ಪರೀಕ್ಷೆ ಬರೆದು , ಸಂದರ್ಶನದಲ್ಲಿ ಉತ್ತೀರ್ಣರಾಗಿ ಉತ್ತಮ ಮೆರಿಟ್ ಆಧಾರದಲ್ಲಿ ಐಎಎಸ್ , ಐಪಿಎಸ್ ಅಧಿಕಾರಿಗಳಾಗುತ್ತೇವೆ ಎಂದುಕೊಂಡಿರುವ. ಅಭ್ಯರ್ಥಿಗಳ ಲೆಕ್ಕಾಚಾರ ಉಲ್ಟಾ ಆಗಬಹುದು..!
ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಮಹತ್ವದ ಬದಲಾವಣೆಯಾಗೋ ಸಾಧ್ಯತೆ ಇದೆ. ಯುಪಿಎಸ್ ಸಿ ತನ್ನ ಸ್ವಾಯತ್ತ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಕೇಂದ್ರೀಯ ಸೇವೆಗೆ ಆಯ್ಕೆಯಾಗೋ ಅಭ್ಯರ್ಥಿಗಳು ಮಸ್ಸೌರಿಯಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಆಡಳಿತಾತ್ಮಕ ಅಕಾಡೆಮಿಯಲ್ಲಿ ಮೂರು ತಿಂಗಳು ಫೌಂಡೇಶನ್ ಕೋರ್ಸ್ ಗೆ ಹಾಜರಾಗಬೇಕಾಗುತ್ತದೆ. ಆ ಕೋರ್ಸ್ ನಲ್ಲಿ ಸಿಗುವ ಅಂಕಗಳ ಆಧಾರದ ಮೇಲೆ ಐಎಎಸ್, ಐಪಿಎಸ್ ಮತ್ತು ಐಆರ್ ಎಸ್ ಹುದ್ದೆ ನಿರ್ಧಾರವಾಗುತ್ತದೆ. ಈ ಅಂಕಗಳನ್ನು ನಿರ್ಧರಿಸುವುದು ಸಹ ಅಕಾಡೆಮಿಯೇ.
ಈ ಬಗ್ಗೆ ವಾರದೊಳಗೆ ಪ್ರಧಾನಮಂತ್ರಿ ಕಾರ್ಯಾಲಯ ಅಭಿಪ್ರಾಯವನ್ನು ಕೇಳಿ ಆಡಳಿತ ಮತ್ತು ಸಿಬ್ಬಂದಿ ಸಚಿವಾಲಯಕ್ಕೆ ಸುತ್ತೋಲೆ ಹೊರಡಿಸಲಿದೆ ಎಂದು ತಿಳಿದುಬಂದಿದೆ.