No menu items!
5.1 C
Munich
Friday, April 24, 2026

ಟ್ರಂಪ್ ವಲಸೆ ನೀತಿ ಖಂಡಿಸಿದಕ್ಕೆ ಅಟಾರ್ನಿ ಜನರಲ್ ವಜಾ..!

Must read

ಅಮೇರಿಕಾದ ನೂತನ ಅಧ್ಯಕ್ಷ ಡೊಲಾಲ್ಡ್ ಟ್ರಂಪ್ ಆಡಳಿತಕ್ಕೆ ಬಂದು ಇನ್ನು ಒಂದು ವಾರಗಳೆ ಕಳೆದಿಲ್ಲ ಆಗಲೆ ತಮ್ಮ ರಾಷ್ಟ್ರದಲ್ಲಿ ಹಲವು ಹೊಸ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ತಯಾರಿ ನಡೆಸುತ್ತಿದ್ದಾರೆ. ಇದೀಗ ಅಮೇರಿಕಾಲ್ಲಿ ವಲಸೆ ನೀತಿಯನ್ನು ತರಲು ನಿರ್ಧರಿಸಿದ್ದ ಟ್ರಂಪ್‍ಗೆ ಅಲ್ಲಿನ ಹಂಗಾಮಿ ಜನರಲ್ ಸ್ಯಾಲಿಯೇಟ್ಸ್ ಅವರು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ ಎಂದು ಹೇಳಿದ ಕಾರಣಕ್ಕಾಗಿ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ಅವರ ಜಾಗದಲ್ಲಿ ಡಾನಾ ಬೊಯಂಟೆ ಅವರನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ. ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ ಅವರ ಆಡಳಿತಾವಧಿಯಲ್ಲಿ ನೇಮಿಸಲಾಗಿದ್ದ ಇವರನ್ನು ಟ್ರಂಪ್ ನಿರ್ದಾಕ್ಷಿಣ್ಯವಾಗಿ ವಜಾಗೊಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸ್ಯಾಲಿಯೇಟ್ಸ್ ಟ್ರಂಪ್ ಅವರ ವಲಸೆ ನೀತಿಯನ್ನಿ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಹಾಗೂ ಈ ನೀತಿಯನ್ನು ತಾವು ಖಂಡಿಸುವುದಾಗಿಯು ತಿಳಿಸಿದ್ದರು. ಅಷ್ಟೆ ಅಲ್ಲ ಈ ಕುರಿತಾಗಿ ಅಟಾರ್ನಿ ಜನರಲ್ ಅಮೇರಿಕಾ ನ್ಯಾಯಾಂಗ ವ್ಯವಸ್ಥೆಯ ವಕೀಲರಿಗೆ ಪತ್ರ ಬರೆದಿದ್ದು ಅಮೇರಿಕಾದ ಒಳಗೆ ನಿರಾಶ್ರಿತರು ಪ್ರವೇಶಿಸಲು ಟ್ರಂಪ್ ವಿಧಿಸಿರುವ 120 ದಿನಗಳ ತಡೆ, ಸಿರಿಯಾದಿಂದ ಬರ್ತಾ ಇರುವ ವಲಸಿಗರಿಗೆ ಶಾಶ್ವತ ತಡೆ ಹಾಗೂ ಇರಾನ್, ಇರಾಕ್, ಲಿಬಿಯಾ ಸೋಮಾಲಿಯಾ, ಸುಡಾನ್, ಯೆಮನ್, ದೇಶಗಳಿಂದ ವಲಸೆ ಬರ್ತಾ ಇರುವವರ ಮೇಲೆ 90 ದಿನಗಳವರೆಗಿನ ತಡೆಯನ್ನು ತಾನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಟ್ರಂಪ್ ವಿರುದ್ದ ತಿರುಗಿ ಬಿದ್ದಿದ್ದರು. ಈ ಕಾರಣಕ್ಕಾಗಿ ಸ್ಯಾಲಿಯೇಟ್ಸ್ ಅವರನ್ನು ಅಟಾರ್ನಿ ಜನರಲ್ ಸ್ಥಾನದಿಂದ ಕಿತ್ತೊಗೆದು ಆ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಲಾಗಿದೆ. ಈ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ಪ್ರಸ್ತುತ ವರ್ಜೀನಿಯಾ ಅಟಾರ್ನಿ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾನಾ ಬೊಯಂಟೆ ಅವರು ಅಮೇರಿಕಾ ಸರ್ಕಾರದ ಪರ ವಕೀಲರಾಗಿ ನೇಮಕಗೊಂಡಿದ್ದಾರೆ ಎಂದು ಹೇಳಿದ್ದಾರೆ. ಮುಸ್ಲೀಮರೇ ಅತೀ ಹೆಚ್ಚಿರುವ ಏಳು ರಾಷ್ಟ್ರಗಳ ಪ್ರಜೆಗಳಿಗೆ ಅಮೇರಿಕಾದಲ್ಲಿ ನೆಲೆಸಲು ತಾತ್ಕಾಲಿತ ತಡೆ ಹಾಗೂ ಅದನ್ನು ವಿರೋಧಿಸಿದಕ್ಕಾಗಿ ಅಟಾರ್ನಿ ಜನರಲ್ ಸ್ಯಾಲಿಯೇಟ್ಸ್ ಅವರನ್ನು ವಜಾಗೊಳಿಸಿರುವ ಟ್ರಂಪ್ ನೀತಿಯನ್ನು ಖಂಡಿಸಿ ಅಮೇರಿಕಾದಾದ್ಯಂತ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಟ್ರಂಪ್ ಆದೇಶದ ವಿರುದ್ದ ನಾವು ಕೂಡ ಪ್ರತಿಭಟನೆಗೆ ಬೆಂಬಲ ನೀಡ್ತೇವೆ ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ಒಬಾಮಾ ಘೋಷಿಸಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article