ಲಿ ಮುಂಚೂಣೆ ಸ್ಥಾನ ಹೊಂದಿದ್ದು, ಕಂಪನಿ 1983ರಲ್ಲಿ ಸ್ಥಾಪನೆಗೊಂಡಿತು. ಜಗತ್ತಿನಾದ್ಯಂತ ಲೋಹ ಕರಗಿಸುವ ಕಾರ್ಖಾನೆಗಳ ವಲಯಗಳಲ್ಲಿ ಪಾಲುದಾರಿಕೆ ಹೊಂದಿದೆ. ಈ ಕಂಪನಿ ಮಾಡಿರುವ ಸಾಲ ಒಟ್ಟು 22,11 ಕೋಟಿ.
4.ಝೂಮ್ ಡೆವಲಪರ್ಸ್ ಇಂಡಿಯಾ ಲಿಮಿಟೆಡ್
ಸುಮಾರು 27 ರಾಷ್ಟ್ರೀಕೃತ ಬ್ಯಾಂಕುಗಳು ಈ ಕಂಪನಿಗೆ ಒಟ್ಟು 1,810 ಕೋಟಿ ರುಪಾಯಿ ಸಾಲ ಒದಗಿಸಿವೆ. ಇದೊಂದು ಪೆÇ್ರಜೆಕ್ಟ್ ಮ್ಯಾನೇಜ್‍ಮೆಂಟ್ ಕಂಪನಿಯಾಗಿದ್ದು, ದೇಶದ ಹಲವಾರು ಕೈಗಾರಿಕಾ ಮತ್ತು ಎಂಜಿನಿಯರಿಂಗ್ ಸಂಸ್ಥೆಗಳಿಗೆ ಸ್ಥಳ ಅಧ್ಯಯನ, ಮಾರುಕಟ್ಟೆ ಸಮೀಕ್ಷೆ, ತಂತ್ರಜ್ಞಾನದ ಮೌಲ್ಯಮಾಪನಗಳನ್ನು ಮಾಡಿದೆ. ಈ ಕಂಪನಿ 1991ರಲ್ಲಿ ಸ್ಥಾಪಿತವಾಗಿದ್ದು, ದೇಶದಲ್ಲಿ ಮುಂಬೈ, ಬೆಂಗಳೂರು ಸೇರಿದಂತೆ ಒಟ್ಟು 5 ನಗರಗಳಲ್ಲಿ ಕಚೇರಿಗಳನ್ನು ಹೊಂದಿದೆ. ವಿದೇಶದ ಹಲವು ಕಂಪನಿಗಳಿಗೂ ಇದರ ಸೇವೆಗಳು ಲಭ್ಯವಾಗಿವೆ.
5. ಸ್ಟೆರ್‍ಲಿಂಗ್ ಬಯೋಟೆಕ್ ಲಿಮಿಟೆಡ್
ಮುಂಬೈ ಮೂಲದ ಈ ಕಂಪನಿ ದೇಶದ ವಿವಿಧ ಬ್ಯಾಂಕುಗಳಲ್ಲಿ ಒಟ್ಟು 1,732 ಕೋಟಿ ಸಾಲ ಮಾಡಿದೆ. ಔಷಧ ಮತ್ತು ಮಾತ್ರೆಗಳನ್ನು ತಯಾರಿಸುವ ಈ ಕಂಪನಿ, ವೈದ್ಯಕೀಯ ಕ್ಷೇತ್ರಗಳಲ್ಲಿ ವಿವಿಧ ಸಂಶೋಧನೆಯನ್ನು ಕೈಗೊಂಡಿದೆ. ಇದು ಸಂದೇಸಾರ ಸಮೂಹದ ಸ್ಟೆರ್‍ಲಿಂಗ್ ಆಯಿಲ್ ರಿಸೋರ್ಸಸ್ ನ ಅಂಗ ಸಂಸ್ಥೆಯಾಗಿದೆ.
6. ಎಸ್ ಕುಮಾರ್ ನೇಷನ್‍ವೈಡ್ ಲಿಮಿಟೆಡ್( ಎಸ್‍ಕೆಎನ್‍ಎಲ್)
ಜವಳಿ ಮತ್ತು ಉಡುಪುಗಳನ್ನು ತಯಾರಿಸುವಲ್ಲಿ ಈ ಕಂಪನಿ ಮುಂಚೂಣಿ ಸ್ಥಾನ ಹೊಂದಿದೆ. 1943ರಲ್ಲಿ ಸ್ಥಾಪನೆಗೊಂಡಿದ್ದು, ಮಲ್ಟಿ ಫೈಬರ್ ಉಡುಪು ತಯಾರಿಸುವಲ್ಲಿ ಈ ಕಂಪನಿ ಹೆಸರುವಾಸಿಯಾಗಿದೆ. ಲಂಡನ್ನಿನ ರೀಡ್ ಆ್ಯಂಡ್ ಟೇಲರ್ ಉಡುಪುಗಳನ್ನು ಭಾರತದಲ್ಲಿಯೇ ತಯಾರಿಸಿ ಮಾರಾಟ ಮಾಡುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ ಈ ಕಂಪನಿ ಒಟ್ಟು 1,692 ಕೋಟಿ ಸಾಲ ಉಳಿಸಿಕೊಂಡಿದೆ.
7. ಸೂರ್ಯ ವಿನಾಯಕ್ ಇಂಡಸ್ಟ್ರೀಸ್(ಸೂರಿ)
