ದೀಪಾವಳಿಯಲ್ಲಿ ಪಟಾಕಿ ಅನಾಹುತಗಳು ಹೆಚ್ಚುತ್ತಿವೆ. ಪುಂಡ ಯುವಕನೊಬ್ಬ 3 ವರ್ಷದ ಬಾಲಕಿ ಬಾಯಲ್ಲಿ ಪಟಾಕಿ ಇಟ್ಟು ಸ್ಪೋಟಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಮೀರತ್ ಜಿಲ್ಲೆಯ ಮಿಲಾಕ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು.
ಬಾಲಕಿ ತಂದೆ ಶಶಿಕುಮಾರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಯುವಕನ ಹೆಸರು ಹರ್ಷಾಲ್ ಎಂದು.
ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಬಾಯಿಗೆ 50 ಹೊಲಿಗೆಗಳನ್ನು ಹಾಕಲಾಗಿದೆ.ಗಂಟಲು ಸುಟ್ಟಿದ್ದು, ಪರಿಸ್ಥಿತಿ ಚಿಂತಾಜನಕ ಆಗಿದೆ ಎಂದು ತಿಳಿದುಬಂದಿದೆ.