ತುಳುನಾಡ ಆಟಿ ಅಮಾವಾಸ್ಯೆಯ ಆಚರಣೆಯಲ್ಲೊಂದು ಆಯುರ್ವೇದ ಚಿಕಿತ್ಸೆ..!

Date:

ಭಾರತದ ಪ್ರತಿ ಸಂಪ್ರದಾಯ, ಹಬ್ಬ ಹಾಗೂ ಆಚರಣೆಗಳು ತನ್ನದೇ ಆದ ಧಾರ್ಮಿಕ, ಸಾಮಾಜಿಕ, ವೈಚಾರಿಕ ಹಾಗೂ ಆಧ್ಯಾತ್ಮಿಕ ಮಹತ್ವದೊಂದಿಗೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಈ ಆಚರಣೆಗಳನ್ನು ಆಯಾ ಪ್ರದೇಶದ ಹಾಗೂ ಅಲ್ಲಿನ ವಾತಾವರಣದ ಬದಲಾವಣೆಗೆ ತಕ್ಕಹಾಗೆ ರೂಪಿಸಲಾಗಿದೆ. ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳು ಸಮೃದ್ದವಾದ ತೌಳವ ಸಂಸ್ಕೃತಿಯನ್ನು ತನ್ನ ಒಡಲ್ಲಲ್ಲಿ ಇರಿಸಿಕೊಂಡಿರುವ ತುಳುನಾಡು. ಇಲ್ಲಿಯ ಕಲೆ, ಸಂಸ್ಕೃತಿ, ಆಹಾರ ಹಾಗೂ ನಂಬಿಕೆಗಳು ವಿಶೇಷ ಮತ್ತು ವಿಭಿನ್ನ. ಸ್ಠಳೀಯ ಪೌಷ್ಟಿಕ ಹಾಗೂ ಔಷಧೀಯ ಸಸ್ಯಗಳ ಬಳಕೆ ಇಲ್ಲಿನ ಆಚರಣೆಗಳ ಅವಿಭಾಜ್ಯ ಅಂಗವಾದಿದೆ.ಇಲ್ಲಿಯ ಜನಾಂಗದವರು ತಮ್ಮ ಆಹಾರ ಹಾಗೂ ಪ್ರಾಥಮಿಕ ಚಿಕಿತ್ಸೆಯನ್ನು ಸ್ಠಳೀಯ ಜೀವವೈವಿಧ್ಯತೆಯಿಂದಲೇ  ಹೆಚ್ಚಾಗಿ ಪಡೆಯುತ್ತಾರೆ.

ಅಂತೆಯೇ ಆಟಿ ಅಥವಾ ಆಷಾಡ ಮಾಸದಲ್ಲಿ ಆಟಿ ಅಮಾವಾಸ್ಯೆಯ ಆಚರಣೆ ಮಾಡಲಾಗುತ್ತದೆ. ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಪಾಲೆ(ತುಳು) ಅಥವಾ ಮದ್ದಾಳೆ (ಕನ್ನಡ) ಕಷಾಯದ ಸೇವನೆಯೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪಾಲೆ ಮರದ ತೊಗಟೆಯನ್ನು ಶುದ್ದಗೊಳಿಸಿ ಸೂತ್ರವನ್ನು ಕಟ್ಟಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಇದು ಔಷಧೀಯ ಗುಣಗಳನ್ನು ಹೆಚ್ಚಿಸಿ ತನ್ನಲ್ಲಿ ಉಳಿಸಿಕೊಳ್ಳುವುದು ಎಂಬ ನಂಬಿಕೆ. ಮರುದಿನ ಸ್ನಾನಾದಿಕರ್ಮದ ನಂತರ ಸೂರ್ಯೋದಯಕ್ಕೂ ಮುಂಚಿತವಾಗಿ ಕಲ್ಲನ್ನು ಉಪಯೋಗಿಸಿ ಪಾಲೆ ಮರದ ತೊಗಟೆಯನ್ನು ತೆಗೆಯಲಾಗುತ್ತದೆ. ತೊಗಟೆಯ ಒಳ ಪದರವನ್ನು ಬಿಡಿಸಿ ಕಾಳುಮೆಣಸು, ಜೀರಿಗೆ ಹಾಗೂ ಬೆಳ್ಳುಳ್ಳಿಯೊಂದಿಗೆ ಅರೆದು ಹಾಲಿನಂತಹ ಸಾರವನ್ನು ತಯಾರಿಸಲಾಗುವುದು. ಈ ಕಷಾಯವನ್ನು ಶೋಧಿಸಿ ಸುಮಾರು 30 ಮಿಲಿ ಅಷ್ಟು ಖಾಲಿ ಹೊಟ್ಟೆಯಲ್ಲಿ ಸೇವಿಸಲಾಗುತ್ತದೆ. ವಯಸ್ಸಿಗೆ ಅನುಗುಣವಾಗಿ ಅರ್ಧ ಅಥವಾ ಶೇಕಡ ಕಾಲು ಭಾಗದಷ್ಟು ಮಕ್ಕಳಿಗೆ ನೀಡಲಾಗುತ್ತದೆ. ತದನಂತರ ಅಕ್ಕಿ ಹಾಗೂ ಮೆಂಥ್ಯೆಯಿಂದ ತಯಾರಿಸಿದ ಗಂಜಿಯನ್ನು ಸೇವಿಸಲಾಗುತ್ತದೆ.

