ಇವರು ನ್ಯೂಸ್ ಆ್ಯಂಕರ್ಸ್ ಗ್ರೂಪ್ ನ ಬಿಗ್ ಬಾಸ್…!

Date:

ಕನ್ನಡ ನ್ಯೂಸ್ ಚಾನಲ್ ಗಳ ಸುಮಾರು 125 ಮಂದಿ ನ್ಯೂಸ್ ರೀಡರ್ಸ್ ಆ್ಯಂಕರ್ಸ್ ಗಳನ್ನು ಒಂದೆಡೆ ಸೇರಿಸಿದ ಕೀರ್ತಿ ಇವರದ್ದು…! ಇಂದು ಕನ್ನಡ ಸುದ್ದಿವಾಹಿನಿಗಳ ಎಲ್ಲಾ ನಿರೂಪಕರು ಪರಸ್ಪರ ಪರಿಚಿತರು,ಸ್ನೇಹಿತರು. ಇದಕ್ಕೆ ಕಾರಣ ‘ನ್ಯೂಸ್ ಆ್ಯಂಕರ್ಸ್ ಗ್ರೂಪ್’ ನ ಬಿಗ್ ಬಾಸ್ ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ).

ನ್ಯೂಸ್ ಆ್ಯಂಕರ್‍ಗಳೆಲ್ಲಾ ಪರಸ್ಪರ ಪರಿಚಿತರಿರಬೇಕು. ವಿಚಾರ ವಿನಿಮಯ ಮಾಡಿಕೊಳ್ಳುತ್ತಿರಬೇಕು. ಒಬ್ಬರ ಕಷ್ಟಕ್ಕೆ ಇನ್ನೊಬ್ಬರಾಗಬೇಕು. ಸದಾ ಒಟ್ಟಾಗಿರಬೇಕು ಎಂಬ ಧ್ಯೇಯೋದ್ದೇಶದಿಂದ 3 ವರ್ಷದ ಹಿಂದೆ ನ್ಯೂಸ್ ಆ್ಯಂಕರ್‍ಗಳ ವಾಟ್ಸಪ್ ಗ್ರೂಪ್‍ವೊಂದನ್ನು ರಚಿಸಿದ್ದಾರೆ ವೆಂಕಟೇಶ್. ಹೊಸಬರು ನಿರೂಪಕರಾದ 3 ತಿಂಗಳ ಬಳಿಕವೇ ಗ್ರೂಪ್ ನ ಮೆಂಬರ್ ಆಗುತ್ತಾರೆ.


ಇದೇನು ಮಹತ್ತರ ಕೆಲಸವಾ? ಅಂತ ಕೆಲವರು ಪ್ರಶ್ನಿಸಬಹುದು. ಹೌದು, ಮೂರು ಮತ್ತೊಂದು ಮಂದಿ ಇರೋ ವಾಟ್ಸಪ್ ಗ್ರೂಪ್ ಗಳನ್ನು ನಿಭಾಯಿಸಿಕೊಂಡು ಹೋಗದೇ ರಗಳೆ. ಅಂತದ್ರಲ್ಲಿ ಬೇರೆ ಬೇರೆ ಸಂಸ್ಥೆ ನಿರೂಪಕರನ್ನು ಒಂದುಗೂಡಿಸೋದು ಸಾಮಾನ್ಯ ವಿಷಯನಾ…? ಖಂಡಿತಾ ಇಲ್ಲ.. ಅದೂ ಎಲ್ಲರನ್ನೂ ಒಂದೇ ಗ್ರೂಪ್ ನಲ್ಲಿ ಸೇರಿಸಿ, ಸಹಜವಾದ ಸಣ್ಣ ಪುಟ್ಟ ಮನಸ್ತಾಪಗಳು ಬಂದಾಗ ಬ್ಯಾಲೆನ್ಸ್ ಮಾಡಿ ‘ಆ್ಯಂಕರ್ಸ್’ ಕುಟುಂಬನ್ನು ಸರಿದೂಗಿಸಿಕೊಂಡು ಹೋಗುವುದು ಸುಲಭಲ್ಲ.


ಇವರು ರಚಿಸಿರುವ ಈ ಗ್ರೂಪ್ ನಲ್ಲಿ ಕನ್ನಡ ಸುದ್ದಿ ಮಾಧ್ಯಮಗಳ ಬಹುತೇಕ ಎಲ್ಲ ಎಂದರೆ ಎಲ್ಲಾ ನಿರೂಪಕರು ಇದ್ದಾರೆ. ಬ್ರೇಕಿಂಗ್ ನ್ಯೂಸ್ ಗಳು ,ವಸ್ತುನಿಷ್ಠ ವಿಷಯಗಳು, ಅವಕಾಶ ವಿಚಾರಗಳು ಇತ್ಯಾದಿ ಇತ್ಯಾದಿ ಈ ಗ್ರೂಪ್ ನಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತವೆ.ಅಷ್ಟೂ ಮಂದಿಯೂ ಪ್ರತಿಭಾವಂತರೇ ಆಗಿರುವುದರಿಂದ ಎಲ್ಲರೂ ತಮ್ಮ ವಿಚಾರಧಾರೆಯನ್ನು ಮಂಡಿಸ್ತಾರೆ…ಪರ-ವಿರೋಧ ವಾದ-ವಿವಾದ ಬಹಳವಾಗಿಯೇ ಸಾಗುತ್ತದೆ..ಇಷ್ಟೆಲ್ಲಾ ನಡೆದರೂ ಎಲ್ಲಾ ನಿರೂಪಕರು ಇಲ್ಲಿ ಫ್ರೆಂಡ್ಸ್..


ಹಾಗಾಗಿ ನ್ಯೂಸ್ ಆ್ಯಂಕರ್ಸ್ ಅಸೋಶಿಯೇಷನ್ ಒಂದನ್ನು ಸ್ಥಾಪಿಸಬೇಕು, ನಿವೃತ್ತಿ ಬಳಿಕವೂ ಅಸೋಶಿಯೇಷನ್ ಸದಸ್ಯತ್ವ ಇರಬೇಕು. ಒಂದು ಸಂಸ್ಥೆಯನ್ನು ಬಿಟ್ಟಮೇಲೆ ಯಾರೂ ಇನ್ನೊಬ್ಬರನ್ನು ಗುರುತಿಸಲ್ಲ. ಎಲ್ಲೇ ಇರಲಿ, ಹೇಗೆ ಇರಲಿ ಕೊನೆ ಉಸಿರಿರೋ ತನಕ ಅಸೋಶಿಯೇಷನ್ ಸದಸ್ಯತ್ವ ಇರುತ್ತೆ. ಆಗ ಎಲ್ಲರೂ ಸಂಪರ್ಕದಲ್ಲಿರಬಹುದು. ಜೊತೆಗೆ ಒಂದು ಸವಿನೆನಪು ಕೂಡ ನಮ್ ಜೊತೆ ಇರುತ್ತೆ. ಆದ್ದರಿಂದ ಅಸೋಶಿಯೇಷನ್ ರಚನೆ ಮಾಡಲೇ ಬೇಕು ಎಂಬ ಕನಸು ವೆಂಕಟೇಶ್ ಅವರದ್ದು.


ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಳ್ತೂರು ಎಂಬ ಪುಟ್ಟಹಳ್ಳಿಯವರು ವೆಂಕಟೇಶ್. ಇವರ ತಂದೆ ಚನ್ನಕೇಶವ ಅಡಿಗ, ತಾಯಿ ಶ್ರೀಮತಿ, ತಮ್ಮ ರಮೇಶ್, ತಂಗಿ ಅಂಬಿಕಾ, ಪತ್ನಿ ರೋಹಿಣಿ ಅಡಿಗ, ಮುದ್ದಾದ ಪುಟ್ಟ ಮಗಳು ಶಿವನ್ಯಾ.


ಸುಂದರವಾದ ಹಳ್ಳಿ ಪರಿಸರದಲ್ಲಿ ಬೆಳೆದ ವೆಂಕಟೇಶ್ ಅವರಿಗೆ ನಗರ ಜೀವನದ ಕಲ್ಪನೆಗಳು ಇರಲಿಲ್ಲ. ನಾನು ಹೀಗೆಯೇ ಆಗ್ಬೇಕು. ಇದೇ ಕೆಲಸ ಮಾಡ್ಬೇಕು ಅನ್ನೋ ಗುರಿ ಇರ್ಲಿಲ್ಲ. ನಾಳೆ ಕಥೆ ನಾರಾಯಣ ಬಲ್ಲ ಅಂತ ಇವತ್ತಿ ಆಟ, ಊಟ ಅಷ್ಟೇ ಜೀವನ ಆಗಿತ್ತು.
ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿದ್ದು ಅಜ್ಜಿ ಮನೆ ಉಪ್ಪಿನ ಕುದ್ರುವಿನಲ್ಲಿ. ಅಜ್ಜಿಯ ಮುದ್ದಿನ ಮೊಮ್ಮಗ ಅಂದ್ರೆ ಕೇಳ್ಬೇಕ. ಆರಾಮಾಗಿ ಶಾಲೆಗೆ ಹೋಗು- ಬಾ, ಆಟ ಆಡು- ತಿಂಡಿ ತಿನ್ನು-ಊಟ ಮಾಡು…


ಕುಂದಾಪುರದಲ್ಲಿ ಪಿಯುಸಿಗೆ ಸೇರಿದಾಗ ರೋಟರಿ, ಜೇಸೀಸ್ ಮೊದಲಾದ ಸಂಘ-ಸಂಸ್ಥೆಗಳ ಒಡನಾಟ ಬೆಳೀತು. ವೇದಿಕೆಯನ್ನೇರಿ ಮಾತಾಡೋ ಕಲೆ ಸಿದ್ಧಿಸಿತು. ಬಿಎ ಪದವಿ ಮುಗಿಯುಷ್ಟರಲ್ಲಿ ಎಷ್ಟು ಮಂದಿ ಎದುರು ಬೇಕಾದ್ರು, ಎಷ್ಟೊತ್ತು ಬೇಕಾದ್ರು ಮಾತಾಡೋ ರೀತಿ ಬೆಳೆದ್ರು.


ಮನೆಯಲ್ಲಿ ಸ್ವಲ್ಪ ಜಮೀನು ಇದೆ. ಆದ್ರೆ, ಪೌರೋಹಿತ್ಯ ಕುಲಕಸುಬು. ಶಾಲೆ-ಕಾಲೇಜಿಗೆ ಹೋಗುವಾಗ ಪೌರೋಹಿತ್ಯವನ್ನು ಸಹ ಕಲಿತಿದ್ದಾರೆ. ವೇದಾಧ್ಯಯನ ಕೂಡ ಮಾಡಿದ್ದಾರೆ. ಕುಲ ಕಸುಬನ್ನು ಯಾವುದೇ ಕಾರಣಕ್ಕೂ ಬಿಡಲ್ಲ, ಬಿಡಬಾರದು ಅನ್ನೋದು ಇವರ ಗಟ್ಟಿ ನಿಲುವು.


ಆದ್ರೆ, ಕಾಲೇಜು ದಿನಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರಿಂದ ತಾನು ಕೂಡ ಮಾಧ್ಯಮ ಕ್ಷೇತ್ರಕ್ಕೆ ಹೋಗಬೇಕು ಎಂಬ ಕನಸು ವೆಂಕಟೇಶ್ ಅವರಲ್ಲಿ ಹುಟ್ಟಿತು. ಆಗಿದ್ದ ಕನ್ನಡದ ಏಕಮಾತ್ರ ಸುದ್ದಿ ವಾಹಿನಿ ಅಂದ್ರೆ ಉದಯ. ಸರಿ, ಆಗುತ್ತೋ ಆಗಲ್ವೋ… ಒಂದ್ ಪ್ರಯತ್ನ ಮಾಡೋಕೇನ್ ಕಷ್ಟ ಆಗಿದ್ದಾಗಲಿ ಅಂತ ಮೀಡಿಯಾ ಫೀಲ್ಡ್ ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ರು.


