ಸುರಕ್ಷಿತ ಚಾಲನೆ ಕಡೆಗೆ ಗಮನ ಹರಿಸಬೇಕು. ಇರುದೊಂದು ಜೀವ ಈ ಜೀವವನ್ನು ಉಳಿಸಿಕೊಳ್ಳೋಣ. ಈ ಬಗ್ಗೆ ಜಾಗೃತಿ ಮೂಡಿಸಲು ರೇಡಿಯೋ ಮಿರ್ಚಿ 98.3ಎಫ್ ಎಂ ಯಾವಾಗಲೂ ಮುಂದಿರುತ್ತೆ.
ದ್ವಿಚಕ್ರವಾಹನ ಸವಾರರ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿ 15ರಂದು ‘ತಲೆ ಬಳಸಿ ತಲೆ ಉಳಿಸಿ’ (Use your head to save your head’) ಅಭಿಯಾನವನ್ನು ಹಮ್ಮಿಕೊಂಡಿದೆ.
ಗೃಹರಕ್ಷಕ ದಳದ ಐಜಿಪಿ ಡಿ.ರೂಪ ಅವರು ರೇಡಿಯೋ ಮಿರ್ಚಿ ಆವರಣದಲ್ಲಿ ಮಧ್ಯಾಹ್ನ 2ಗಂಟೆಗೆ ಅಭಿಯಾನಕ್ಕೆ ಚಾಲನೆ ನೀಡುವರು.
ವೆಬ್ ಮೀಡಿಯಾ ಪಾರ್ಟನರ್ ಆಗಿ ರೇಡಿಯೋ ಮಿರ್ಚಿ ಜೊತೆ ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ ವೆಬ್ ಪೋರ್ಟಲ್ ಕೂಡ ಕೈ ಜೋಡಿಸುತ್ತಿದೆ.