ಜಲ್ಲಿಕಟ್ಟು ನಿಷೇಧದಿಂದ ಇಲ್ಲಿಯವರೆಗೂ ಸಾಂಪ್ರದಾಯಿಕ ಕ್ರೀಡೆಯ ನಿಷೇಧವನ್ನು ತೆರವುಗೊಳಿಸುವಂತೆ ತಮಿಳುನಾಡಿನಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಾ ಬರುತ್ತಿದ್ದ ಬೆನ್ನಲ್ಲೆ ಕಾಲಿವುಡ್ ಖ್ಯಾತ ನಟಿ ತ್ರಿಷಾ ಸುಪ್ರೀಂ ಕೋರ್ಟ್ ನಿರ್ಧಾರ ಬೆಂಬಲಿಸಿ ಟ್ವೀಟ್ ಮಾಡಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಲ್ಲಿಕಟ್ಟು ಕ್ರೀಡೆಗೆ ಹೇರಿರುವ ನಿಷೇಧವನ್ನು ತೆರವುಗೊಳಿಸಬೇಕು ಎಂದು ತಮಿಳುನಾಡಿನಲ್ಲಿ ಹೋರಾಟ ನಡೆಯುತ್ತಿದ್ದರೆ ನಟಿ ತ್ರಿಶಾ ತನ್ನ ಟ್ವಿಟರ್ ಖಾತೆಯಲ್ಲಿ ಸಂದೇಶವೊಂದು ಕಳುಹಿಸಿದ್ದಾರೆ. ನಾನು ಪೆಟಾಗೆ ಬೆಂಬಲ ನೀಡುತ್ತಿದ್ದೇನೆ ಸಂಪ್ರದಾಯ ಎಷ್ಟು ಹಳೆಯದು ಮುಖ್ಯವಲ್ಲ ಇಲ್ಲಿ ಪ್ರಾಣಿಗಳನ್ನು ಹಿಂಸೆ ಮಾಡೋದು ನಾನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಹೋರಾಟಗಾರರ ವಿಲನ್ ಆದ ತ್ರಿಶಾ ಘರ್ಜನೈ ಚಿತ್ರದ ಶೂಟಿಂಗ್ ವೇಳೆ ಸ್ಥಳಕ್ಕೆ ದೌಡಾಯಿಸಿದ್ದ ಹೋರಾಟಗಾರರಿಂದ ತಪ್ಪಿಸಿಕೊಂಡು ಶೂಟಿಂಗ್‍ನಿಂದ ಅರ್ಧಕ್ಕೆ ಬಿಟ್ಟು ಮನೆಗೆ ಹೋಗಿದ್ದಾರೆ. ಆನಂತರದಲ್ಲಿ ಮರು ಟ್ವೀಟ್ ಮಾಡಿದ ತ್ರಿಶಾ ಜಲ್ಲಿಕಟ್ಟು ವಿರುದ್ದವಾಗಿ ನಾನು ಮಾತನಾಡಲಿಲ್ಲ. ನಾನು ಯಾವುದೇ ರೀತಿಯ ಟ್ವೀಟ್‍ಗಳನ್ನು ಟ್ವಿಟರ್‍ನಲ್ಲಿ ಹಾಕಿಲ್ಲ. ದುಷ್ಕರ್ಮಿಗಳು ನನ್ನ ಖಾತೆಯನ್ನು ಹ್ಯಾಕ್ ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳುವವರೆಗೂ ನನ್ನ ಖಾತೆಯನ್ನು ನಿಷ್ಕ್ರೀಯಗೊಳಿಸುವುದಾಗಿ ತಿಳಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್
2016ರಲ್ಲಿ ಸಾಮಾನ್ಯವಾಗಿ ಬಳಕೆಯಾದ ಪಾಸ್‍ವರ್ಡ್ ಯಾವುದು ಗೊತ್ತಾ.?
ವಿಶ್ವದ ಅರ್ಧದಷ್ಟು ಸಂಪತ್ತು ಈ ಎಂಟು ಜನರ ಪಾಲು..!!
ಡ್ರಾಪ್ ಕೊಡೋ ನೆಪದಲ್ಲಿ ಮಾನಸಿಕ ಅಸ್ವಸ್ಥೆಯನ್ನೆ ರೇಪ್ ಮಾಡಿದ ಪೊಲೀಸ್..!