ಕೇಂದ್ರ ಸಚಿವೆ ಉಮಾಭಾರತಿ ಅವರು ಪೇಜಾವರದ ವಿಶ್ವೇಶ್ವತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಅಪಘಾತ ಸುದ್ದಿ ಕೇಳಿ ಮಠಕ್ಕೆ ಆಗಮಿಸಿದ ಕೇಂದ್ರ ನೀರಾವರಿ ಸಚಿವೆ ಸ್ವಾಮೀಜಿ ಅವರ ಯೋಗಕ್ಷೇಮ ವಿಚಾರಿಸಿ ಆಶೀರ್ವಾದ ಪಡೆದ್ರು.
ಪಂಚಮ ಪರ್ಯಾಯ ಮುಗಿಸಿ ಸರ್ವಜ್ಞ ಪೀಠದಿಂದ ಏಳುವ ಸಂದರ್ಭದಲ್ಲಿ ತಾವು ಪಾಲ್ಗೊಳ್ಳಲು ಸಾಧ್ಯವಾಗದೇ ಇರೋದಕ್ಕೆ ಕ್ಷಮೆ ಯಾಚಿಸಿದ್ರು.
ಉಮಾಭಾರತಿಯವರು 1992ರ ನವೆಂಬರ್ 17ರಂದು ಪೇಜಾವರ ಶ್ರೀಗಳಿಂದ ಸನ್ಯಾಸ ದೀಕ್ಷೆ ಪಡೆದಿದ್ದರು.
ಪೇಜಾವರ ಶ್ರೀ ಗಳ ಆರೋಗ್ಯ ವಿಚಾರಿಸಿದ ಸಚಿವೆ
Date: