UNLOCK ಶುರು: ಹೆಚ್ಚುವರಿ 100 ರೈಲು ಓಡಾಟ

1
29

ನವದೆಹಲಿ, ಜೂನ್ 15; ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಇದರಿಂದಾಗಿ ಜನರ ಸಂಚಾರ ಹೆಚ್ಚಾಗಲಿದೆ. ಆದ್ದರಿಂದ ಭಾರತೀಯ ರೈಲ್ವೆ 100 ಹೆಚ್ಚುವರಿ ರೈಲುಗಳನ್ನು ಓಡಿಸಲು ಮುಂದಾಗಿದೆ.

ಕಳೆದ ಬಾರಿಯ ಲಾಕ್‌ಡೌನ್ ಘೋಷಣೆ ಬಳಿಕ ಭಾರತೀಯ ರೈಲ್ವೆ ಇನ್ನೂ ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರವನ್ನು ಆರಂಭಿಸಿಲ್ಲ. ಹಬ್ಬದ ವಿಶೇಷ, ವಿಶೇಷ ರೈಲುಗಳನ್ನು ಮಾತ್ರ ಓಡಿಸುತ್ತಿದೆ. ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಮಾರ್ಗದಲ್ಲಿ ಈ ವಾರದಿಂದಲೇ ಹೆಚ್ಚುವರಿ ರೈಲು ಓಡಿಸಲು ಯೋಜನೆ ರೂಪಿಸಲಾಗಿದೆ. ಹೆಚ್ಚು ದೂರದ ಸ್ಥಳಗಳಿಗೆ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಾಗುತ್ತದೆ.

ಪ್ರತಿ ತಿಂಗಳು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡುವ ಪ್ರಮಾಣ ಹೆಚ್ಚಳವಾಗುತ್ತಿದೆ. ಕಳೆದ ತಿಂಗಳು ದಿನಕ್ಕೆ ಸುಮಾರು 5 ಲಕ್ಷ ಟಿಕೆಟ್ ಬುಕ್ ಆಗಿದೆ. ಈ ತಿಂಗಳು 14 ಲಕ್ಷಕ್ಕಿಂತ ಹೆಚ್ಚಿನ ಟಿಕೆಟ್ ಬುಕ್ ಆಗುತ್ತಿದೆ. ಆದ್ದರಿಂದ 100 ಹೆಚ್ಚುವರಿ ರೈಲು ಸಂಚಾರ ನಡೆಸಲಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ ಮುಂತಾದ ರಾಜ್ಯಗಳಿಂದ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್‌ಗೆ ಹೆಚ್ಚು ವಲಸೆ ಕಾರ್ಮಿಕರು ಸಂಚಾರ ನಡೆಸಲಿದ್ದಾರೆ. ಆದ್ದರಿಂದ ಉತ್ತರ ಭಾರತದ ರಾಜ್ಯಗಳಿಂದ ಹೆಚ್ಚು ರೈಲು ಓಡಿಸಲು ಇಲಾಖೆ ಚಿಂತಿಸಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಇದರಿಂದಾಗಿ ಉದ್ಯೋಗ ಅರಸಿ ವಲಸೆ ಕಾರ್ಮಿಕರು ಹೆಚ್ಚಾಗಿ ಬರಲಿದ್ದು, ಇದಕ್ಕಾಗಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ.

 

1 COMMENT

LEAVE A REPLY

Please enter your comment!
Please enter your name here