ಐಸಿಸಿ ಅಂಡರ್ 19ವಿಶ್ವಕಪ್ ನಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಿ ವಿಶ್ವಕಪ್ ಎತ್ತಿ ಹಿಡಿಯುವುದು ಬಹುತೇಕ ಖಚಿತ.
ನ್ಯೂಜಿಲೆಂಡ್ ನ ಬೇ ಓವೆಲ್ ಮೈದಾನದಲ್ಲಿ ನಡಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸೀಸ್ 216 ರನ್ ಗಳಿಗೆ ಆಲ್ ಔಟ್ ಆಗಿದೆ.
ಗುರಿ ಬೆನ್ನತ್ತಿರು ಭಾರತಕ್ಕೆ ನಾಯಕ ಪೃಥ್ವಿ ಶಾ ಮತ್ತು ಮನ್ ಜೋತ್ ಕಾಲ್ರಾ ಉತ್ತಮ ಆರಂಭ ನೀಡುತ್ತಿದ್ದಾರೆ. 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿರುವ ಭಾರತ ಪದ್ಯವನ್ನು ಸುಲಭದಲ್ಲಿ ಗೆಲ್ಲುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.