ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಮತ್ತು ಜನಪ್ರಿಯತೆ ಪಡೆದಿರೋ ವ್ಯಕ್ತಿಗಳ ಪಟ್ಟಿಯನ್ನು ಟ್ವಿಟರ್ ಸಂಸ್ಥೆ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿದ್ದು, ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ರಾಜಕಾರಣಿಗಳು ಮತ್ತು ಬಾಲಿವುಡ್ ಸ್ಟಾರ್ ಗಳನ್ನೊಳಗೊಂಡ ಈ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಕ್ರಿಕೆಟ್ ಸಾಮ್ರಾಟ್, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.
2016ರಲ್ಲಿ 12.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ವಿರಾಟ್ ಈ ವರ್ಷ 20.8 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ…! ಅಂದ್ರೆ ಕಳೆದ ವರ್ಷಕ್ಕಿಂತ ಶೇ.61ರಷ್ಟು ಹೆಚ್ಚಿನ ಮಂದಿ ವಿರಾಟ್ ಅವರನ್ನು ಫಾಲೋ ಮಾಡಿದ್ದಾರೆ. ಈ ವಿಷಯದಲ್ಲಿ ಮೋದಿ (ಶೇ.52) ಮತ್ತು ಸಚಿನ್ (ಶೇ.56) ಅವರನ್ನು ಹಿಂದಿಕ್ಕಿದ್ದಾರೆ ಕೊಹ್ಲಿ.
ಇಲ್ಲಿದೆ ಟ್ವಿಟರ್ ನಲ್ಲಿ ಜನಪ್ರಿಯತೆ ಪಡೆದ ಟಾಪ್ 10 ಭಾರತೀಯರ ಪಟ್ಟಿ.
1) ನರೇಂದ್ರ ಮೋದಿ
2) ಅಮಿತಾ ಬಚ್ಚನ್
3) ಶಾರುಖ್ ಖಾನ್
4) ಸಲ್ಮಾನ್ ಖಾನ್
5) ಅಕ್ಷಯ್ ಕುಮಾರ್
6) ಅಮಿರ್ ಖಾನ್
7) ದೀಪಿಕಾ ಪಡುಕೋಣೆ
8) ಸಚಿನ್ ತೆಂಡೂಲ್ಕರ್
9) ಹೃತಿಕ್ ರೋಷನ್
10) ವಿರಾಟ್ ಕೊಹ್ಲಿ