ಬಹಳ ಕುತೂಹಲ ಮೂಡಿಸಿದ್ದ ಅಮೇರಿಕಾದ ಅಧ್ಯಕ್ಷ ಚುನಾವಣೆಯ ಅಂತಿಮ ಫಲಿತಾಂಶ ಅಂತೂ ಹೊರ ಬಿತ್ತು.. ಹಿಲರಿ ಕ್ಲಿಂಟನ್ ಹಾಗೂ ಡೊನಾಲ್ಡ್ ಟ್ರಂಪ್ ನಡುವಿನ ಪೈಪೋಟಿಯಲ್ಲಿ ಕೊನೆಗೂ ಅಮೇರಿಕಾದ ಅಧಿಪತಿಯಾದದ್ದು ಡೊನಾಲ್ಡ್ ಟ್ರಂಪ್..! ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ಅಮೇರಿಕಾದ ಅಧ್ಯಕ್ಷೀಯ ಚುಕ್ಕಾಣಿ ಇಡಿದ ಮೊದಲ ಅನಾನುಭವಿ.. ಅದೂ ಕೂಡ ಕ್ಲಿಂಟನ್ ವಿರುದ್ದ 58 ಮತಗಳ ಅಂತರದ ಭರ್ಜರಿ ಜಯ ಸಾಧಿಸೋ ಮೂಲಕ..! ಈಗ ಇದು ಇತಿಹಾಸ ಬಿಡಿ.. ಆದ್ರೆ ನಿಮಗೆಲ್ಲಾ ಗೊತ್ತಿರ್ಲಿ ಅಮೇರಿಕಾದ 45ನೇ ಅಧ್ಯಕ್ಷನ ಪತ್ನಿ ಓರ್ವ ಮಾಡೆಲ್..! ಈ ಮಾಡೆಲ್‍ಗೂ ಟ್ರಂಪ್‍ಗೂ ಇರುವ ವಯಸ್ಸಿನ ವ್ಯತ್ಯಾಸ ಮಾತ್ರ ಅಜಗಜಾಂತರ..! ಟ್ರಂಪ್‍ನ ಮೂರನೇ ಪತ್ನಿ ಮೆಲಾನಿಯಾ ಅವರಿಗಿಂತ ಸುಮಾರು 25 ವರ್ಷ ಚಿಕ್ಕವಳು ಅಂದ್ರೆ ನೀವು ನಂಬ್ತೀರಾ..? ಯಸ್.. ಟ್ರಂಪ್ ಮೆಲಾನಿಯಾಗಿಂತ ಸುಮಾರು 25 ವರ್ಷ ದೊಡ್ಡವರು..! ತನ್ನ 16ನೇ ವಯಸ್ಸಿಗೆ ಮಾಡೆಲಿಂಗ್ ವೃತಿ ಆರಂಭಿಸಿದ ಮೆಲಾನಿಯಾ ಅದಾದ ಎರಡೇ ವರ್ಷದಲ್ಲಿ ಇಟಾಲಿಯನ್ ಮಾಡೆಲಿಂಗ್ ಏಜೆನ್ಸಿಯನ್ನು ಭೇಟಿಯಾಗಿ ಸ್ವತಃ ಮೆಲಾನಿಯಾ ಸ್ಕಿನ್ ಕೇರ್ ಸೆಂಟರ್ ಹಾಗೂ ಜ್ಯುವೆಲ್ಲರಿ ಸೆಂಟರ್ ಆರಂಭಿಸಿದ್ದಳು. ಮೂಲತಃ ಸ್ಲೊವಾನಿಯಾ-ಯುಗೊಸ್ಲಾವಿಯಾದ ಈ ಮಾದಕ ಚೆಲುವೆಗೆ ಜರ್ಮನ್, ಫ್ರೆಂಚ್, ಇಂಗ್ಲೀಷ್, ಸರ್ಬಿಯನ್ ಮತ್ತು ಸ್ಲೊವೇನಿಯಾ ಭಾಷೆಗಳ ಜ್ಞಾನವಿದೆ. ಡೊನಾಲ್ಡ್ ಟ್ರಂಪ್ 1998 ರಲ್ಲಿ ತನ್ನ ಎರಡನೇ ಪತ್ನಿ ಮಾರ್ಲಾಗೆ ವಿಚ್ಛೇದನ ನೀಡಿದ ಬಳಿಕ ಇವರಿಬ್ಬರೂ ಭೇಟಿಯಾಗಿದ್ದಾರೆ. ಇಬ್ಬರ ನಡುವೆ ಪ್ರೀತಿ ಆರಂಭವಾಗಿ 2004 ರಲ್ಲಿ ಎಂಗೇಜ್‍ಮೆಂಟ್ ಮಾಡಿಕೊಳ್ತಾರೆ. ನಂತರ 2005 ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ.. ಇದೀಗ ಟ್ರಂಪ್‍ಗೆ ಒಟ್ಟು ಐದು ಜನ ಮಕ್ಕಳಿದ್ದು ಅದರಲ್ಲಿ 3 ಮಕ್ಕಳು ಮೊದಲನೇ ಪತ್ನಿ ಇವ್ನಾ ಅವರದ್ದಾದರೆ, 1 ಮಾರ್ಲೆ ಅವರದ್ದು ಇನ್ನೊಂದು ಮೆಲಾನರವರದ್ದು.. ಮಾದಕ ನೋಟದಿಂದ ಅದೆಷ್ಟೋ ಜನರ ಮನಗೆದ್ದಿರುವ ಮೆಲಾನಿಯಾ ಅವರ ಹಾಟ್ ಹಾಟ್ ಫೋಟೋಗಳು ಇಂದಿಗೂ ಹಲವಾರು ಮ್ಯಾಗ್ಸೀನ್‍ಗಳಲ್ಲಿ ಪ್ರಕಟವಾಗ್ತಾ ಇದೆ.
From left: Mr. Trump with his first wife, Ivana, in 1987; with his second wife, Marla, in 1993; and with his third wife, Melania, in 2016
Like us on Facebook The New India Times
POPULAR STORIES :
2.5 ಲಕ್ಷಕ್ಕೂ ಅಧಿಕ ಡೆಪಾಸಿಟ್‍ಗಳಿಗೆ ಟ್ಯಾಕ್ಸ್ ಭೀತಿ..!
500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..
ಬಂಕ್‍ಗಳಲ್ಲಿ 500, 1000ರೂ. ನೋಟು ಪಡೆಯದಿದ್ದರೆ ಕಠಿಣ ಕ್ರಮ: ಸಚಿವ ಧರ್ಮೇಂದ್ರ ಪ್ರಧಾನ್.
ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್‍ಗೆ ಐತಿಹಾಸಿಕ ಜಯ.