ಇದು ಸ್ವಲ್ಪ ಓಲ್ಡ್ ಸ್ಟೋರಿ. ಆದರೂ ಓಲ್ಡ್ ಈಸ್ ಗೋಲ್ಡ್ ಅಲ್ವಾ..!? ಎಷ್ಟೋ ಜನಕ್ಕೆ ಅದೆಷ್ಟೋ ವಿಚಾರಗಳು ಗೊತ್ತಿರುವುದಿಲ್ಲ. ಇವತ್ತು ಬೆಳಿಗ್ಗೆ ವಿಚಿತ್ರ ವಿಚಾರಗಳನ್ನು ತಡಕಾಡುವಾಗ ಸಿಕ್ಕ ಸ್ಟೋರಿಯಿದು. ಅದೇನಪ್ಪಾ ಅಂದ್ರೇ, ಹಾವು ಮನುಷ್ಯರಿಗೆ ಕಚ್ಚುವುದು ಸಹಜವಾದ ಪ್ರಕ್ರಿಯೆ. ಹಾವು ಕಚ್ಚಿದ್ದರಿಂದ ಹಲವರು ಗಾಯಗೊಂಡಿದ್ದಾರೆ. ಕೆಲವರು ಪ್ರಾಣ ಬಿಟ್ಟಿದ್ದಾರೆ. ಆದರೆ ಕ್ಯಾಲಿಪೋರ್ನಿಯಾದಲ್ಲಿ ಡೇವಿಡ್ ಸೆಂಕ್ ಎಂಬ ತಲೆಕೆಟ್ಟವನೊಬ್ಬ ಹೆಬ್ಬಾವಿನ ಮೇಲೆ ಬಿದ್ದು ಬೇಕಾಬಿಟ್ಟಿ ಕಚ್ಚಿದ್ದ. ರಬ್ಬರ್ ನಂತಿರುವ ಹೆಬ್ಬಾವಿಗೆ ಮನುಷ್ಯನ ಹಲ್ಲು ತರಚುಗಾಯ ಮಾಡುತ್ತೆ ಎಂದುಕೊಳ್ಳಬೇಡಿ. ಡೇವಿಡ್ ಸೆಂಕ್ ಕಚ್ಚುವಿಕೆಗೆ ಹೆಬ್ಬಾವು ನಿತ್ರಾಣಗೊಂಡಿತ್ತು.
ಸಾವು ಬದುಕಿನ ನಡುವೆ ಹೋರಾಡುವ ಸ್ಥಿತಿಗೆ ತಲುಪಿತ್ತು. ಆದರೆ ಶಸ್ತ್ರಚಿಕಿತ್ಸೆಯ ನಂತರ ಹೆಬ್ಬಾವು ಚೇತರಿಸಿಕೊಂಡಿತ್ತು. ಈ ವಿಚಾರವನ್ನು ಅಲ್ಲಿನ ಪ್ರಾಣಿ ದಯಾ ಸಂಘದ ಮ್ಯಾನೇಜರ್ ಗಿನಾ ಕೀಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸ್ಕ್ರೆಮೆಮಟೋ ಬೀ ವರದಿ ಮಾಡಿತ್ತು. ಹೆಬ್ಬಾವಿನ ಮೇಲೆ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಅವನನ್ನು ಬಂಧಿಸಿ ಹಲ್ಲು ಉದುರಿಸಿದಾಗ, `ನಾನು ಕುಡಿದಿದ್ದೇ, ನನಗೇನು ಗೊತ್ತಿಲ್ಲ. ಹಾವಿನ ಚಿಕಿತ್ಸೆಯ ವೆಚ್ಚವನ್ನು ತಾನೇ ಭರಿಸುತ್ತೇನೆ’ ಅಂತ ಹೇಳಿದ್ದನಂತೆ. ಆದರೆ ಇವತ್ತಿಗೆ ಆ ಹೆಬ್ಬಾವು ಏನಾಗಿದೆ..? ಅದನ್ನು ಕಚ್ಚಿದ ಡೇವಿಡ್ ಸೆಂಕ್ ಇನ್ಯಾವ ಪ್ರಾಣಿಗೆ ಕಚ್ಚಿದ್ದಾನೆ ಎಂಬ ಸುದ್ದಿಯಿಲ್ಲ. ಒಂದಂತೂ ನಿಜ- ಮನುಷ್ಯ ಶುದ್ಧ ಆಲ್ ರೌಂಡರ್- ತಲೆಕೆಟ್ಟರೇ ಏನ್ ಬೇಕಾದ್ರೂ ಮಾಡಿಬಿಡುತ್ತಾನೆ ಅಲ್ವಾ..!?
- ರಾ ಚಿಂತನ್
POPULAR STORIES :
ಮಂಚಕ್ಕೆ ಕರೆಯುವವರು ಎಲ್ಲಾ ಕಡೆಯೂ ಇದ್ದಾರೆ..! ಇದು ಸೋನ ಒಬ್ಬಳ ಕಥೆಯಲ್ಲ..!
ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?
“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?