ಪಾಲೆ ಕಷಾಯದ ಸೇವನೆ ಸಂಪ್ರದಾಯವಾದರೂ ವೈಜ್ನಾನಿಕವಾಗಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಕರಾವಳಿಯಲ್ಲಿ ಮಳೆಯ ಪ್ರಾರಂಭದೊಂದಿಗೆ ಹಲವು ಸಾಂಕ್ರಾಮಿಕ ರೋಗಗಳು, ಚರ್ಮರೋಗಗಳು ಕಂಡುಬರುತ್ತದೆ ಅಷ್ಟೇ ಅಲ್ಲದೆ ವಿಪರೀತ ಮಳೆ,ಅಧಿಕ ತೇವಾಂಶ ಹಾಗು ಜೀರ್ಣ ಶಕ್ತಿಯ ಕೊರತೆಯಿಂದಾಗಿ ಈ ಮಾಸದಲ್ಲಿ ದೈಹಿಕ ಶಕ್ತಿ ಹಾಗೂ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಆದುದರಿಂದ ವ್ಯಾಧಿಕ್ಷಮತೆಯನ್ನು ವೃದ್ದಿಸುವ ವಿಶೇಷ ಗುಣವನ್ನು ಹೊಂದಿರುವ ಪಾಲೆ ಕಷಾಯವನ್ನು ವಾರ್ಷಿಕವಾಗಿ ಒಂದು ಸಂಪ್ರದಾಯವಾಗಿ ಸೇವಿಸಲಾಗುತ್ತದೆ. ಅಲ್ಲದೆ ಆಟಿ ಅಮಾವಾಸ್ಯೆಯ ನಂತರದ ದಿನಗಳಲ್ಲಿ ಸಾಲು ಸಾಲಾಗಿ ಬರುವ ಹಬ್ಬ ಆಚರಣೆಗಳಲ್ಲಿ ಅತಿಯಾದ ರುಚಿಕರ ತಿನಿಸುಗಳ ಸೇವನೆಯಿಂದಾಗಿ ಉದರರೋಗಗಳು ಬರುವ ಸಾಧ್ಯತೆ ಇರುತ್ತದೆ. ಅದ್ದರಿಂದ ಮುಂಜಾಗ್ರತೆಯಾಗಿ ಪಾಲೆ ಕಷಾಯ ಸೇವಿನೆಯಿಂದ ಉದರ ರೋಗಗಳನ್ನು ನಿಯಂತ್ರಿಸಿಕೊಳ್ಳಬಹುದು.

ಪಾಲೆ ಅಥವಾ ಮದ್ದಾಳೆ ಕೇವಲ ಜಾನಪದ ಅಥವಾ ಮನೆಮದ್ದಲ್ಲ. ಇದರ ಸಮಸ್ಥ ಗುಣ ಉಪಯೋಗದ ಉಲ್ಲೇಖನವನ್ನು ಆಯುರ್ವೇದದಲ್ಲಿ ಕಾಣಬಹುದು. ಏಳು ದಳದ ಎಲೆಯಾಗಿರುವುದರಿಂದ ಸಫ್ತಪರ್ಣ ಎಂದು ಕರೆಯಲಾಗುತ್ತದೆ. ಕಹಿ ಹಾಗೂ ಒಗರು ರಸವನ್ನು ಹೊಂದಿರುವ ಸಪ್ತಪರ್ಣದ ಬೇರು ಹಾಗೂ ತೊಗಟೆ ಔಷಧೀಯ ಗುಣಗಳಿಂದ ಸಮೃದ್ದವಾಗಿದೆ.

