ಮನೆಯ ಒಳಗೆ ತನ್ನ ಗೆಳತಿಯೊಡನೆ ಬೆತ್ತಲಾಗಿ ಟಿವಿ ನೋಡುತ್ತಿದ್ದವ ತಡಮಾಡದೇ ಕಳ್ಳನನ್ನು ಹಿಡಿದು ಸಾಹಸ ಮೆರೆದಿದ್ದಾನೆ.
ಇದು ನಡೆದಿರೋದು ಅಮೆರಿಕಾದಲ್ಲಿ. 33 ವರ್ಷದ ಕಲಿನ್ ತನ್ನ ಗೆಳತಿ ನಿಕೋಲಾ ಬೋಡ್ ವಿನ್ ಜೊತೆ ಬೆತ್ತಲಾಗಿ ರಾತ್ರಿ 11.30ರ ಸುಮಾರಿನಲ್ಲಿ ಟಿವಿ ನೋಡುತ್ತಿದ್ದ.
ಈ ವೇಳೆ ಮನೆಯ ಹೊರಗಡೆ ನಿಲ್ಲಿಸಿದ್ದ ರೇಂಜ್ ರೋವರ್ ಕಾರನ್ನು ಕದಿಯಲು ಕಳ್ಳನೊಬ್ಬ ಯತ್ನಿಸಿದ್ದಾನೆ. ಅವನು ಹೇಗೋ ಚಾಲಕನ ಸೀಟಿನಲ್ಲಿ ಕುಳಿತುಕೊಂಡಾಗ ಕಾರಿನ ಲಾಕ್ ಸೈರನ್ ಕೂಗಿದೆ. ಕೂಡಲೇ ಮಾಲೀಕ ಕಲಿನ್ ಹೇಗಿದ್ದನೋ ಹಾಗೇ ಹುಟ್ಟುಡುಗೆಯಲ್ಲಿ ಅಂದರೆ ಬೆತ್ತಲಾಗಿಯೇ ಹೊರಗೆ ಬಂದಿದ್ದಾನೆ…! ಬಟ್ಟೆ ಹಾಕಿಕೊಳ್ಳಲೂ ಸಹ ಸಮಯ ನೀಡದೆ ಹಾಗೇ ಬಂದ ಈತನ ಸಾಹಸ ಸಿಸಿಟಿವಿಯಲ್ಲಿ ಸೆರೆಯಾಗಿದೆ.