ಸುಣ್ಣದ ಡಬ್ಬಿ 9 ತಿಂಗಳ ಮಗುವಿನ ಜೀವ ತೆಗೆದಿದೆ..! ವಿಜಯಪುರದ ತಿಕೋಟಿ ಪಟ್ಟಣದ ನಿವಾಸಿ ವಿಶ್ವನಾಥ ತಾಳಿಕೋಟೆ ಎಂಬುವವರ ಮಗು ಮೃತ ದುರ್ದೈವಿ.
ಮಗು ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಸುಣ್ಣದ ಡಬ್ಬಿಯನ್ನು ನುಂಗಿದ್ದು, ಇದನ್ನು ಗಮನಿಸಿದ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರು. ವೈದ್ಯರು ಸುಣ್ಣದ ಡಬ್ಬಿ ಹೊರಗೆ ತೆಗೆಯುವಲ್ಲಿ ಯಶಸ್ವಿಯಾದರೂ ಸಹ ಮಗು ಅದಕ್ಕೂ ಮೊದಲೇ ಸಾವನ್ನಪ್ಪಿತು. ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.