ದೇವಳ ನಗರಿಗೂ ಬರದ ಬರೆ

Date:

ರಾಜ್ಯಾದ್ಯಂತ ಬರ ಆವರಿಸಿದೆ. ಭೂಮಿ ಸುಡುತ್ತಿದೆ. ಎಲ್ಲೆಡೆ ನೀರಿನ ಹಾಹಾಕಾರ ತುತ್ತು ನೀರಿಗೂ ತತ್ವಾರ…. ಈ ಸಮಸ್ಯೆ ದೇವಾಲಯಗಳ ನಗರಿ ಉಡುಪಿಯನ್ನೂ ಬಿಟ್ಟಿಲ್ಲ. ರಾಜ್ಯ ಭೀಕರ ಬರಕ್ಕೆ ತತ್ತರಿಸಿ ಹೋಗಿದೆ. ಭೂಮಿ ಸುಡುತ್ತಿದೆ. ಎಲ್ಲೆಡೆ ಹನಿ ನೀರಿಗೂ ಹಾಹಾಕಾರ. ಇತ್ತೀಚಿನ ವರ್ಷಗಳಲ್ಲಿಯೇ ಭೀಕರ ಎನ್ನಬಹುದಾದ ಬೇಸಿಗೆಯ ಬಿಸಿಲ ಧಗೆ ಧರೆಯನ್ನು ಸುಡುತ್ತಿದೆ. ಬೀಸುವ ಗಾಳಿಯೂ ಬಿಸಿಯಾಗಿದೆ. ಈ ಭೀಕರ ಬರ ದೇವಾಲಯಗಳ ನಗರಿ ಉಡುಪಿ ಯನ್ನೂ ಹೈರಾಣಾಗಿಸಿದೆ.

ಶ್ರೀ ಕೃಷ್ಣನ ಸನ್ನಿಧಿಯಲ್ಲೂ ನೀರು ಕಡಿಮೆಯಾಗಿದೆ. ಹಾಗಾಗಿ ಐತಿಹಾಸಿಕ ತೆಪ್ಪೋತ್ಸವವೇ ನಿಂತು ಹೋಗಿದೆ. ಹೌದು ಜನವರಿಯಲ್ಲಿ ಉತ್ಸವ ಮುಗಿಯುತ್ತಿದ್ದಂತೆ ಮಧ್ವ ಸರೋವರದ ನೀರು ಬರಿದಾಗಲಾರಂಭಿಸಿದೆ. ತೆಪ್ಪೋತ್ಸವ ನಡೆಸಲು ಮಧ್ವ ಸರೋವರದಲ್ಲಿ ನೀರಿಲ್ಲ. ಸದ್ಯ ರಜಾ ಸೀಸನ್ ಆಗಿರೋದ್ರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಡುಪಿಗೆ ಬರ್ತಾರೆ.ಅವರಿಗೆ ಬೇಕಾದಷ್ಟು ನೀರು ಒದಗಿಸಲು ಪರ್ಯಾಯ ಪೇಜಾವರ ಮಠದ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

ಮಠದ ಸುತ್ತಮುತ್ತಲಿರುವ ಬಾವಿ ಮತ್ತು ಕೆರೆಯ ನೀರು ಅಭಿಷೇಕ, ಅಡುಗೆ, ತೀರ್ಥ ಮುಂತಾದ ದೇವ ಕಾರ್ಯಗಳಿಗೆ ವಿನಿಯೋಗವಾಗುತ್ತಿದೆ. ಆದರೆ ಇಲ್ಲಿನ ಶೌಚಾಲಯಗಳಿಗೆ, ಯಾತ್ರಿ ನಿವಾಸಗಳಿಗೆ ಮತ್ತು ಮಠದ ಇತರ ಕಾರ್ಯಗಳಿಗೆ ನೀರು ಪೂರೈಸುವುದು ದೊಡ್ಡ ತಲೆನೋವಾಗಿದೆ. ಎಲ್ಲರೂ ಮಳೆಗಾಗಿ ಆಕಾಶದತ್ತ ಮುಖಮಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿನಿತ್ಯ 10 ಟ್ಯಾಂಕರ್‌ಗಳಲ್ಲಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ ನಗರಸಭೆ ಮತ್ತಿತರ ಮೂಲಗಳಿಂದ ಮಠಕ್ಕೆ ಸಾದ್ಯವಾದಷ್ಟು ನೀರು ಪೂರೈಕೆ ಮಾಡೋ ಕಾರ್ಯ ಆಗ್ತಾ ಇದೆ.

ಪರಿಸ್ಥಿತಿ ಹೀಗಿರುವಾಗ ಜನ ಆತಂಕ ಪಡುವ ಅಗತ್ಯವಿಲ್ಲ.. ದೇವರ ದಯೆಯಿಂದ ಸದ್ಯದಲ್ಲೇ ಉತ್ತಮ ಮಳೆ ಆಗಲಿದೆ ಎಂದು ಪೇಜಾವರ ಶ್ರೀಗಳು ನುಡಿದಿದ್ದಾರೆ. ಆದ್ರೂ ಪರಿಸ್ಥಿತಿ ಹೀಗಿದೆ, ಇನ್ನೊಂದು ವಾರ ಕಳೆದರೆ ಮುಂದೇನು ಅನ್ನೋ ಆತಂಕ ಎಲ್ಲರನ್ನೂ ಕಾಡುತ್ತಿದೆ. ಒಟ್ಟಿನಲ್ಲಿ ಮುಖ್ಯಪ್ರಾಣ ಮತ್ತು ಶ್ರೀ ಕೃಷ್ಣ ಮಳೆ ಸುರಿಸಿ ಇಳೆಯ ಮತ್ತು ಜನರ ತಣಿಸಲಿ ಎಂಬುದು ಭಕ್ತರ ಹರಕೆಯಾಗಿದೆ.

  • ಶ್ರೀ

POPULAR  STORIES :

ಎರಡೂ ಕಿಡ್ನಿ ಕಳೆದುಕೊಂಡ ಗಿರೀಶ್ ಬದುಕಲಿಲ್ಲ..! ಏಕ್ ದಿನ್ ಕಾ ಪೊಲೀಸ್ ಕಮೀಷನರ್ ಇನ್ನಿಲ್ಲ..!

ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?

ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!

ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!

ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!

ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )

ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!

ಎಂದೂ ಕಾಣದ ಕೈ ಅವಳ ಹೆಗಲ ಮೇಲಿತ್ತು..!

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...