ಪ್ರೇಮಿಗಳಿಗೆ ಪೊಲೀಸರು ಠಾಣೆಯಲ್ಲಿಯೇ ಅದ್ಧೂರಿ ಮದುವೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಿನಯ್ ಕುಮಾರ್ ಮತ್ತು ನೇಹ ವರ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಇಬ್ಬರ ಕುಟುಂಬದ ವಿರೋಧವೂ ಇತ್ತು. ಇದರಿಂದ ಇಬ್ಬರು ಮನೆಬಿಟ್ಟು ಓಡಿ ಹೋಗಿದ್ದರು.
ಈ ಬಗ್ಗೆ ನೇಹ ಮತ್ತು ವಿನಯ್ ಮನೆಯವರು ಮೊಹಮ್ಮದ್ ಪುರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ತನಿಖೆ ನಡೆಸಿದಾಗ ಪ್ರೇಮಿಗಳು ವಯಸ್ಕಾರಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಅವರು ಮದುವೆ ಆಗಲು ನಿಶ್ಚಯಿಸಿದ್ದರು ಎಂದು ತಿಳಿದುಬಂದಿದೆ. ನಂತರ ಎರಡೂ ಕುಟುಂಬದ ಸಮ್ಮತಿ ಪಡೆದು ಪೊಲೀಸರು ಠಾಣೆಯಲ್ಲೇ ಮದುವೆ ಮಾಡಿಸಿದ್ದಾರೆ.
Barabanki: Police arranged wedding of a couple at Mohammadpur Khala Police Station premises. (25.03.2018) pic.twitter.com/VbhAz97If0
— ANI UP (@ANINewsUP) March 25, 2018