ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ನೀರುಪಾಲಾದ ಬಾಲಕಿ ಮೃತದೇಹ ಇಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ.
ನಿಧಿ ಆಚಾರ್ಯ (9) ಮೃತ ದುರ್ದೈವಿ. ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದ ನಿಧಿ ಆಚಾರ್ಯ ನಿನ್ನೆ ನೀರುಪಾಲಾಗಿದ್ದಳು. ಅಗ್ನಿಶಾಮಕ ದಳದವರು , ಪೊಲೀಸರು ನಿನ್ನೆ ರಾತ್ರಿ ಕಾರ್ಯಾಚರಣೆ ಮಾಡಿದ್ದರೂ ಬಾಲಕಿ ಶವ ಪತ್ತೆಯಾಗಿರಲಿಲ್ಲ. ಇಂದು ಘಟನಾ ಸ್ಥಳದಿಂದ 100ಮೀ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ಎನ್ ಡಿ ಆರ್ ಎಫ್ ಅವರ ಜೊತೆ ಶೋಧ ಕಾರ್ಯದಲ್ಲಿ ಸ್ಥಳೀಯ ಮನೋಹರ್ ಎಂಬುವವರು ಬೋಟ್ ನಲ್ಲಿ ತೆರಳಿದ್ದರು.