ಉಪೇಂದ್ರ ರಿಯಲ್ ಲೈಫಲ್ಲೂ ಸೇಮ್ ಟು ಸೇಮ್..! ಸರಿ ಇದ್ರೆ ಸರಿ, ಉಲ್ಟಾ ಹೊಡುದ್ರೆ ಉಲ್ಟಾ..! ಅದಕ್ಕೆ ಅವರ ಅಭಿಮಾನಿಗಳಿಗೆ ಅವರಂದ್ರೆ ಸಖತ್ ಇಷ್ಟ..! ಈ ವಿಷಯ ಈಗ್ಯಾಕೆ ಅಂದ್ರಾ..? ಯಾರೋ ಕುಡುಕೊಂಡು ಬಂದು ಬಾಯಿಗೆ ಬಂದಹಾಗೆ ಮಾತಡಿದ್ದಕ್ಕೆ ಉಪ್ಪಿ ಫುಲ್ ರೈಸ್ ಆಗಿ ಅವನಿಗೆ ವಾರ್ನಿಂಗ್ ಮಾಡಿರೋ ವಿಡಿಯೋ, ಫೇಸ್ ಬುಕ್ ಹಾಗೂ ವಾಟ್ಸಾಪಲ್ಲಿ ಹರಿದಾಡ್ತಿದೆ..! ಅವರ ಉಪ್ಪಿ ಫ್ಯಾನ್ಸ್ ಪೇಜಲ್ಲೂ ಈ ವೀಡಿಯೋ ಕಾಣಿಸಿಕೊಂಡಿದೆ.. ಉಪ್ಪಿ2 ಶೂಟಿಂಗ್ ಟೈಮಲ್ಲಿ ಈ ಕಿರಿಕ್ ಆಗಿದೆ ಅನ್ನೋದು ಉಪೇಂದ್ರ ಕಾಸ್ಟ್ಯೂಮ್ ನೋಡಿದ್ರೆ ಗೊತ್ತಾಗ್ತಿದೆ..! ರಿಯಲ್ ಲೈಫಲ್ಲಿ ಉಪ್ಪಿ ತುಂಬಾ ಶಾಂತ ಸ್ವಭಾವದವರು, ಆದ್ರೆ ಅವರನ್ನು ಯಾರಾದ್ರೂ ಸುಖಾಸುಮ್ಮನೆ ಕೆಣಕಿದ್ರೆ ಅವರು ರಿಯಲ್ ಲೈಫಲ್ಲೂ ರಿಯಲ್ ಸ್ಟಾರ್..! ಉಪ್ಪಿ ಶೂಟಿಂಗ್ ವಿಚಾರದಲ್ಲಿ ಸಿಕ್ಕಾಪಟ್ಟೆ ಸ್ಟ್ರಿಕ್ಟ್, ಅವರಿಗೆ ಅಂತಾ ಟೈಮಲ್ಲಿ ಯಾರಾದ್ರೂ ತೊಂದರೆ ಕೊಟ್ಟರೆ ಸುಮ್ಮನಿರೋ ಚಾನ್ಸೇ ಇಲ್ಲ ಬಿಡಿ..! ಉಪ್ಪಿ ಹೆಂಗೆ ಆ ಕುಡುಕನಿಗೆ ಚೋಕ್ ಕೊಡ್ತಾರೆ ಅಂತ ನೀವೇ ನೋಡಿ..!