ಫಿಲಿಪ್ಲೀನ್ಸ್ ನಲ್ಲಿ ಅಪ್ಪಳಿಸಿದ ಭಾರೀ ಚಂಡಮಾರುತ ಸುಮಾರು 15 ಮಂದಿಯನ್ನು ಬಲಿಪಡೆದಿದ್ದು, ದೇಶದ ಉತ್ತರ ಭಾಗದ 10ಪ್ರಾಂತ್ಯಗಳ ಸುಮಾರು 50ಲಕ್ಷ ಮಂದಿಯನ್ನು ಸಂಕಷ್ಟಕ್ಕೆ ನೂಕಿದೆ.
ಗಂಟೆಗೆ 170 ಕಿ.ಮೀ ವೇಗದಲ್ಲಿ ಅಪ್ಪಳಿಸಿರುವ ಈ ಚಂಡಮಾರುತ ಈ ವರ್ಷದ ಅತ್ಯಂತ ಪ್ರಬಲ ಸ್ವರೂಪದ ಚಂಡಮಾರುತವಾಗಿದೆ.
ಇದಕ್ಕೆ ಮಂಗ್ ಖೂಟ್ ಚಂಡಮಾರುತ ಎಂದು ಕರೆಯಲಾಗಿದೆ. ಇದು ಚೀನಾ ಮತ್ತು ಹಾಂಗ್ ಕಾಂಗ್ ಮೇಲೂ ದಾಳಿ ನಡೆಸಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.
ಫಿಲಿಪ್ಪೀನ್ಸ್ ವಿಶ್ವದಲ್ಲೇ ಅತೀ ಹೆಚ್ಚು ಚಂಡಮಾರುತಕ್ಕೆ ತುತ್ತಾಗುವ ದೇಶವಾಗಿದೆ. ವರ್ಷಕ್ಕೆ ಕನಿಷ್ಠ 20ಚಂಡಮಾರುತಗಳು ಅಪ್ಪಳಿಸುತ್ತವೆ.