ಬಿಎ ಪದವಿ ಮುಗಿಯುವ ಹೊತ್ತಿಗೆ ಉದಯ ಟಿವಿಯಲ್ಲಿ ನಿರೂಪಕರು ಬೇಕಾಗಿದ್ದಾರೆ ಎಂಬ ಜಾಹಿರಾತು ಬಂತು. ಆ ಜಾಹಿರಾತು ನೋಡಿದ ವೆಂಕಟೇಶ್ ಅವರಿಗೆ ಲಡ್ಡು ಬಂದು ಬಾಯಿಗೆ ಬಿದ್ದಂಗಾಯ್ತು…! ಮುಂದಿಂದು ಹೇಳ್ಬೇಕ… ಬೆಂಗಳೂರಿನ ಉದಯ ಟಿವಿ ಕಚೇರಿಗೆ ಬಂದ್ರು. ಎಕ್ಸಾಮ್ ಪಾಸ್ ಆಯ್ತು, ಸ್ಕ್ರೀನ್ ಟೆಸ್ಟಲ್ಲೂ ಗೆದ್ರು. ನ್ಯೂಸ್ ರೀಡರ್ ಆಗಿ ಆಯ್ಕೆಯಾಗಿಯೇ ಬಿಟ್ರು…!


2007ರಲ್ಲಿ ಉದಯ ನ್ಯೂಸ್ ಮೂಲಕ ಮೀಡಿಯಾ ಜರ್ನಿ ಆರಂಭವಾಯ್ತು. ಚೆನ್ನೈಗೆ ಹೋಗಿ ನ್ಯೂಸ್ ಓದಿದ್ರು. ಊರಿನ ಹೆಸರು ಜೊತೆಗಿರಲಿ ಅಂತ ವೆಂಕಟೇಶ್ ಅಡಿಗ ತನ್ನ ಹೆಸರಿನ ಮುಂದಿದ್ದ ಜಾತಿ ಹೆಸರನ್ನು ತೆಗೆದು ಊರು ಉಣ್ತೂರು ಹೆಸರನ್ನು ಸೇರಿಸಿಕೊಂಡು ವೆಂಕಟೇಶ್ ಉಳ್ತೂರು ಹೆಸರಲ್ಲಿ ನ್ಯೂಸ್ ರೀಡರ್ ಆಗಿ ತೆರೆಮೇಲೆ ಬಂದ್ರು. ಇವರು ಯಾವತ್ತು ವೆಂಕಟೇಶ್ ಉಳ್ತೂರು ಆದ್ರೋ ಅವತ್ತಿಂದ ಊರಿನ ಬಹುತೇಕರು ತಮ್ಮ ಜಾತಿ ಸೂಚಕ ಹೆಸರಿನ ಬದಲಿಗೆ ಊರಿನ ಹೆಸರನ್ನು ಸೇರಿಸಿಕೊಂಡ್ರು.


