ಟರ್ಕಿಯಲ್ಲಿ ಯುವಕನೊಬ್ಬ ಜಿಮ್ ಎದುರು ನಿಂತು ದಿಟ್ಟಿಸಿ ನೋಡುತ್ತಿದ್ದ. ಈ ಸೋಶಿಯಲ್ ಮೀಡಿಯಾಗಳಲ್ಲಿ ಅದೊಂದು ಫೋಟೋ ವೈರಲ್ ಆಗೋಕೆ ಎಷ್ಟೊತ್ತು ಬೇಕು? ಓಮರ್ ಯುವುಜ್ ಎಂಬುವವರು ಬಾಲಕನ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಇದು ಸಖತ್ ವೈರಲ್ ಆಗಿದೆ. ಟ್ರೋಲ್ ಗಳಿಗೂ ಆಹಾರವಾಗಿದೆ.
ಜಿಮ್ ಕಡೆಗೆ ಆಸೆಯಿಂದ ದಿಟ್ಟಿಸಿ ನೋಡ್ತಿದ್ದ ಆ 12 ವರ್ಷದ ಮೊಹಮ್ಮದ್ ಹಾಲಿತ್ ಸಿರಿಯಾ ನಿರಾಶ್ರಿತ. ಶೂ ಪಾಲೀಶ್ ಮಾಡಿ ಜೀವನ ದಬ್ಬುತ್ತಿದ್ದ.
ಈತ ಜಿಮ್ ಅನ್ನು ದಿಟ್ಟಿಸಿ ನೋಡುತ್ತಿರೋ ಫೋಟೋ ವೈರಲ್ ಆಗುತ್ತಿದ್ದಂತೆ ಆ ಜಿಮ್ ನ ಮಾಲೀಕ ಮುಸ್ತಫಾ ಇವನ ವಿವರ ಪಡೆದು, ಭೇಟಿಯಾಗಿ ಜಿಮ್ ನಲ್ಲಿ ಲೈಫ್ ಟೈಮ್ ಮೆಂಬರ್ ಶಿಪ್ ನೀಡಿದ್ದಾರೆ. ಅಲ್ಲದೆ ಹುಡುಗನ ಜೊತೆ ಫೋಟೋ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.