ಭಾರತದ ಐಟಿ ಉದ್ಯೋಗಿಗಳ ಜೀವಾಳವಾಗಿರುವ ಹೆಚ್-1ಬಿ ವೀಸಾಗೆ ಸಂಬಂಧಿಸಿದಂತೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಆದೇಶ ಹೊರಡಿಸುವ ಸಾಧ್ಯತೆ ಇದೆ. ಹೆಚ್-1ಬಿ ವೀಸಾಗೆ ಇರಬೇಕಾದ ಕನಿಷ್ಠ ವೇತನವನ್ನು 1 ಲಕ್ಷದ 30 ಸಾವಿರ ಡಾಲರ್ ನಿಗಧಿ ಮಾಡುವ ಮೂಲಕ ಭಾರತೀಯರಿಗೆ ಶಾಕ್ ನೀಡಿದ್ದಾರೆ. ಈ ವೀಸಾ ನೀತಿಯಿಂದ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳ ಜೀವನ ಅತಂತ್ರವಾಗುವ ಸಾಧ್ಯತೆ ಇದೆ. ಹೆಚ್-1ಬಿ ವೀಸಾ ಪಡೆಯಬೇಕಾದ್ರೆ ಕನಿಷ್ಠ 80 ಲಕ್ಷ ರೂ ಸಂಬಳ ಇರಲೇಬೇಕೆಂಬುವ ಹೊಸ ನೀತಿಯ ತಿದ್ದುಪಡಿಗೆ ಅಮೇರಿಕಾ ಸಂಸತ್‍ನಲ್ಲಿ ಸಮ್ಮತಿ ದೊರಕಿದೆ. ಇದರಿಂದ ಭಾರತದ ಮಾಹಿತಿ ತಂತ್ರಜ್ಞಾನದ ಮೇಲೆ ಭಾರಿ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಹೆಚ್-1ಬಿ ವೀಸಾ ಪಡೆಯಬೇಕಾದ್ರೆ ಕನಿಷ್ಟ ವೇತನ 60 ಸಾವಿರ ಡಾಲರ್ ಆದ್ರೂ ಇರಬೇಕಿತ್ತು. ಆದರೆ ಈ ಮೊತ್ತವನ್ನು ದ್ವಿಗುಣಗೊಳಿಸಿದ್ದು, ಭಾರತದ ಐಟಿ ಉದ್ಯಮ ಮತ್ತು ಉದ್ಯೋಗಿಗಳ ಮೇಲೆ ಭಾರಿ ಹೊಡೆತ ಬೀಳಲಿದೆ. ಈ ನೀತಿಯಿಂದ ಅಮೇರಿಕಾದಲ್ಲಿ ವಾಸಿಸುತ್ತಿರುವ ಸಾವಿರಾರು ಅನಿವಾಸಿ ಭಾರತೀಯರಿಗೆ ವೀಸಾನೂ ಧಕ್ಕದೆ ಅತ್ತ ಬೇರೆ ಕಡೆ ಕೆಲಸವೂ ಧಕ್ಕದೆ ಅತಂತ್ರ ಸ್ಥಿತಿಗೆ ಬರುವಂತಾಗಿದೆ. ಇನ್ನು ಡೊಲಾಲ್ಡ್ ಟ್ರಂಪ್ ನೀಡಿರುವ ಶಾಕ್‍ಗೆ ಭಾರತದ ಮೇಲೂ ಪರಿಣಾಮ ಬೀರಿದ್ದು ಅದರಲ್ಲೂ ಮುಖ್ಯವಾಗಿ ಐಟಿ ಕಂಪನಿಯ ಕೇಂದ್ರ ಬಿಂದುವಾದ ಬೆಂಗಳೂರಿನ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ. ಅಲ್ಲದೆ ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿರುವ ಐಟಿ ಸಂಸ್ಥೆಗಳ ಮೇಲೆಯೂ ಪರಿಣಾಮ ಬೀರಲಿದೆ. ಅಮೇರಿಕಾ ಪ್ರಜೆಗಳಿಗೆ ತಮ್ಮ ದೇಶದಲ್ಲಿ ಹೆಚ್ಚಿನ ಉದ್ಯೋಗವಕಾಶ ನೀಡುವ ದೃಷ್ಠೀಕೋನದಿಂದ ಟ್ರಂಪ್ ಈ ನಿರ್ಧಾರಕ್ಕೆ ಬಂದಿದ್ದು, ಇದರಿಂದ ಅಲ್ಲಿನ ಅನಿವಾಸಿ ಭಾರತೀಯರ ಸ್ಥಿತಿ ಹೇಳತೀರದಾಗಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?
ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!
2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?
ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ
ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!