2015ರ ವರೆಗೆ ಉದಯ ನ್ಯೂಸ್ ನಲ್ಲಿ ವಾರ್ತಾ ವಾಚನ, ಡಿಸ್ಕಷನ್ಸ್ , ಲೈವ್ ಪ್ರೋಗ್ರಾಮ್ಸ್ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾವೇರಿ ಗಲಾಟೆ ಸಮಯದಲ್ಲಿ ಕರ್ನಾಟಕದ ವಿರುದ್ಧ ಮಾತಾಡೋಕೆ ತಾಯಿನಾಡಿನ ವಿರುದ್ಧ ಮಾತಡೋಕೆ ಆಗಲ್ಲ, ಜೊತೆಗೆ ಕನ್ನಡಿಗರ ಕೆಂಗಣ್ಣಿಗೆ ಗುರಿ ಆಗ್ಬೇಕು ಎಂಬ ಸ್ಥಿತಿ, ಅತ್ತ ಸಂಪೂರ್ಣ ಕರ್ನಾಟಕದ ಪರ ಬ್ಯಾಟ್ ಬೀಸಿದ್ರೆ ಮ್ಯಾನೇಜ್ಮೆಂಟ್ ಅವರಿಗೆ ಆಗಲ್ಲ…! ಇಂಥಾ ಸಂದರ್ಭದಲ್ಲಿ ಎರಡನ್ನೂ ಬ್ಯಾಲೆನ್ಸ್ ಮಾಡಿ ಕಾರ್ಯಕ್ರಮ ನಡೆಸಿಕೊಡಬೇಕಾಗಿದ್ದು ವೆಂಕಟೇಶ್ ಅವರ ಜವಬ್ದಾರಿ ಹಾಗೂ ಎದುರಿಗಿದ್ದ ದೊಡ್ಡ ಸವಾಲು ಕೂಡ ಆಗಿತ್ತು. ಇದನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ರು.


ಇಲ್ಲಿ ನಿರೂಪಕರಾಗಿದ್ದ ಜಯಶ್ರಿ ಶೇಖರ್,ವಾಣಿ ಕೌಶಿಕ್ ಹಾಗೂ ಅಶೋಕ್ ವಿಠ್ಠಲವಾಡಿ ಅವರು ವೆಂಕಟೇಶ್ ಅವರಿಗೆ ತುಂಬಾ ಪ್ರೋತ್ಸಾಹ ನೀಡಿದ್ದರಂತೆ. ಈ ನಡುವೆ ಬೇರೆ ಬೇರೆ ಚಾನಲ್ ಗಳಿಂದ ಆಫರ್ ಬಂದರೂ ಅತ್ತ ಹೋಗಿರಲಿಲ್ಲ.
ನಾಪ್ತೋಲ್ ಕನ್ನಡ (naaptol kannada) ದಿಂದ 2015ರಲ್ಲಿ ಒಂದೊಳ್ಳೆ ಆಫರ್ ಬಂದಾಗ ಅನಿವಾರ್ಯವಾಗಿ ಉದಯ ಬಳಗ ಬಿಟ್ಟು ಆಹ್ವಾನ ನೀಡಿದ ಸಂಸ್ಥೆಗೆ ಹೋದ್ರು.


‘ಸುದ್ದಿವಾಹಿನಿ ಹಾಗೂ ನಾಪ್ತೋಲ್  ಕಾರ್ಪೋರೇಟ್ ಚಾನಲ್ ಗೂ ಅಜಗಜಾಂತರ ವ್ಯತ್ಯಾಸವಿದೆ. ಮುಂಬೈಯಲ್ಲಿ ಕೆಲಸ. ಬೇರೆ ಬೇರೆ ಭಾಷೆಯ ಸಹೋದ್ಯೋಗಿಗಳೊಂದಿಗೆ ಒಡನಾಟ, ಏನೋ ಒಂಥರಾ ಖುಷಿ ತಂದಿದೆ’ ಎನ್ನುತ್ತಾರೆ ವೆಂಕಟೇಶ್.
ಮೊದಲ ದಿನ ಉದಯದಲ್ಲಿ ನ್ಯೂಸ್ ಓದಿದ್ದು, ಮಗಳು ಹುಟ್ಟಿದ ಕ್ಷಣ ವೆಂಕಟೇಶ್ ಅವರಿಗೆ ತುಂಬಾ ಖುಷಿ ಕೊಟ್ಟಿದೆಯಂತೆ. ಮಗಳು ತನ್ನ ಪಾಲಿನ ಅದೃಷ್ಟ ದೇವತೆ ಎನ್ನುವ ವೆಂಕಟೇಶ್ ತನ್ನ ಯಶಸ್ಸಿಗೆ ಸ್ನೇಹಿತೆಯಾಗಿ ಜೊತೆಗಿರೋ ಪತ್ನಿ ರೋಹಿಣಿ ಅವರು ನೀಡೋ ಪ್ರೋತ್ಸಾಹವನ್ನು ನೆನೆಯುತ್ತಾರೆ.


