No menu items!
14.5 C
Munich
Wednesday, July 29, 2026

ಡಾಲಿ ಧನಂಜಯ್ ಮೇಲೆ‌ ಬಿದ್ದಿದೆ ವರ್ಮ ಕಣ್ಣು…!

Must read

ಟಗರು ಡಾಲಿ ಖ್ಯಾತಿಯ ನಟ ಧನಂಜಯ್ ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಇದೀಗ ಡಾಲಿ ಧನಂಜಯ್ ಮೇಲೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಕಣ್ಣು ಬಿದ್ದಿದೆ. ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸುವಂತೆ ಧನಂಜಯ್ ಗೆ ವರ್ಮ ಆಫರ್ ನೀಡಿದ್ದಾರೆ.


ಧನಂಜಯ್ ಅವರನ್ನು ಹೈದರಾಬಾದ್ ಗೆ ಕರೆಸಿಕೊಂಡ ವರ್ಮ ಮಾತುಕತೆ ನಡೆಸಿದ್ದಾರೆ.
ನೆಗೆಟೀವ್ ಶೇಡ್ ಇರುವಂತಹ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖಪಾತ್ರ ಇದಾಗಿದ್ದು, ಇದಕ್ಕಾಗಿ ಧನಂಜಯ್ ತಯಾರಿಯನ್ನೂ ನಡೆಸಬೇಕಿದೆ.


ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ವರ್ಮ ಟಗರು ಸಿನಿಮಾ ವೀಕ್ಷಿಸಿದ್ದರು. ಡಾಲಿ ಪಾತ್ರಕ್ಕೆ ಫಿದಾ ಆಗಿ ಮೆಚ್ಚುಗೆಯ ನುಡಿಗಳನ್ನಾಡಿದ್ದರು.
ಸದ್ಯ ನಾಗರ್ಜುನ್ ಅಭಿನಯದ ‘ಆಫೀಸರ್’ ಸಿನಿಮಾದಲ್ಲಿ ವರ್ಮ ಬ್ಯುಸಿ ಇದ್ದಾರೆ. ಇದು ತೆರೆಗೆ ಬರುತ್ತಿದ್ದಂತೆ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article