ಕೇವಲ 20 ನಿಮಿಷಗಳಲ್ಲಿ ಮುಖದ ಕಾಂತಿ ಹೆಚ್ಚಿಸಿಕೊಳ್ಳೋದು ಹೇಗೆ…?

0
295

ಕಪ್ಪು ಕಲೆಗಳನ್ನು ಮತ್ತು ಮೊಡವೆಗಳನ್ನು ಹೊಂದಿರುವವರು ಸಾಮಾನ್ಯವಾಗಿ ಮೇಕಪ್ ಅಥವಾ ಕ್ರೀಮ್‍ಗಳ ಮೊರೆ ಹೋಗುತ್ತಾರೆ. ಆದರೆ, ಇದು ಶಾಶ್ವತ ಪರಿಹಾರವಲ್ಲ. ಸೂರ್ಯನ ಬಿಸಿಲು, ಹಾರ್ಮೋನ್ ಅಸಮತೋಲನ ಹಾಗೂ ಮಾಲಿನ್ಯದಿಂದ ಚರ್ಮದ ಮೇಲೆ ಆಗುವ ಪರಿಣಾಮಗಳನ್ನು ತಡೆಗಟ್ಟಲು ಹೆಚ್ಚಿನ ಪರಿಹಾರ ಮಾರ್ಗ ಬೇಕಾಗುತ್ತದೆ.


ಇದಕ್ಕಾಗಿ ಮನೆಯಲ್ಲಿ ಸಿಗುವ ವಸ್ತುಗಳಿಂದ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ನಿಂಬೆಹಣ್ಣು, ಅಲೋವೆರ ಮತ್ತು ಬೇಕಿಂಗ್ ಸೋಡ ಉತ್ತಮವಾಗಿ ಕೆಲಸ ಮಾಡುತ್ತದೆ.


ನಿಂಬೆಹಣ್ಣನ್ನು ಅರ್ಧಭಾಗ ಮಾಡಿಕೊಂಡು ಅದರ ಮೇಲೆ ಬೇಕಿಂಗ್‍ಸೋಡ ಹಾಕಿ ಮುಖದ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. 3ರಿಂದ 4ನಿಮಿಷ ನಿಧಾನವಾಗಿ ಈ ರೀತಿ ಮಾಡಿಕೊಂಡ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ಸುಚಿಗೊಳಿಸಿ ನಂತರ 5 ನಿಮಿಷ ಮುಖವನ್ನು ಹಾಗೆ ಒಣಗಲು ಬಿಡಿ. ಆನಂತರ ಅಲೋವೆರ ಜೆಲ್‍ನ್ನು ಹಚ್ಚಿಕೊಂಡು 15 ನಿಮಿಷ ಆದ ನಂತರ ಮುಖವನ್ನು ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ. ಹೀಗೆ 2 ದಿನಗಳಿಗೊಮ್ಮೆ ಮಾಡಿಕೊಂಡರೆ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

-ಧುನಿಕ ಕೊಡಗು

LEAVE A REPLY

Please enter your comment!
Please enter your name here