ರೋಹಿಣಿ ಅವರೂ ಸಹ ಉದಯ, ಜನಶ್ರೀ ಚಾನಲ್ ಗಳಲ್ಲಿ ನಿರೂಪಕಿಯಾಗಿದ್ದವರು. ಸದ್ಯ ತಾಯ್ತನದ ಸಂತೋಷದ ಕ್ಷಣಗಳನ್ನು ಅನುಭವಿಸುತ್ತಾ ಪುಟ್ಟ ಮಗಳ ಪಾಲನೆ ಪೋಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದಲ್ಲೇ ಮತ್ತೆ ಸುದ್ದಿವಾಹಿನಿ ಕಡೆಗೆ ಬರ್ತಾರೆ.
ವೆಂಕಟೇಶ್ ಅವರು ‘ಪಂಚಾಯ್ತಿ ಕಟ್ಟೆ’ ಎಂಬ ಮಾಸಪತ್ರಿಕೆಯ ಸಂಸ್ಥಾಪಕರು ಸಹ ಹೌದು. ಅವರೂರು ಉಳ್ತೂರು ಸುತ್ತಮುತ್ತಲಿನ ಹತ್ತು ಹದಿನೈದು ಊರುಗಳನ್ನು ಕೇಂದ್ರೀಕರಿಸಿರೋ ಪತ್ರಿಕೆ ಇದು. ಊರಿನ ಸಮಸ್ಯೆಗಳಿಗೆ ದನಿ ಆಗ್ಬೇಕು, ಜನರಲ್ಲಿ ಓದುವ ಅಭಿರುಚಿ ಮೂಡಿಸಬೇಕು ಎಂಬ ಉದ್ದೇಶದಿಂದ ಸುಮಾರು ಸಾವಿರ ಸಾವಿರ ಪತ್ರಿಗಳನ್ನು ಉಚಿತವಾಗಿ ಹಂಚುತ್ತಿದ್ದಾರೆ. ಸಹೋದರ ರಮೇಶ್ ಊರಿನಲ್ಲಿದ್ದು ಕೊಂಡು ಪತ್ರಿಕೆಯನ್ನು, ಸುದ್ದಿ ಸಂಗ್ರಹದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ವೆಂಕಟೇಶ್ ಅವರು ಮುಂಬೈ/ ಬೆಂಗಳೂರಲ್ಲಿ ಕುಳಿತೇ ಪತ್ರಿಕೆಯ ಸಂಪಾದಕತ್ವದ ಹೊಣೆ ನಿಭಾಯಿಸುತ್ತಿದ್ದಾರೆ.

ಲೀವ್ ಸಿಂಪಲ್ ಥಿಂಕ್ ಗ್ಲೋಬಲ್ ಅನ್ನೋದು ಇವರ ಪಾಲಿಸಿ. ಫೇಸ್ ಬುಕ್, ಟ್ವೀಟರ್ ನಲ್ಲಿ ಮಾತ್ರ ಜಗಳಗಂಟರು..! ಸ್ಟ್ರಾಂಟ್ ಫಿಲ್ಟರ್ ಕಾಫಿ, ಅಪ್ಪೆಮಿಡಿ ಉಪ್ಪಿನಕಾಯಿ, ತಿರುಪತಿ ಲಡ್ಡು ಇವರಿಗಿಷ್ಟ. ಯಕ್ಷಗಾನದ ದೊಡ್ಡ ಅಭಿಮಾನಿ. ಅಹಂಕಾರ ಇಲ್ಲದ ಈ ಸ್ನೇಹಜೀವಿಗೆ ಒಳ್ಳೇದಾಗ್ಲಿ.

 

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...