ದೆಹಲಿಯ ಫೋರಿಯಾನ ಸಮೂಹದ ಈ ಕಂಪನಿ ಕೃಷಿ ಉತ್ಪನ್ನಗಳನ್ನು ವ್ಯಾಪಾರ ಮಾಡುವುದರ ಜತೆಯಲ್ಲಿ ಅವಗಳ ಆಮದು-ರಫ್ತು ಮಾಡುತ್ತದೆ. ತೈಲಗಳ ಉತ್ಪಾದನೆ ಮತ್ತು ಮಾರ್ಬಲ್ ಕಟಿಂಗ್ ಕ್ಷೇತ್ರದಲ್ಲೂ ಈ ಕಂಪನಿ ತೊಡಗಿಸಿಕೊಂಡಿದೆ. ಈ ಕಂಪನಿ ಮಾಡಿರುವ ಒಟ್ಟು ಸಾಲದ ಮೊತ್ತ 1,446 ಕೋಟಿ ರುಪಾಯಿ.
8. ಕಾರ್ಪೋರೇಟ್ ಇಸ್‍ಪ್ಯಾಟ್ ಅಲಾಯ್ಸ್
ಈ ಕಂಪನಿ ದೇಶದಲ್ಲಿ ಉಕ್ಕು, ಫೆರೋ ಅಲಾಯ್ ಹಾಗೂ ಸಿಮೆಂಟ್ ಉತ್ಪಾದನೆ ಮಾಡುವ ಅಭಿಜೀತ್ ಸಮೂಹದ ಅಂಗ ಸಂಸ್ಥೆ . ಇದು 2008ರಲ್ಲಿ ಸ್ಥಾಪನೆ ಗೊಂಡಿದ್ದು, ಫೆರೋ ಮ್ಯಾಂಗನೀಸ್, ಸಿಲಿಕಾನ್ ಮ್ಯಾಂಗನೀಸ್, ಮತ್ತು ಫೆರೋ ಸಿಲಿಕಾನ್‍ಗಳನ್ನು ಉತ್ಪಾದಿಸಿ ಮೆಕ್ಸಿಕೋ, ಬ್ರೆಜಿಲ್, ಅರ್ಜೇಂಟಿನಾ, ಅಮೆರಿಕ, ಕೆನಡ, ಇರಾನ್, ಜಪಾನ್ ಮತ್ತು ಬಹ್ರೇನ್ ದೇಶಗಳಿಗೆ ರಫ್ತು ಮಾಡುತ್ತದೆ. ಈ ಕಂಪನಿಯ ಒಟ್ಟು ಸಾಲ 1,360 ಕೋಟಿ ರುಪಾಯಿ.
9. ಫಾರೇವರ್ ಜ್ಯುವೆಲರಿ
ಈ ಕಂಪನಿ ಒಟ್ಟು 1,254 ಕೋಟಿ ರುಪಾಯಿ ಸಾಲ ಮಾಡಿ, ದೇಶದ ಟಾಪ್ ಟೆನ್ ಸುಸ್ತಿದಾರ ಕಂಪನಿಗಳಲ್ಲಿ ಒಂಬತ್ತನೇ ಸ್ಥಾನವನ್ನು ಪಡೆದಿದೆ. ಸಾಲದ ಕೂಪದಲ್ಲಿರುವ ವಿನ್‍ಸಮ್ ಡೈಮಂಡ್ ಆ್ಯಂಡ್ ಜ್ಯುವೆಲರ್ಸ್ ಲಿಮಿಟೆಡ್ ಈ ಕಂಪನಿಯನ್ನು 1996ರಲ್ಲಿ ಪ್ರಾರಂಭ ಮಾಡಿತ್ತು. ಚಿನ್ನ ವಜ್ರಾಭರಣಗಳನ್ನು ತಯಾರಿಸಿ ಬೇರೆ ರಾಷ್ಟ್ರಗಳಿಗೆ ಇದು ರಫ್ತು ಮಾಡುತ್ತಿತ್ತು.
10. ಸ್ಟೆರ್‍ಲಿಂಗ್ ಆಯಿಲ್ ರಿಸೋರ್ಸಸ್
ಈ ಕಂಪನಿ ಸಂದೇಸಾರ ಸಮೂಹದ ಇನ್ನೊಂದು ಅಂಗ ಸಂಸ್ಥೆ. ಈ ಕಂಪನಿ ಭಾರತ ಮತ್ತು ನೈಜಿರಿಯಾಗಳಲ್ಲಿ ಪೆಟ್ರೋಲಿಯಂ ಪರಿಶೋಧನೆ ಮತ್ತು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಈ ಕಂಪನಿ ಒಟ್ಟು ಮಾಡಿರುವ ಸಾಲದ ಮೊತ್ತ 1,197 ಕೋಟಿ ರುಪಾಯಿಗಳು.

  • ವಿಶ್ವನಾಥ. ಶೇರಿಕಾರ್.

POPULAR  STORIES :

ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!

ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!

ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?

ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...