ಪ್ರಮುಖವಾಗಿ ಸಾಂಕ್ರಾಮಿಕ ರೋಗಗಳಾದ ಜ್ವರ,ಮಲೇರಿಯಾ, ಚರ್ಮರೋಗಗಳು, ಫಂಗಸ್ನ ಸೋಂಕು, ಅರ್ಟಿಕೇರಿಯಾ, ಬೇದಿ ಹಾಗೂ ಅಸ್ತಮಾ ರೋಗಗಳಿಗೆ ದಿವ್ಯ ಔಷಧಿ. ಇದರ ಕಷಾಯ ರಕ್ತ ಶುದ್ದಿಸುವ ಗುಣಹೊಂದಿದ್ದು ತುರಿಕೆ, ಉರಿ ಇತ್ಯಾದಿ ಚರ್ಮ ರೋಗಗಳಲ್ಲಿ ಉಪಯುಕ್ತ. ಹಾವು ಕಚ್ಚಿದ್ದಲ್ಲಿ ಇದರ ಕಷಾಯವು ಪ್ರತಿ ವಿಷ ಅಥವಾ ಆಂಟಿಡೊಟ್ ಹಾಗಿ ನೀಡಲಾಗುತ್ತದೆ.

ಜೊತೆಗೆ ಇದರ ಸೇವನೆಯು ಎದೆಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರ ಕಹಿ ಹಾಗೂ ಕಷಾಯ ರಸದಿಂದಾಗಿ ಜೀರ್ಣಾಂಗವ್ಯೂಹದಲ್ಲಿನ ಜಂತುಗಳನ್ನು ನಾಶಪಡಿಸಿ ಜಠರವನ್ನು ಶುದ್ದಗೊಳಿಸುತ್ತದೆ. ಅಲ್ಲದೇ ಮಧುಮೇಹದ ಪರಿಣಾಮವಾಗಿ ಉದ್ಭವಿಸುವ ಅತಿ ಮೂತ್ರದ ತೊಂದರೆಗೆ ಇದು ಉಪಯುಕ್ತ. ತೆರೆದ ಗಾಯಗಳಲ್ಲಿ ಇದರ ತೊಗಟೆಯಸಾರವನ್ನು ಹಾಕುವುದರಿಂದ ಗಾಯ ಬೇಗ ಗುಣವಾಗುತ್ತದೆ. ತೊಗಟೆಯನ್ನು ನೀರಿನಲ್ಲಿ ಅರೆದು ಸಂಧುಗಳಲ್ಲಿ ಲೇಪಿಸುವುದರಿಂದ ಸಂಧಿವಾತ ಮುಂತಾದ ವಾಯು ವಿಕಾರಗಳು ಕಡಿಮೆಯಾಗುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಕರುಳಿನ ಕಾನ್ಸರ್ ಹಾಗೂ ಕುಷ್ಠರೋಗದಲ್ಲಿ ಇದು ಪರಿಣಾಮಕಾರಿ ಔಷಧಿ.

ಹೀಗೆ ಉತ್ತಮ ಔಷಧ ಗುಣಗಳಿಂದ ಕೂಡಿರುವ ಪಾಲೆ ಅಥವಾ ಸಪ್ತಪರ್ಣ ಕಷಾಯವನ್ನು ಕರಾವಳಿಯಲ್ಲಿ ಮಳೆಗಾಲದ ಪರಿಣಾಮ ಉದ್ಭವಿಸಬಹುದಾದಂತಹ ರೋಗಕ್ಕ್ದೆ ಚಿಕಿತ್ಸೆಯಾಗಿ , ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ದೇಹದ ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಆಟಿ ಅಮಾವಾಸ್ಯೆಯ ಆಚರಣೆಯೊಂದಿಗೆ ಸೇವಿಸಲಾಗುತ್ತದೆ. ಹೀಗೆ ಕಾಲಕ್ಕೆ ಅನುಗುಣವಾದ ಆಹಾರ ಹಾಗೂ ಜೀವನಶೈಲಿಯನ್ನು ಸಾಂಪ್ರದಾಯಿಕ ಆಚರಣೆಗಳ ಮೂಲಕ ಅಳವಡಿಸಲಾಗಿದೆ.

  • ಡಾ. ಮಹೇಶ್ ಶರ್ಮಾ.ಎಂ ಬೆಂಗಳೂರು

            9964022654

 

POPULAR  STORIES :

ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!

ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?

ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!

ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್

ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!

ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...